ಹಿಂದೂ ಧರ್ಮದ ಮೇಲೆ ನಿರಂತರ ದಾಳಿಗಳಾದರೂ ಅಳಿಯದೆ ಇನ್ನೂ ಉಳಿದಿದೆ:ಆ.ರಾ.ನಾಗರಾಜ್ ಆಚಾರ್ಯ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

1/27/20261 min read

ಕೆ.ಆ‌ರ್.ಪುರ: ದೇಶ ನಿಷ್ಠೆ, ಧರ್ಮ ನಿಷ್ಠೆ ತೋರಿಸಲು ಹಿಂದೂ ಸಮಾಜೋತ್ಸವ ಉತ್ತಮ ಅವಕಾಶವಾಗಿದೆ ಎಂದು ಆ.ರಾ.ನಾಗರಾಜ್ ಆಚಾರ್ಯ ತಿಳಿಸಿದರು.

ಕೆ.ಆರ್ ಪುರದ ಶ್ರೀ ಮಹಾಬಲೇಶ್ವರ ದೇವಾಲಯದ ಆವರಣದಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಆರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಶೋಭಾಯಾತ್ರೆ ಹಾಗೂ ಹಿಂದು ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಿಂದೂ ಧರ್ಮದ ಮೇಲೆ ನಿರಂತರ ದಾಳಿಗಳಾದರೂ ಅಳಿಯದೆ ಇನ್ನೂ ಉಳಿದಿದೆ. ಹಿಂದೂ ಧರ್ಮದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಿ ನಾನು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡಲು ಹಾಗೂ ಹಿಂದುತ್ವದ ಮೂಲತತ್ವಗಳು ಹಾಗೂ ಅವುಗಳ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಿಂದೂ ಸಮಾಜೋತ್ಸವ ಆಚರಿಸಲಾಗುತ್ತಿದೆ ಎಂದರು.

ರಾಷ್ಟ್ರೀಯ ಸೇವಾ ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ದೇಶದ 5 ಸಾವಿರ ಸ್ಥಳಗಳಲ್ಲಿ ರಾಜ್ಯದ 200 ಕಡೆಗಳಲ್ಲಿ ಹಿಂದೂ ಸಮಾಜೋತ್ಸವ ಆಚರಿಸಲಾಗುವುದು. ಸದ್ಯ ನೆರೆಹೊರೆಯ ದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ದಬ್ಬಾಳಿಕೆಗಳು ನಡೆಯುತ್ತಿದ್ದು, ಈ ಬಗ್ಗೆ ಹಿಂದೂಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಮೂಲಕ ಹಿಂದೂಗಳ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆ ನಡೆಸಿ ಜನಾಭಿಪ್ರಾಯ ಮೂಡಿಸುತ್ತಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಬಹುಸಂಖ್ಯಾತ ಹಿಂದುಗಳು ಅಲ್ಪಸಂಖ್ಯಾತರಾಗುವ ಕಾಲ ಸನ್ನಿಹಿತವಾಗಿದೆ.ನಾವು ಹಿಂದು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಬರಬಹುದು ಎಂದು ಹೇಳಿದರು.

ನಮ್ಮಲ್ಲಿ ಶಕ್ತಿಯಿದ್ದರೂ ಸಂಘಟನೆ ಆಗುತ್ತಿಲ್ಲ. ನಮ್ಮ ದೇಶದ ಸಂಸ್ಕೃತಿ.ಧರ್ಮ ಹಾಗೂ ಸಂಪ್ರದಾಯ ಪರಂಪರೆಯನ್ನು ಉಳಿಸಿ ಬೆಳಸಬೇಕಿದೆ. ಇಲ್ಲಿ ಯಾವುದೇ ಜಾತಿ ಧರ್ಮ ಹಾಗೂ ಪಕ್ಷ ಇಲ್ಲ ಹಿಂದು ಧರ್ಮದ ರಕ್ಷಣೆಗೆ ನಾವೆಲ್ಲರೂ ಒಂದಾಗಿ ಹಿಂದು ಸಮಾಜದ ಸಂಘಟನೆ ಹೆಚ್ಚು ಒತ್ತು ಕೊಡುವ ಮ?ಲಕ ನಮ್ಮ ಸಂಘಟನೆ ಶಕ್ತಿ ಏನೆಂಬುದು ಇಡೀ ವಿಶ್ವಕ್ಕೆ ತಿಳಿಯಬೇಕು. ಈ ರೀತಿಯ ಸಂಘಟನೆ ಆಗಬೇಕು ಎಂದು ಹೇಳಿದರು.

ಮನೆಯಿಂದಲೇ ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿ ಬೆಳಗಬೇಕು. ಪೋಷಕರು ತಮ್ಮಮಕ್ಕಳಿಗೆ ದೇಶಾಭಿಮಾನ ಹಾಗೂ ಸಂಸ್ಕಾರ ಸಂಸ್ಕೃತಿ ಕಲಿಸುವ ಕಾರ್ಯ ಆಗಬೇಕು ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷ ಪೂರೈಸುತ್ತಿರುವ ಹಿನ್ನಲೆಹಿಂದೂಗಳನ್ನು ಒಂದುಗೂಡಿಸುವ ಉದ್ದೇಶದಿಂದ ಹಿಂದು ಸಮಾಜೋತ್ಸವ ಹಾಗೂ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.

ಹಿಂದೂ ಸಮಾಜೋತ್ಸವ ಆಯೋಜಕರು ಹಾಗು ಸಮಾಜಸೇವಕರಾದ ಕೆ.ಹೇಮಂತ್ (ಚಿನ್ನಿ) ಮುಖಂಡರಾದ ಸಚ್ಚಿದಾನಂದ ಮೂರ್ತಿ, ಅಂತೋಣಿಸ್ವಾಮಿ. ವಿಷ್ಣು ಶರ್ಮ.ದಿವಾಕರ್, ತೇಜುಕುಮಾ‌ರ್, ಶಿವಪ್ಪ, ಗಿರೀಶ್, ಪಟಾಕಿ ರವಿ ಸೇರಿದಂತೆ ಹಲವಾರು ಹಿಂದೂ ಮುಖಂಡರು ಹಾಜರಿದ್ದರು.