ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷರಾಗಿ ಡಿ.ಕೆ.ಮೋಹನ್ ನೇಮಕ.
ಸ್ಥಳೀಯ ಸುದ್ದಿ


ಕೆ.ಆರ್.ಪುರ:ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷರಾಗಿ ನೇಮಕವಾದ ಡಿ.ಕೆ.ಮೋಹನ್ ಅವರನ್ನು ಜಯಂತಿನಗರ ಮುನಿರಾಜು ಸೇರಿದಂತೆ ಮುಖಂಡರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ನೂತನ ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷರಾಗಿ ನೇಮಕವಾದ ಡಿ.ಕೆ.ಮೋಹನ್ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ರಾಜ್ಯಸರ್ಕಾರ ಒತ್ತು ನೀಡಿದ್ದು,ಗ್ರೇಟರ್ ಬೆಂಗಳೂರಿನ ಪಾಲಿಕೆ ಚುನಾವಣೆಗೆ ಸಿದ್ದತೆ ನಡೆಯುತ್ತಿದೆ.ಈ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಸಕ್ರಿಯ ಗೊಳಿಸಲು ಶ್ರಮಿಸುವುದಾಗಿ ತಿಳಿಸಿದರು.
ಕ್ಷೇತ್ರದ ದೇವಸಂದ್ರದಲ್ಲಿ ನೂತನವಾಗಿ ಈಗಾಗಲೇ ವಾರ್ಡಗಳ ವಿಂಗಡಣೆಯಾಗಿದ್ದು,ಲೋಪದೋಷಗಳ ಸರಿಪಡಿಸುವ ಕಾರ್ಯ ಮಾಡಲಾಗುತ್ತಿದೆ,ಇದಾದ ನಂತರ ಚುನಾವಣೆಗೆ ವೇಗ ದೊರೆಯಲಿದೆ ಎಂದರು.
ನ್ಯಾಯಾಲಯ ಹಾಗೂ ಕೇಂದ್ರ ಸರ್ಕಾರ ಸಹ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸೂಚನೆ ನೀಡಿದ್ದು,ಸ್ಥಳೀಯ ಸಂಸ್ಥೆಗಳಿಂದ ಅಭಿವೃದ್ಧಿಯಾಗಲಿದೆ ಹೇಳಿದರು.
ಈ ಸಂದರ್ಭದಲ್ಲಿ ಭೂ ನ್ಯಾಯಮಂಡಳಿ ಸದಸ್ಯ ಸಿ.ವೆಂಕಟೇಶ್, ಮುಖಂಡರಾದ ಅಗರ ಪ್ರಕಾಶ್,ಜಯಂತಿನಗರ ಮುನಿರಾಜು, ಗಂಗಧರ ರೆಡ್ಡಿ, ರಾಮ್ ಸುರೇಶ್, ಪುರುಷೋತ್ತಮ್, ಸಬಾಷ್ಟೀನ್,ನಂಜಪ್ಪ,ಇದ್ದರು.