Cancer : ಸ್ವಾಶಕೋಶ ಕ್ಯಾನ್ಸ್​ರ್​ನಿಂದ ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷರ ಕಿರಿಯ ಪುತ್ರ ಸಾವು

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್​​.ಎ

4/6/20251 min read

ದೊಡ್ಡಬಳ್ಳಾಪುರ : ಸ್ವಾಶಕೋಶ ಸಂಬಂಧಿತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪಿಎಲ್​ಡಿ ಬ್ಯಾಂಕ್ ನ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ ರವರ ಕಿರಿಯ ಪುತ್ರ ಸುನೀಲ್ ಅವರು ಇಂದು ಅಕಾಲಿಕ ಮರಣ ಹೊಂದಿದ್ದಾರೆ. ಕ್ಯಾನ್ಸರ್ ಕೊನೆಯ ಹಂತದಲ್ಲಿ ಬಳಲುತ್ತಿದ್ದ ಅವರು ನಗರದ ಹೊರವಲಯದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಸುನೀಲ್ ಅವರ ಅಕಾಲಿಕ ಮರಣಕ್ಕೆ ಶಾಸಕ ಧೀರಜ್ ಮುನಿರಾಜ್ ಅವರು ವಿಷಾಧ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ. ದೇವರು ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ನಾಳೆ ನಡೆಯಬೇಕಿದ್ದ ಬಿಜೆಪಿ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ಬೆಂ.ಗ್ರಾಂ. ಜಿಲ್ಲಾ ಪ್ರಧಾನಕಾರ್ಯದರ್ಶಿ ತಿಳಿಸಿದ್ದಾರೆ.

ಹಿರಿಯ ರಾಜಕಾರಣಿ ಲಕ್ಷ್ಮೀನಾರಾಯಣ ಅವರ ಪುತ್ರ ನವೀನ್​ ಅಕಾಲಿಕ ಮರಣಕ್ಕೆ ತಾಲ್ಲೂಕಿನ ಜನತೆ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ಬಿಜೆಪಿ, ಕಾಂಗ್ರೆಸ್​ ನ ಹಿರಿಯ ಮುಖಂಡರುಗಳು, ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ