ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಲಿ:ಮಂಡಲ ಅಧ್ಯಕ್ಷ ಮುನೇಗೌಡ ಮನವಿ
ಸ್ಥಳೀಯ ಸುದ್ದಿ


ಕೆ.ಆರ್.ಪುರ: ಇತ್ತೀಚೆಗೆ ಅತಿಹೆಚ್ಚು ಆರೋಗ್ಯ ಸಮಸ್ಯೆಗಳು ಕಾಡುತ್ತಿರುವ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದ್ದು,ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಲಿ ಎಂದು ಮಂಡಲ ಅಧ್ಯಕ್ಷ ಮುನೇಗೌಡ ಅವರು ಮನವಿ ಮಾಡಿದರು.
ಶಾಂತಕೃಷ್ಣಮೂರ್ತಿ ಫೌಂಡೇಷನ್ ಸಂಸ್ಥಾಪಕರಾದ ಕೃಷ್ಣಮೂರ್ತಿ ಅವರ ಹುಟ್ಟುಹಬ್ಬದದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತದಾನದಿಂದ ನಾಲ್ಕು ಜನರ ಪ್ರಾಣಕ್ಕೆ ನೇರವಾಗಲಿದ್ದು,ಪ್ರತಿಯೊಬ್ಬರು ರಕ್ತದಾನ ಮಾಡಬೇಕು, ರಕ್ತದಾನದಿಂದ ಯಾವುದೇ ಹಾನಿಯಾಗುವುದಿಲ್ಲ,ಬದಲಿಗೆ ಕೆಟ್ಟ ಕೊಬ್ಬಿನ ಪ್ರಮಾಣ ತಗ್ಗಲಿದೆ ಎಂದು ತಿಳಿಸಿದರು.
ಸಂಸ್ಥಾಪಕ ಕೃಷ್ಣಮೂರ್ತಿ ಅವರು ಮಾತನಾಡಿ,ಬಿಪಿ,ಶುಗರ್,ಹೃದಯಸಂಬಂಧಿ ರೋಗಗಳಿಗೆ ಉಚಿತ ಆರೋಗ್ಯ ತಪಾಸಣೆ ಏರ್ಪಡಿಸಲಾಗಿದ್ದು,ಪ್ರತಿಯೊಬ್ಬರು ಆರೋಗ್ಯ ತಪಾಸಣೆಯ ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು.
ಮನೆಗಳಲ್ಲಿರುವ ಹಿರಿಯ ನಾಗರಿಕರು ಪ್ರತಿಮಾಸ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯ. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಊಟ, ಔಷಧ ಸೇವನೆ ಮಾಡಬೇಕು. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಮೊಣಕಾಲು-ಕುತ್ತಿಗೆ ನೋವು, ಅಸಿಡಿಟಿ, ಕಾಯಿಲೆಗಳನ್ನ ದೂರವಿರಲು ಉಚಿತ ಆರೋಗ್ಯ ತಪಾಸಣೆ ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಗಮನ ಹರಿಸಬೇಕು,ಸದೃಢ ಆರೋಗ್ಯ ದಿಂದ ಸುದೀರ್ಘ ಜೀವನ ಸಾದ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಯೋಜಕರಾದ ಶಾಂತಕೃಷ್ಣಮೂರ್ತಿ,ಮಂಡಲ ಅಧ್ಯಕ್ಷ ಮುನೇಗೌಡ, ಮಹಿಳಾ ಅಧ್ಯಕ್ಷೆ ಗೌರಮ್ಮ,ಪ್ರಧಾನ ಕಾರ್ಯದರ್ಶಿಗಳಾದ ಲೋಕೆಶ್,ಶ್ರೀರಾಮ್,ಉಪಾಧ್ಯಕ್ಷ ಶಿವಪ್ಪ,ಪಟಾಕಿ ರವಿ,ಕಾರ್ಯದರ್ಶಿ ರಾಮಲಕ್ಷ್ಮಣ,ವಾರ್ಡನ ಅಧ್ಯಕ್ಷ ಗೊವಿಂದಪ್ಪ,ಮುಖಂಡರಾದ ಮುರಳಿ, ಸಂಪತ್ ಇದ್ದರು.