Credence Book Of World Record: 4ನೇ ತರಗತಿ ಬಾಲಕಿ ವಿಶ್ವದಾಖಲೆ, ಸ್ಮತಿ ಸಾಧನೆಗೆ ಮೆಚ್ಚುಗೆ
ಸ್ಥಳೀಯ ಸುದ್ದಿ


ಯಲಹಂಕ: ಒಂದು ನಿಮಿಷದಲ್ಲಿ 90 ಸೈಡ್ ಸಿಟ್ ಅಪ್ಸ್ ಮಾಡುವ ಮೂಲಕ 4ನೇ ತರಗತಿಯ ಸ್ಮೃತಿ ಎಸ್.ಎಂ ಎಂಬ ಬಾಲಕಿ ಕ್ರೆಡೆನ್ಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆಯನ್ನು ಮಾಡಿ ಜನ ಮೆಚ್ಚುಗೆ ಗಳಿಸಿದ್ದಾಳೆ.
ಮಾರ್ಚ್ 19, 2025 ರಂದು ನಡೆದ ಟೈಕೊಂಡೋ ಕ್ರೀಡಾಕೂಟದ ಭಾಗವಾಗಿ ಒಂದು ನಿಮಿಷದಲ್ಲಿ 90 ಸೈಡ್ ಸಿಟಪ್ಸ್ ಮಾಡುವ ಮೂಲಕ ಕ್ರೆಡೆನ್ಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ್ದು, ಇದೀಗ ಕ್ರೆಡೆನ್ಸ್ ಸಂಸ್ಥೆಯು ಬಾಲಕಿಯ ಸಾಧನೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
ನೆಲಮಂಗಲ ಮೂಲದ ಸಿದ್ದ ಮುನಿಯಪ್ಪ ಮತ್ತು ಮಂಜುಳ ದಂಪತಿಯ ಮಗಳಾದ ಸ್ಮೃತಿ, ಯಲಹಂಕದ ಸಿಆರ್ಪಿಎಫ್ ಕೇಂದ್ರೀಯ ವಿದ್ಯಾಲಯದಲ್ಲಿ 4ನೇ ತರಗತಿ ಓದುತ್ತಿದ್ದು ಟೈಕೊಂಡೋ ತರಬೇತುದಾರ ಡಾ.ಕೃಷ್ಣ ಚೈತನ್ಯ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ವಿಶ್ವದಾಖಲೆ ನಿರ್ಮಿಸಿದ್ದಾರೆ.
ಸ್ಮೃತಿ ಈ ಸಾಧನೆಗೆ ಪೋಷಕರು, ತರಬೇತುದಾರರು ಸೇರಿದಂತೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

