ಧಾರವಾಡ: ಆಟವಾಡುತ್ತಲೇ ಕಾಲು ಜಾರಿ ಕೆರೆಗೆ ಬಿದ್ದು, ಅವಳಿ ಮಕ್ಕಳು ಸಾವು!
ಕ್ರೈಮ್ಜಿಲ್ಲಾ ಸುದ್ದಿ


ಧಾರವಾಡ: ಮನೆಯ ಎದುರು ಆಟವಾಡುತ್ತಾ ಕೆರೆಗೆ ಬಿದ್ದು ಮೂರೂ ವರ್ಷದ ಅವಳಿ ಮಕ್ಕಳು ಜೀವ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಕುಂದಗೋಳ ತಾಲೂಕಿನ ಯರಿ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ.
ಶರೀಫಸಾಬ ಚಂದುಖಾನ ಅವರ ಅವಳಿ ಮಕ್ಕಳಾದ ಮುದಸ್ಸೀರ್ ಮತ್ತು ಮುಜಮ್ಮಿಲ್ ದುರಂತದಲ್ಲಿ ಉಸಿರು ಚೆಲ್ಲಿದ ಕಂದಮ್ಮಗಳು ಎಂದು ಗುರ್ತಿಸಲಾಗಿದೆ.
ಇಂದು ಇಬ್ಬರೂ ಮಕ್ಕಳು ಮನೆಯ ಸಮೀಪದಲ್ಲಿದ್ದ ಕೆರೆಯ ಬಳಿ ಆಟವಾಡಲು ತೆರಳಿದ್ದಾರೆ. ಈ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಕರೆಯಲ್ಲಿ ಮುಳುಗಿ ಅವಳಿ ಮಕ್ಕಳು ಸಾವನ್ನಪ್ಪಿದ್ದಾರೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.