ಕಾಂಗ್ರೆಸ್ ಸಮನ್ವಯ ಸಭೆ:ಪಕ್ಷ ಸಂಘಟನೆಯಗೆ ಮುಖಂಡರ ಕರೆ.
ರಾಜಕೀಯಸ್ಥಳೀಯ ಸುದ್ದಿ


ಮಹದೇವಪುರ: ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ವ್ಯಕ್ತಿ ಪೂಜೆಯನ್ನು ಬಿಟ್ಟು ಪಕ್ಷದ ಪೂಜೆಯನ್ನು ಮಾಡುವಂತೆ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿಖಾನ್ ಮುಖಂಡರಿಗೆ ಕರೆ ನೀಡಿದರು.
ಕ್ಷೇತ್ರದ ವರ್ತೂರು ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪೂರ್ವ ನಗರ ಪಾಲಿಕೆಯ ಚುನಾವಣಾ ಪೂರ್ವಭಾವಿ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹದೇವಪುರ ಕ್ಷೇತ್ರವು ಮತಗಳ್ಳತನದಲ್ಲಿ ದೇಶದ್ಯಾಂತ ಹೆಸರಾಗಿದ್ದು ಪ್ರತಿ ಬೂತ್ ನಲ್ಲಿ ಬಿಎಲ್‌ಎ ಗಳನ್ನು ನೇಮಿಸಿ ನಕಲಿ ಮತಗಳನ್ನು ತೆಗೆಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ವಿಧಾನ ಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದ್ದು ಜಿಬಿಎ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕೆಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ನಾಯಕರ ಹಿಂಬಾಲಿಸದೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟನೆಯ ಮಾಡಬೇಕೆಂದು ತಿಳಿಸಿದರು.
ಯಾವುದೇಗುಂಪು ರಾಜಕಾರಣ ಮಾಡದೇ ಪಕ್ಷಕ್ಕಾಗಿ ಪ್ರತಿಯೊಬ್ಬರು ದುಡಿದು ಪೂರ್ವ ಪಾಲಿಕೆಯನ್ನು ಕಾಂಗ್ರೆಸ್ ವಶ ಮಾಡಿಕೊಳ್ಳಲು ಶ್ರಮಿಸಬೇಕೆಂದು ತಿಳಿಸಿದರು.
ಮಾಜಿ ಸಚಿವ ಹೆಚ್.ನಾಗೇಶ್ ಮಾತನಾಡಿ, ಪಕ್ಷದಲ್ಲಿ ಕೆಲ ದಿನಗಳಿಂದ ಗೊಂದಲವಿತ್ತು ಮಾಜಿ ಪಾಲಿಕೆ ಸದಸ್ಯ ಎಸ್.ಉದಯ್ ಕುಮಾರ್ ಸೇರಿದಂತೆ ಕೆಲ ನಾಯಕರು ಅಸಮಾಧಾನ ಗೊಂಡಿದ್ದರು. ಇಂದು ಎಲ್ಲಾ ಗೊಂದಲಗಳಿಗೆ ತೆರೆ ಎಲೆದಿದ್ದು ಎಲ್ಲರೂ ಒಗ್ಗೂಡಿ ಪಕ್ಷವನ್ನು ಕಟ್ಟುವುದಾಗಿ ತಿಳಿಸಿದರು. ಜಿಬಿಎ ಚುನಾವಣೆಯ ಎದುರಿಸಲು ಹೈ ಪವರ್ ಕಮಿಟಿಯನ್ನು ರಚಿಸುವುದಾಗಿ ತಿಳಿಸಿದರು.
ಪಾಲಿಕೆ ಮಾಜಿ ಸದಸ್ಯ ಉದಯ್ ಕುಮಾರ್ ಮಾತನಾಡಿ, ಬಿಜೆಪಿ ಬೆಂಬಲಕ್ಕೆ ಆರ್ ಎಸ್ ಎಸ್. ಬಜರಂಗದಳ ನಿಂತು ಕೆಲಸ ಮಾಎಉತ್ತಿದೆ. ಬೇರು ಮಟ್ಟದಿಂದ ಕೆಲಸ ಮಾಡಿ ಭದ್ರ ಬುನಾದಿ ಹಾಕಿಕೊಂಡಿದೆ. ಮನಸ್ತಾಪಗಳಿದ್ದರೆ ಮರೆತು ಒಗ್ಗಟ್ಟಾಗಿ, ನೂತನ ಜಿಲ್ಲಾಧ್ಯಕ್ಷ ಡಿ.ಕೆ.ಮೋಹನ್ ರವರು ಮಹದೇವಪುರ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಸಂಘಟನೆ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧ್ಯಕ್ಷ ಡಿ.ಕೆ.ಮೋಹನ್, ಹಾಗೂ ಬೆಂಗಳೂರು ಪೂರ್ವ ಜಿಲ್ಲಾ ಓಬಿಸಿ ಅಧ್ಯಕ್ಷ ಕುಪ್ಪಿಮಂಜುನಾಥ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಪ್ರಧಾನಕಾರ್ಯದರ್ಶಿ ನಲ್ಲೂರಹಳ್ಳಿ ನಾಗೇಶ್, ಬಿದರಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾರಾಯಣಸ್ವಾಮಿ, ಕೆಪಿಸಿಸಿ ಸದಸ್ಯರಾದ ಜಯರಾಮರೆಡ್ಡಿ, ರಾಜ್ಯ ಒಬಿಸಿ ಪ್ರಧಾನಕಾರ್ಯದರ್ಶಿ ಬೆಳತೂರು ರಮೇಶ್, ಒಬಿಸಿ ಪೂರ್ವ ಜಿಲ್ಲಾಧ್ಯಕ್ಷ ಕುಪ್ಪಿ ಮಂಜುನಾಥ್, ಮುಖಂಡರಾದ ಬಾಬುಗೌಡ, ವಿಟಿಬಿ ಬಾಬು, ರಾಮಕೃಷ್ಣಪ್ಪ, ವರ್ತೂರು ಸುನೀಲ್, ಸಿ.ಎಂ. ಚಂದ್ರಶೇಖರ್, ಮಧುರನಗರ ನಾಗೇಶ್, ಸುರೇಶ್ ವಾರ್ಡ್ ಅಧ್ಯಕ್ಷರಾದ ಗರುಡಾಚಾರ್ ಪಾಳ್ಯ ಪ್ರಶಾಂತ್, ಮುನಿರಾಜು ಸೇರಿದಂತೆ ಮತ್ತಿತ್ತರರು ಇದ್ದರು.