ಕರುನಾಡ ರೈತ ಸಂಘ: ಚಿಕ್ಕಬಳ್ಳಾಪುರ ಘಟಕದ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಪ್ರಮಾಣ ಪತ್ರ ವಿತರಣೆ.
ಸ್ಥಳೀಯ ಸುದ್ದಿ


ಕೆಆರ್ ಪುರ : ಇತ್ತೀಚಿನ ದಿನಗಳಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರಗಳು ತಮ್ಮ ಕುರ್ಚಿ ಉಳಿವಿಗೆ ಹರಸಾಹಸ ಪಡುತ್ತಿವುದು ರಾಜ್ಯದ ದುಸ್ಥಿತಿಯೇ ಸರಿ ಎಂದು ಕರುನಾಡ ರೈತ ಸಂಘದ ರಾಜ್ಯಾಧ್ಯಕ್ಷ ಡಾ. ಮೆಹಬೂಬ್ ಪಾಷಾ ಅವರು ಅಭಿಪ್ರಾಯಪಟ್ಟರು .
ಇಲ್ಲಿನ ದೇವಸಂದ್ರದ ಕರುನಾಡ ರೈತ ಸಂಘ ಕೇಂದ್ರ ಕಚೇರಿಯಲ್ಲಿ ಚಿಕ್ಕಬಳ್ಳಾಪುರ ಘಟಕಕ್ಕೆ ನೂತನವಾಗಿ ಜಿಲ್ಲಾಧ್ಯಕ್ಷರಾಗಿ ಗಗನ್ , ಉಪಾಧ್ಯಕ್ಷರಾಗಿ ಶ್ರೇಯಸ್ ಅವರನ್ನು ಆಯ್ಕೆ ಮಾಡಿ ಪ್ರಮಾಣ ಪತ್ರ ವಿತರಿಸಿ ಬಳಿಕ ಮಾತನಾಡಿದವರು
ರೈತರಿಗೆ ಸಿಗಬೇಕಾದ ಸಾಧಾರಣ ಸೌಲಭ್ಯಗಳನ್ನು ಪಡೆದುಕೊಳ್ಳಲು ಹೋರಾಟಕ್ಕೆ ಮುಂದಾಗುವ ವ್ಯವಸ್ಥೆ ಇದೆ . ಇಂತವುಗಳ ಮಧ್ಯೆ ಕರುನಾಡ ರೈತ ಸಂಘ , ರೈತರ ಪರವಾಗಿ ಹಲವು ಹೋರಾಟಗಳನ್ನು ಮಾಡಿ ರೈತರಿಗೆ ನ್ಯಾಯ ಕೊಡಿಸುವ ದಿಕ್ಕಿನಲ್ಲಿ ಸಾಗಿ ಗಿಡದಿಂದ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಮರಕ್ಕೆ ಮತ್ತಷ್ಟು ಬಲ ತುಂಬಲು ಚಿಕ್ಕಬಳ್ಳಾಪುರದ ಗಗನ್ ಹಾಗೂ ಶ್ರೇಯಸ್ ಅವರು ಜೊತೆಯಾಗಿ ನಿಂತಿದ್ದಾರೆ ಎಂದು ತಿಳಿಸಿದರು .
ಚಿಕ್ಕಬಳ್ಳಾಪುರ ಭಾಗದಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ತಿಳಿಸಲು ಯಾವ ಸಮಯದಲ್ಲೂ ಬೇಕಾದರೂ ನಮ್ಮ ಸಂಘಟನೆಯನ್ನು ಸಂಪರ್ಕಿಸಬಹುದು , ನಮ್ಮ ಸಂಘದ ಸೈನ್ಯವನ್ನು ಸಜ್ಜುಪಡಿಸಿದ್ದೇವೆ ಅಧಿಕಾರಿಗಳಿಂದಾಗಲಿ ಇತರೆ ದಲ್ಲಾಳಿಗಳಿಂದಾಗಲಿ ನಿಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ರಾಜ್ಯ ಉಪಾಧ್ಯಕ್ಷ ರಮೇಶ್ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಕಿಶೋರ್ , ವೈಧ್ಯಕೀಯ ಘಟಕದ ಅಧ್ಯಕ್ಷ ಮುಬಾರಕ್ , ಬೆಂಗಳೂರು ನಗರ ಉಪಾಧ್ಯಕ್ಷ ಶಬೀರ್ ಅಹ್ಮದ್ , ಪ್ರಭು ಸೇರಿದಂತೆ ಸ್ಥಳೀಯರಾದ ಮಧು ಇದ್ದರು.