Cyclone Effect: ಚಂಡಮಾರುತ ಪರಿಚಲನೆ: ಬೆಂಗಳೂರಿನಲ್ಲಿ ಹಲವು ಕಡೆ ಮಳೆ
ಸ್ಥಳೀಯ ಸುದ್ದಿ

ಬೆಂಗಳೂರು: ರಾಜ್ಯದ ಹಲವೆಡೆ ಬುಧವಾರ ಗುಡುಗು ಸಹಿತ ಮಳೆಯಾಗಿದೆ. ಕೆ.ಆರ್.ಪುರ,ಮಹದೇವಪುರ,ಹೊಸಕೋಟೆ ಸುತ್ತಮುತ್ತಲಿನ ಕಡೆ ಗುಡುಗು,ಸಿಡಿಲು, ಮಿಂಚು ಸಹಿತ ಮಾಳೆಯಾಗಿದೆ.ಹಾಗೆಯೇ ಮುಂದಿನ ಐದು ದಿನ ರಾಜ್ಯದೆಲ್ಲೆಡೆ ವರುಣ ಆರ್ಭಟಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೆಚ್ಚು ಬಿಸಿ ಹಾಗೂ ಸೆಖೆಯಿಂದ ಕಂಗೆಟ್ಟಿದ್ದ ಜನರು ಒಂದಿಷ್ಟು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.ಮಳೆಗೆ ತಯಾರಾಗದೇ ಬಂದಿದ್ದ ಜನ ಹೈರಾಣಾಗಿದ್ದು, ಆಫೀಸಿಗೆ ಬೈಕ್‌ನಲ್ಲಿ ಹೋಗುವವರು ಪರದಾಡಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆಯುಂಟಾಗುತ್ತಿದ್ದು, ಇದರ ಪರಿಣಾಮ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡಿನ ಮೇಲಾಗಲಿದೆ. ಅಲ್ಲದೇ ಧಾರವಾಡ, ಕಲಬುರಗಿ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ರಾಜ್ಯದಾದ್ಯಂತ ಇಂದಿನಿಂದ ಏಪ್ರಿಲ್ 6 ರವರೆಗೆ ಮೋಡ ಕವಿದ ವಾತಾವರಣವಿರಲಿದ್ದು, ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ, ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.