ವರ್ತೂರಿನ ಬಿಜೆಪಿ ಮುಖಂಡರಿಂದ ಸಂವಿಧಾನ ಶಿಲ್ಪ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ
ಸ್ಥಳೀಯ ಸುದ್ದಿ


ಮಹದೇವಪುರ: ಕ್ಷೇತ್ರದ ವರ್ತುರಿನ ಗಾಂಧಿ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಡಾ. ಬಿಆರ್ ಅಂಬೇಡ್ಕರ್ ಅವರ 135 ನೇ ಜಯಂತೋತ್ಸವವನ್ನು ವರ್ತೂರಿನ ಬಿಜೆಪಿ ಮುಖಂಡರು ವಿಜೃಂಭಣೆಯಿಂದ ಆಚರಣೆ ಮಾಡಿದರು.
ಎಲ್ಲಾ ಮುಖಂಡರು ಕಾರ್ಯಕರ್ತರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ಜೈ ಭೀಮ್ ಘೋಷಣೆ ಕೂಗಿದರು.ಬಳಿಕ ನೂರಾರು ಜನಕ್ಕೆ ಅನ್ನದಾನ ಮಾಡಿದರು.
ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಮೋದಿಯವರು, ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸೇರಿದ ಪಂಚ ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದಾರೆ .ಇದು ಪ್ರತಿ ಬಿಜೆಪಿ ಕಾರ್ಯಕರ್ತನಿಗೂ ಹೆಮ್ಮೆಯ ಸಂಗತಿ . ಇನ್ನೂ ಅವರು ರಚಿಸಿ ಕೊಟ್ಟ ಸಂವಿಧಾನ ಭಾರತೀಯರಾದ ನಮಗೆ ಮಹಾನ್ ಗ್ರಂಥ ಈ ದೇಶದ ಪ್ರತಿ ಪ್ರಜೆಯು ಅವರ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜಿಸಬೇಕು ಎಂದು ತಿಳಿಸಿದರು
ಅಂಬೇಡ್ಕರ್ ಅವರಿಗೆ ತಮ್ಮ ಜೀವನದಲ್ಲಿ ಆದ ಅವಮಾನ ಬೇರೆ ಯಾರಿಗೂ ಆಗಬಾರದೆಂದು ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶವನ್ನು ನೀಡಿದ್ದಾರೆ. ಇದರಿಂದಾಗಿ ಭಾರತದಲ್ಲಿ ಬಲಿಷ್ಠವಾದ ಸಂವಿಧಾನ ಇದೆ, ಇದರ ಮೂಲಕ ಎಲ್ಲರಿಗೂ ನ್ಯಾಯ ಸಿಗುವಂತ ವಾತಾವರಣ ಸೃಷ್ಟಿಯಾಗಿದೆ. ಅಂಬೇಡ್ಕರ್ ರವರ ಜೀವನದಲ್ಲಿ ಕಾಂಗ್ರೆಸ್ ಬಹಳಷ್ಟು ಅನ್ಯಾಯವನ್ನು ಮಾಡಿದೆ ಅವರು ಮರಣದಲ್ಲಿಯೂ ಸಹಾ ಕಾಂಗ್ರೆಸ್ ತಮ್ಮ ಬುದ್ದಿಯನ್ನು ತೋರಿಸಿದೆ. ಅವರ ಮೃತ ದೇಹವನ್ನು ಉಳಲು ಸಹಾ ದೆಹಲಿಯಲ್ಲಿ ಜಾಗವನ್ನು ಅಂದಿನ ಕಾಂಗ್ರೆಸ್ ಸರ್ಕಾರ ನೀಡಲಿಲ್ಲ ಇದನ್ನು ದಲಿತರಿಗೆ ತಿಳಿಸುವಂತ ಕಾರ್ಯ ಬಿಜೆಪಿ ಕಾರ್ಯಕರ್ತರಿಂದ ಆಗಬೇಕಿದೆ ದೂರಿದರು.
ಗಾಂಧಿ ವೃತ್ತದಲ್ಲಿ ಎರಡು ಪಕ್ಷದವರು ಒಂದೇ ಸ್ಥಳದಲ್ಲಿ ಅಂಬೇಡ್ಕರ್ ಅವರ ಜನ್ಮದಿನ ಆಚರಣೆ ಮಾಡಲಾಗಿದೆ.ಈ ವೃತ್ತದಲ್ಲಿ ಎಲ್ಲಾ ಮಹನೀಯರನ್ನ ಸ್ಮರಣೆ ಮಾಡಲಾಗುತ್ತೆ, ಅಕ್ಕ ಪಕ್ಕದಲ್ಲಿ ವೇದಿಕೆ ಹಾಕಿದ್ದರಿಂದ ಜನಕ್ಕೆ ಸ್ವಲ್ಪ ಗೊಂದಲ ಸೃಷ್ಟಿ ಆಯಿತು.ಈ ಘಟನೆಯಿಂದ ಮನಸ್ಸಿಗೆ ನೋವು ಉಂಟಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಇದ್ದರು.

