Congress Fight : ಮಹದೇವಪುರ ಕಾಂಗ್ರೆಸ್ಸಿನಲ್ಲಿ ಬಣ ರಾಜಕೀಯ ಸ್ಪೋಟ. ಸಭೆಯಲ್ಲಿ ಎಚ್.ನಾಗೇಶ್ ವಿರುದ್ಧ ಧಿಕ್ಕಾರ ಕೂಗಿದ ಮೂಲ ಕಾಂಗ್ರೆಸ್ಸಿಗರು.

ಸ್ಥಳೀಯ ಸುದ್ದಿರಾಜಕೀಯ

ಧರ್ಮ ಬಸವನಪುರ

4/9/20251 min read

ಮಹದೇವಪುರ: ರಾಜ್ಯ ಕಾಂಗ್ರೆಸ್ ನಂತೆ ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ನಲ್ಲೂ ಬಣ ರಾಜಕೀಯ ಹೆಚ್ಚಾಗಿದೆ, ಮಾಜಿ ಸಚಿವ ಹೆಚ್ ನಾಗೇಶ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿದಂತಹ ಘಟನೆ ಇಂದು ನಡೆದಿದ್ದು ಎಚ್.ನಾಗೇಶ್ ಅವರಿಗೆ ತೀವ್ರ ಮುಖಭಂಗ ಆಗಿದೆ. ಈ ಸನ್ನಿವೇಶದಿಂದ ವೇದಿಕೆ ಮೇಲೆ ಕುಳಿತಿದ್ದ ಗಣ್ಯರಿಗೂ ಮುಜುಗರ ಉಂಟಾಗಿದೆ.

ಮಾರತ್ತಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜನೆ ಮಾಡಿದ ಮಾರತಹಳ್ಳಿ ವಾರ್ಡ್ ಸಭೆಯಲ್ಲಿ ಈ ಹೈಡ್ರಾಮಾ ನಡೆದಿದ್ದು ಸಭೆಯಲ್ಲಿ ಭಾಗಿಯಾಗಿದ್ದ ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷ ನಂದಕುಮಾರ್ ಸೇರಿ ಇತರರಿಗೂ ಮುಜುಗರ ಉಂಟಾಗಿದೆ.

2024 ರ ಲೋಕಸಭೆ ಚುನಾವಣೆ ಬಳಿಕ ಮಹದೇವಪುರ ಕಾಂಗ್ರೆಸ್ ನಲ್ಲಿ ಹಲವು ಬದಲಾವಣೆಗಳಾಗಿದ್ದು, ಮಹದೇವಪುರ ಕಾಂಗ್ರೆಸ್ನಲ್ಲಿ ಮನೆಯೊಂದು ನಾಲ್ಕು ಬಾಗಿಲು ಎಂಬಂತಾಗಿದೆ. ಮೂಲ ಕಾಂಗ್ರೆಸ್ಸಿಗರನ್ನು ತುಳಿಯುವ ಪ್ರಯತ್ನ ನಡೆದಿದೆ ಎಂದು ಒಂದು ಬಣ ಕೈ ಕಾರ್ಯಕರ್ತರು ಸಭೆಯಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರ್ಯಕ್ರಮಗಳಿಗೆ ಮೂಲ ಕಾಂಗ್ರೆಸ್ಸಿಗರಿಗೆ ಆಹ್ವಾನ ನೀಡುತ್ತಿಲ್ಲ ಎಂದು ಮತ್ತೊಂದು ಬಣದ ಆರೋಪ ಮಾಡಿದರು.

ಎಚ್.ನಾಗೇಶ್ ಅವರ ಬಣ ರಾಜಕೀಯದಿಂದ ಬೇಸತ್ತು ಮಾಜಿ ಪಾಲಿಕೆ ಸದಸ್ಯ ಎಸ್.ಉದಯ್ ಕುಮಾರ್, ಕೆಪಿಸಿಸಿ ಸದಸ್ಯ ‌ಜಯರಾಮ ರೆಡ್ಡಿ, ಮಾಜಿ ಬ್ಲಾಕ್ ಅಧ್ಯಕ್ಷರಾದ ಬಾಬು ಗೌಡ, ವಿಟಿಬಿ ಬಾಬು ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ

ಎಂಬ ಆರೋಪ ಕೇಳಿ ಬರ್ತಿದೆ . ಇತ್ತೀಚಿಗಷ್ಟೇ ವರ್ತೂರು ಬ್ಲಾಕ್ ಕಾಂಗ್ರೆಸ್ ಹಾಗೂ ಹೂಡಿ ಬ್ಲ್ಯಾಕ್ ಕಾಂಗ್ರೆಸ್ ನಲ್ಲಿ ನೂತನ ಅಧ್ಯಕ್ಷ ಹಾಗೂ ಇತರ ಸದಸ್ಯರ ನೇಮಕಾತಿಯನ್ನು ಮಾಡಲಾಯಿತು, ಅಲ್ಲಿಯೂ ಮೂಲ ಕಾಂಗ್ರೆಸ್ಸಿಗರನ್ನು ಆಹ್ವಾನ ಮಾಡಲಾಗುತ್ತಿಲ್ಲ ಇದರಿಂದ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಕುಗ್ಗಲು ಕಾರಣವಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದರು.

ಕಳೆದ ಹದಿನೈದು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಪಕ್ಷದ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಸ್ವತಃ ಹಣವನ್ನ ಖರ್ಚು ಮಾಡಿ ಸಭೆ ಸಮಾರಂಭಗಳನ್ನ ಮಾಡುತ್ತಾ ಬಂದಿದ್ದೆವೆ. ಚುನಾವಣಾ ಸಮಯಗಳಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ ಮತಗಳನ್ನ ಹಾಕಿಸಿದ್ದೇವೆ,ಬಿಜೆಪಿ-ಕಾಂಗ್ರೇಸ್ ಗಲಾಟೆಗಳಾದಗ ಕೇಸ್ ಗಳು ಹಾಕಿಸಿಕೊಂಡು ಹೋರಾಟ ಮಾಡುತ್ತಾ ಬಂದಿದ್ದೇವೆ ಆದರೆ ಇವಾಗ ಯಾರೂ ನಮ್ಮನ್ನ ವಿಶ್ವಾಸಕ್ಕೆ ತಗೆದುಕೊಳ್ಳುವುದಿಲ್ಲ, ಯಾವ ಸಭೆಗಳಿಗೆ ಕರೆಯುವುದಿಲ್ಲ ಎಂದು ಎಚ್.ನಾಗೇಶ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ