CRPF ನಿಂದ AIPSCBT-20 ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ, ಡಿಐಜಿ ಪದ್ಮ ಕುಮಾರ್, ಮಿಥುನ್ ಕುಮಾರ್ ರಿಂದ ಲೋಗೋ ಅನಾವರಣ


ಬೆಂಗಳೂರು: ಯಲಹಂಕ ಮುಖ್ಯ ರಸ್ತೆಯಲ್ಲಿರುವ CRPF ಪೋಲೀಸ್ ತರಬೇತಿ ಕೇಂದ್ರದ ಸಭಾಂಗಣದಲ್ಲಿ AIPSCBT-20 ಕ್ರಿಕೆಟ್ ಟೂರ್ನಮೆಂಟ್‌ನ ಲೋಗೋ ಮತ್ತು ಟೀಸರ್ ನ್ನು CRPF ಪೋಲಿಸ್ ಮಹಾನಿರೀಕ್ಷಕ ಡಾ. ವಿಫಲಕುಮಾರ್, ಸಿ ಆರ್‌ಪಿಎಫ್ ಡಿಐಜಿ ಪದ್ಮ ಕುಮಾರ್ ಹಾಗೂ ಪೋಲಿಸ್ ಉಪ ಆಯುಕ್ತ ಜಿ ಕೆ ಮಿಥುನ್ ಕುಮಾರ್ ಅನಾವರಣ ಮಾಡಿದರು.
ಈ ಕಾರ್ಯಕ್ರಮವು ಐಪಿಎಸ್ ಅಧಿಕಾರಿ ಡಾ. ವಿಪುಲ್ ಕುಮಾರ್ ಅವರ ನಾಯಕತ್ವದಲ್ಲಿ ಆಯೋಜಿಸಿತ್ತು. CRPF ಗ್ರೂಪ್ ಸೆಂಟರ್, ಯಲಹಂಕ, ಕ್ಯಾಂಪಸ್‌ನೊಳಗಿನ ವಿವಿಧ ಸಂಸ್ಥೆಗಳು, ಕಚೇರಿಗಳು ಮತ್ತು ಘಟಕಗಳಿಂದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಿಬ್ಬಂದಿ ವರ್ಗದವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಟಿ-20 ಕ್ರಿಕೆಟ್ ಟೂರ್ನಮೆಂಟ್ (ಝೋನ್-ಬಿ)ನ ಪಂದ್ಯಗಳು ದಿನಾಂಕ: 28 ಜನವರಿ 2026 ರಿಂದ 01 ಫೆಬ್ರವರಿ 2026ರವರೆಗೆ ಕೆಎಸ್‌ಸಿಎ ಕ್ರಿಕೆಟ್ ಕ್ರೀಡಾಂಗಣ, ಆಲೂರು, ಬೆಂಗಳೂರಿನಲ್ಲಿ ನಡೆಯಲಿವೆ. ವಿವಿಧ ರಾಜ್ಯಗಳಿಂದ ಕೇಂದ್ರ ಹಾಗೂ ರಾಜ್ಯ ಪೊಲೀಸ್ ಪಡೆಗಳನ್ನು ಪ್ರತಿನಿಧಿಸುವ ಒಟ್ಟು 10 ತಂಡಗಳು ಭಾಗವಹಿಸಲಿದ್ದು ಪಂದ್ಯಗಳು ಗ್ರೌಂಡ್ ನಂ. 2 ಮತ್ತು ಗ್ರೌಂಡ್ ನಂ. 3ರಲ್ಲಿ ಏಕಕಾಲದಲ್ಲಿ ನಡೆಯಲಿದೆ.