ಸಂತ ಅಂತೋಣಿಯವರ ದೇವಲಯದಲ್ಲಿ ಕ್ರಿಸ್ಮಸ್ ಕ್ರಿಸ್ತೋತ್ಸವ 2025 ಆಚರಣೆ.
ಸ್ಥಳೀಯ ಸುದ್ದಿ


ಕೆ.ಆರ್.ಪುರ:ಕ್ರಿಸ್ಮಸ್ ಹಬ್ಬದ ಅಂಗವಾಗಿ ಕೆ.ಆರ್.ಪುರ ಕ್ಷೇತ್ರದ ಟಿಸಿಪಾಳ್ಯದ ಅಂತೋಣಿ ದೇವಾಲಯದಲ್ಲಿ ಕ್ರಿಸ್ತೋತ್ಸವವನ್ನು ಅದ್ದೂರಿಯಾಗಿ ಆಯೋಜನೆ ಮಾಡಲಾಗಿದೆ.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಂತ ಅಂತೋಣಿಯವರ ಚರ್ಚ್ ನ ಕ್ರೈಸ್ತ ಧರ್ಮ ಗುರು ಸಿ .ಫ್ರಾನ್ಸಿಸ್ ಮಾತನಾಡಿದ ಅವರು ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದ ಯೇಸುಕ್ರಿಸ್ತ ನಮ್ಮಲ್ಲರಿಗೂ ಮಾದರಿ, ಕ್ರೈಸ್ತರಿಗೆ ಮಾತ್ರವಲ್ಲದೆ ಕ್ರೈಸ್ತೇತ್ತರರಿಗೂ ಪ್ರೇರಣೆ, ಮಾನವ ಧರ್ಮ ಒಂದೇ ಎಂದು ಸಾರುವ ಅವರ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿಕೊಟ್ಟರು.
ಪ್ರತಿವರ್ಷದಂತೆ ಈ ವರ್ಷವು ಅದ್ದೂರಿಯಾಗಿ ಕ್ರಿಸ್ಮಸ್ ಹಬ್ಬದ ಆಚರಣೆ ಮಾಡಲಾಗುತ್ತಿದೆ,ಏಸು ಕ್ರೀಸ್ತ ಸಮಸ್ತ ಪ್ರಂಪಚಕ್ಕೆ ಒಳಿತು ಮಾಡಲಿ ಎಂದು ಪ್ರಾರ್ಥನೆ ಮಾಡಲಾಗಿದೆ ಎಂದು ನುಡಿದರು.
ಸಮಾಜ ಸೇವಕ ಪ್ರವೀಣ್ ರೆಡ್ಡಿ ಅವರ ನೇತೃತ್ವದಲ್ಲಿ ಸ್ತಬ್ಧ ಚಿತ್ರಗಳ ಮೆರವಣಿಗೆ ಅದ್ದೂರಿಯಾಗಿ ನೇರವೇರಿದೆ ಎಂದು ತಿಳಿಸಿದರು. ಟಿಸಿಪಾಳ್ಯ,ಆನಂದಪುರ ಗ್ರಾಮಸ್ಥರ ಸಹಕಾರದೊಂದಿಗೆ ಉತ್ಸವ ಅದ್ದೂರಿಯಾಗಿ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಟಿಸಿ ಪಾಳ್ಯದ ಸಂತ ಅಂತೋಣಿ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬದ ಹಿನ್ನೆಲೆ ಕ್ರಿಸ್ತ್ಯೋತ್ಸವ ಅಂಗವಾಗಿ,ಸಂತ ಅಂತೋಣಿಯವರ ದೇವಲಯದದಿಂದ ಆನಂದಪುರ ಸರ್ಕಲ್ ನವರೆಗೆ ವಿವಿಧ ಸ್ಥಬ್ಧ ಚಿತ್ರಗಳ ಮೆರವಣಿಗೆ ನಡೆಯಿತು. ಸ್ಥಬ್ಧ ಚಿತ್ರಗಳ ಜೊತೆಗೆ ನೂರಾರು ಕ್ರೈಸ್ತ ಸಮುದಾಯದವರು ಯೇಸುಕ್ರಿಸ್ತನ ಜಪ ಮಾಡುತ್ತಾ, ನೃತ್ಯ ನಾದಗಳ ಜೊತೆ ಹಾಡುಗಳು ಹಾಡುತ್ತಾ ಸಾಗಿದರು. ಚರ್ಚ್ ನ ಆವರಣದಲ್ಲಿ ಭಕ್ತಿಗೀತೆಗಳ ಸಂಗೀತ ರಸಮಂಜರಿ ಮನ ಮುಟ್ಟಿದೆ .
ಮುಖ್ಯ ಅತಿಥಿಗಳಾದ ಎಸಿಪಿ ರೀಣಾ ಸುವರ್ಣ,ಉಮಾಶಂಕರ್ ,ಸಮಾಜ ಸೇವಕ ಪ್ರವೀಣ್ ರೆಡ್ಡಿ, ಮಾಜಿ ಪಾಲಿಕೆ ಸದಸ್ಯ ಅಂತೋಣಿ ಸ್ವಾಮಿ,ಅರಳಪ್ಪ,ಬಾಸ್ಕೋ,ಅಂತೋಣಿ ರಾಜ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು