ಭೀಮಾಬಾಯಿ ಲಿಂಬಾವಳಿ ಪುಣ್ಯಸ್ಮರಣೆ. ನಾಡಿನ 50ಕ್ಕೂ ಅಧಿಕ ಸ್ವಾಮೀಜಿಗಳಿಗೆ ಪಾದಪೂಜೆ.

ಸ್ಥಳೀಯ ಸುದ್ದಿಜಿಲ್ಲಾ ಸುದ್ದಿ

ಧರ್ಮ ಬಸವನಪುರ.

8/23/20251 min read

ಮಹದೇವಪುರ: ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಬಾಗಲಕೋಟೆಯ ಸ್ವಗೃಹದಲ್ಲಿ ಅವರ ತಾಯಿ ಭೀಮಾಬಾಯಿ ವೆಂಕಟರಾವ್ ಲಿಂಬಾವಳಿ ಅವರ ವೈಕುಂಠ ಸಮಾರಾಧನೆ ನೇರವೇರಿತು.

ಆ.11ರಂದು ಭೀಮಾಬಾಯಿ ವೆಂಕಟರಾವ್ ಲಿಂಬಾವಳಿ ಅವರು ದೈವಾಧೀನರಾಗಿದ್ದು ಮೃತರ ಸದ್ಧತಿಗಾಗಿ ಆ.20ರಂದು ಪಿತೃ ಕಾರ್ಯ ಹಾಗೂ 21ರಂದು ವೈಕುಂಠ ಸಮಾರಾಧನೆಯು ನೆರವೇರಿತು.

ಭೋವಿ ಗುರುಪೀಠದ ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ 50ಕ್ಕೂ ಅಧಿಕ ಸ್ವಾಮೀಜಿಗಳಿಗೆ ಪಾದಪೂಜೆ ನೆರವೇರಿಸಲಾಯಿತು. ಧಾರ್ಮಿಕ ವಿಧಿ-ವಿಧಾನದ ಪ್ರಕಾರ ಪುಣ್ಯಸ್ಮರಣೆ ಜರುಗಿತು.

ಪುಣ್ಯಸ್ಮರಣೆಯಲ್ಲಿ ರಾಜಕೀಯ ಗಣ್ಯರಾದ ರಮೇಶ ಜಾರಕಿಹೊಳಿ, ಪ್ರತಾಪ ಸಿಂಹ, ತಿಪ್ಪೇಸ್ವಾಮಿ ಇತರರು ಪಾಲ್ಗೊಂಡಿದ್ದರು. ಭೀಮಾಬಾಯಿ ಅವರ ಪುತ್ರರಾದ ಮಾಜಿ ಸಚಿವ ಅರವಿಂದ ಲಿಂಬಾವಳಿ, ಅಶೋಕ ಲಿಂಬಾವಳಿ, ವಿಜಯಕುಮಾರ ಲಿಂಬಾವಳಿ, ಸುರೇಶ ಲಿಂಬಾವಳಿ, ಭೀಮರಾವ(ರಾಜು) ಲಿಂಬಾವಳಿ, ಪುತ್ರಿಯರಾದ ಪಾರ್ವತಿ ಪೂಜಾರ, ಲಕ್ಷ್ಮೀ(ತಾರಾ) ಅವರು ಕಾರ್ಯಗಳನ್ನು ನೆರವೇರಿಸಿದರು.

ವೇಮನ ಮಠ ರೆಡ್ಡಿ ಗುರುಪೀಠದ ಜಗದ್ಗುರು ಶ್ರೀ ವೇಮನಾನಂದ ಸ್ವಾಮೀಜಿ, ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಶ್ರೀ ಜಗದ್ಗುರು ಅಖಿಲ ಕುಂಚಿಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು, ಶ್ರೀ ಶಿವಶರಣ ಮಾದರ ಚೆನ್ನಯ್ಯ ಗುರುಪೀಠದ ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು, ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು, ಭಗೀರಥ ಗುರುಪೀಠದ ಜಗದ್ಗುರು ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು, ಶ್ರೀ ಯಾದವ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಕೃಷ್ಣ, ಯಾದವಾನಂದ ಮಹಾಸ್ವಾಮಿಗಳು ಮುಂತಾದ ಹಲವಾರು ಶ್ರೀಗಳು ಹಾಗೂ ಗಣ್ಯರು ಭಾಗವಹಿಸಿದ್ದರು.