ಕೃಷಿ ಹೊಂಡಗಳಿಗೆ ತಂತಿ ಬೇಲಿ/ಕಾಂಪೌಂಡ್ ನಿರ್ಮಿಸುವುದು ಕಡ್ಡಾಯ

ಸ್ಥಳೀಯ ಸುದ್ದಿಜಿಲ್ಲಾ ಸುದ್ದಿ

ಧರ್ಮ ಬಸವನಪುರ.

9/3/20251 min read

ಬೆಂ.ಗ್ರಾ.ಜಿಲ್ಲೆ. : ಕೃಷಿ ಇಲಾಖೆ ವತಿಯಿಂದ ಕೃಷಿ ಭಾಗ್ಯ ಯೋಜನೆಯಡಿ ರೈತರು ಕೃಷಿ ಚಟುವಟಿಕೆಗಳಿಗೆ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದು, ಅವುಗಳಿಗೆ ತಂತಿ ಬೇಲಿ ಅಥವಾ ಕಾಂಪೌಂಡ್ ನಿರ್ಮಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ತಂತಿ ಬೇಲಿ/ಕಾಂಪೌಂಡ್ ನಿರ್ಮಾಣಕ್ಕೆ ಶೇ.25 ರಷ್ಟು ಸಹಾಯಧನ ಇಲಾಖೆಯಿಂದ ಪಾವತಿಸಲಾಗುವುದು. ರೈತರು ಅಳವಡಿಸಿರುವ ಸೂಚನಾ ಪತ್ರಕ್ಕೆ 2 ಸಾವಿರ ರೂ ಸಹಾಯಧನ ಮಂಜೂರು ಮಾಡಲಾಗುವುದು.

ಕೃಷಿ ಹೊಂಡಗಳಿಗೆ ಸುರಕ್ಷತಾ ಕ್ರಮಗಳನ್ನು ಅಳವಡಿಸುವುದು ಹೊಂಡದ ಮಾಲಿಕರ ಜವಬ್ದಾರಿಯಾಗಿರುವುದರಿಂದ ಎಲ್ಲಾ ರೈತರು ತಮ್ಮ ತಮ್ಮ ಕೃಷಿ ಹೊಂಡಗಳಿಗೆ ಪ್ರಾಣಿಗಳು, ಮನುಷ್ಯರು, ಮಕ್ಕಳು ಬೀಳದಂತೆ ಹೊಂಡದಲ್ಲಿ ಯಾವುದೇ ಅವಗಡಗಳು ಸಂಭವಿಸದಂತೆ ಜಾಗ್ರತೆಯನ್ನು ವಹಿಸಬೇಕು.

ಆದ್ದರಿಂದ ಶೀಘ್ರವಾಗಿ ಕೃಷಿ ಹೊಂಡಕ್ಕೆ ಸೂಕ್ತ ರೀತಿಯ ಸೂಚನಾ ಫಲಕ ಅಳವಡಿಸಿ ತಂತಿ ಬೇಲಿ ಅಥವಾ ಸುತ್ತಲು ಕಾಂಪೌಂಡ್ ನಿರ್ಮಾಣ ಮಾಡಿಕೊಂಡು ಜಾಗ್ರತೆವಹಿಸಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.