500ರೂ ನೋಟ್ ಅಮಾನ್ಯಗೊಳಿಸುವಂತೆ ಕೇಂದ್ರಕ್ಕೆ ಆಂದ್ರ ಸಿಎಂ ಚಂದ್ರಬಾಬು ನಾಯ್ಡು ಆಗ್ರಹ.

ದೇಶ/ವಿದೇಶ

ಧರ್ಮ ಬಸವನಪುರ.

5/28/20251 min read

ಆಂಧ್ರ ಪ್ರದೇಶ : ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಮಾಡಿ ಎಷ್ಟೋ ಜನಕ್ಕೆ ಕಂಟಕವಾಗಿ ಪರಿಣಮಿಸಿತು. ಭ್ರಷ್ಟಾಚಾರಿಗಳು ಕೇಂದ್ರ ಸರ್ಕಾರ ವಿರುದ್ದ ಹಿಡಿಶಾಪ ಹಾಕಿದರು. ಈಗ ಮತ್ತೊಮ್ಮೆ ನೋಟು ವಾಪಸ್ ಪಡೆಯುವಂತೆ ಸಿಎಂ ಚಂದ್ರಬಾಬು ನಾಯ್ಡು ಆಗ್ರಹಿಸಿದ್ದಾರೆ.

ಟಿಡಿಪಿ ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, 500 ರೂ ಮುಖಬೆಲೆಯ ನೋಟುಗಳನ್ನು ಕೇಂದ್ರ ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಡಿಜಿಟಲ್ ಪೇಮೆಂಟ್ ಹೆಚ್ಚುತ್ತಿದ್ದು, ಹೆಚ್ಚು ಮೌಲ್ಯದ ಕರೆನ್ಸಿ ನೋಟಿಗಳಿಂದ ಬ್ಲಾಕ್ ಮನಿ ಹೆಚ್ಚುತ್ತದೆ. ಹೀಗಾಗಿ ಕೂಡಲೇ 500ರೂ ಮುಖ ಬೆಲೆಯ ನೋಟುಗಳನ್ನು ವಾಪಸ್ ಮಾಡಿ ಹೊಸ ನೋಟು ಬಿಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.

ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಭ್ರಷ್ಟಾಚಾರದ ಮೇಲೆ ನಿಗಹಿಸಬೇಕಾಗಿದೆ ಎಂದರು. ಹೊಸದಾಗಿ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಸಾರ್ವಜನಿಕ ವಹಿವಾಟಿಗೆ ನೀಡುವಂತೆ ಕೋರಿದ್ದಾರೆ.