ಬಸವನಗುಡಿ ಅವರೇಬೇಳೆ ಮೇಳಕ್ಕೆೆ ಡಿಸಿಎಂ ಡಿಕೆಶಿ ಚಾಲನೆ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

12/27/20251 min read

ಬೆಂಗಳೂರು: 26ನೇ ಆವೃತಿಯ ಬಸವನಗುಡಿ ಅವರೇಬೇಳೆ ಮೇಳಕ್ಕೆೆ ಶನಿವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.

ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಹಣ್ಣುಗಳ ರಾಜ ಮಾವು ಹೇಗೋ ಅದೇ ರೀತಿ ಕಾಳುಗಳ ರಾಜ ಅವರೆಕಾಳು. ವಿಶೇಷವಾಗಿ ಬೆಂಗಳೂರು ಸುತ್ತಮುತ್ತ ರಾಗಿ, ಜೋಳದ ಬೆಳೆ ಬೆಳೆಯುವಾಗ ಪಕ್ಕದಲ್ಲಿ ಅವರೇಕಾಳು ಸಾಮಾನ್ಯವಾಗಿ ಬೆಳೆಯುತ್ತಾರೆ. ಅವರೆಕಾಳು ನಮ್ಮೆಲ್ಲರ ನೆಚ್ಚಿನ ಖಾದ್ಯ. ವಾಸವಿ ಕಾಂಡಿಮೆಂಟ್ಸ್ ತಂಡದವರಿಂದ ಆಯೋಜನೆಯಾಗುತ್ತಿರುವ ಈ ಮೇಳದಿಂದ ನಮ್ಮ ಸಂಸ್ಕೃತಿ, ಇತಿಹಾಸವನ್ನ ಪಸರಿಸುವುದರ ಜತೆಗೆ ನಮ್ಮ ರೈತರಿಗೆ ವೇದಿಕೆ ಸಿಗಲಿದೆ. ಆದ್ದರಿಂದ ಬೆಂಗಳೂರಿನ ನಾಗರಿಕರು ಹೆಚ್ಚಿನ ಸಂಖ್ಯೆೆಯಲ್ಲಿ ಅವರೇಬೇಳೆ ಮೇಳಕ್ಕೆೆ ಬರಲಿ ಎಂದರು.

ವಾಸವಿ ಕಾಂಡಿಮೆಂಟ್ಸ್ ಮಾಲಕಿ ಗೀತಾ ಶಿವಕುಮಾರ್ ಮಾತನಾಡಿ, 2000ನೇ ಇಸವಿಯಲ್ಲಿ ಆರಂಭಿಸಿದ ಅವರೆಬೇಳೆ ಮೇಳ ಬೆಂಗಳೂರಿನ ಆಹಾರ, ಸಾಂಸ್ಕೃತಿಕ ಮತ್ತು ಪಾರಂಪರೆಯ ಪ್ರತೀಕವಾಗಿದ್ದು, ಈ ಮೇಳವು 4 ಜನವರಿವರೆಗೆ ಬಸವನ ಗುಡಿಯ ನ್ಯಾಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಕಳೆದ 25 ವರ್ಷಗಳಿಂದಲೂ ನಿರಂತರವಾಗಿ ಆಯೋಜನೆಯಾಗುತ್ತಿರುವ ಅವರೆಬೇಳೆ ಮೇಳದಲ್ಲಿ ಬೇರೆ ಬೇರೆ ಜಿಲ್ಲೆಗಳ ರೈತರು ತಾವು ಬೆಳೆದ ಅವರೇಕಾಯಿಗಳನ್ನ ನೇರವಾಗಿ ಗ್ರಾಾಹಕರಿಗೆ ತಲುಪಿಸಬಹುದು. ಜತೆಗೆ ಅವರೇಕಾಳುಗಳಿಂದ ತಯಾರಿಸುವ ತರಹೇವಾರಿ ವಿಶಿಷ್ಟ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬಹುದು. ಈ ವರ್ಷ ನೀರುದೋಸೆ ಅವರೆಬೇಳೆ ಸಾಂಬಾರ್, ಅವರೇಕಾಯಿ ಮೊಮೋಸ್, ಅವರೇಬೇಳೆ ಗುಲಾಬ್ ಜಾಮೂನ್, ಐಸ್ ಕ್ರೀಂ, ಅವರೇಕಾಯಿ ಪೂರಿ, ಹೋಳಿಗೆ ಹಾಗೂ ಹಲ್ವ ಮುಂತಾದ ವಿಶೇಷ ಖಾದ್ಯಗಳು ಪ್ರಮುಖ ಆಕರ್ಷಣೆಯಾಗಿರಲಿವೆ ಎಂದು ತಿಳಿಸಿದರು.

ಆಹಾರ ಮಾತ್ರವಲ್ಲದೆ ಮನರಂಜನೆಗಾಗಿ 360 ಡಿಗ್ರಿ 5ಡಿ ಥಿಯೇಟರ್, ಅಮ್ಯೂಸ್ಮೆೆಂಟ್ ರೆನ್, ಟ್ಯಾಟೂ, ಫೇಸ್ ಪೇಂಟಿಂಗ್, ನೈಲ್ ಆಟ್‌ಸ್‌ ಜತೆಗೆ ಕುಟುಂಬ ಸಮೇತ ಸಮಯ ಕಳೆಯಲು ಸೂಕ್ತವಾದ ಸೌಲಭ್ಯಗಳನ್ನು ಮೇಳದಲ್ಲಿ ಒದಗಿಸಲಾಗಿದೆ. ಮೇಳಕ್ಕೆೆ ಆಗಮಿಸುವವರಿಗೆ ಸುಗಮ, ಸುರಕ್ಷಿತ ಅನುಭವ ಕಲ್ಪಿಸುವ ಉದ್ದೇಶದಿಂದ ಪ್ರಥಮ ಚಿಕಿತ್ಸೆೆ ಕೇಂದ್ರ, ಫೀಡಿಂಗ್ ಬೂತ್, ವ್ಹೀಲ್ ಚೇರ್ ಪ್ರವೇಶ ಸೌಲಭ್ಯ, ಸ್ವಚ್ಛ ಹಾಗೂ ಸುಸಜ್ಜಿತ ಶೌಚಾಲಯಗಳು, ಮಾಹಿತಿ ಮತ್ತು ಸಹಾಯ ಕೇಂದ್ರ, ಭದ್ರತಾ ಸಿಬ್ಬಂದಿ, ಅಂಬ್ಯುಲೆನ್ಸ್ ಹಾಗೂ ಅಗ್ನಿ ಸುರಕ್ಷತಾ ವ್ಯವಸ್ಥೆೆಯನ್ನ ವ್ಯವಸ್ಥಿತವಾಗಿ ಒದಗಿಸಲಾಗಿದೆ.bಮೇಳವು ಪ್ರತಿದಿನ ಬೆಳಗ್ಗೆೆ 10 ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಕಳೆದ ವರ್ಷ 10 ಲಕ್ಷಕ್ಕೂ ಹೆಚ್ಚು ಜನ ಅವರೆಬೇಳೆ ಮೇಳಕ್ಕೆೆ ಭೇಟಿ ನೀಡಿದ್ದರು. ಈ ಬಾರಿ ಇನ್ನಷ್ಟು ಆಕರ್ಷಣೆಯೊಂದಿಗೆ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.