NEW DELHI: ಬಿಎಸ್‌ಎಫ್ ಯೋಧನಿಗೆ ಹಿಂಸೆ ಕೊಟ್ಟಿತ್ತಾ ಪಾಕ್? ನಿದ್ದೆ ಮಾಡಲು ಬಿಡಲಿಲ್ಲ, ಹೀನಾಯವಾಗಿ ನಿಂದಿಸಿದ ಪಾಕ್. ಯೋಧ ಪೂರ್ಣಂ ಕುಮಾರ್ ಶಾ ಹೇಳಿದ್ದೇನು ಗೊತ್ತಾ.!
ದೇಶ/ವಿದೇಶ


ನವದೆಹಲಿ : ಕೆಲವು ದಿನಗಳ ಹಿಂದೆ ಆಕಸ್ಮಿಕವಾಗಿ ಗಡಿ ದಾಟಿದ್ದ ಬಿಎಸ್ಎಫ್ಯೋಧ ಪೂರ್ಣಂ ಕುಮಾರ್ ಶಾ ಅವರನ್ನು ಪಾಕ್ ಸೇನೆ ಬಂಧಿಸಿತ್ತು. ಕಳೆದ ದಿನಗಳ ಕಾಲ ಬಂಧನಲ್ಲಿಟ್ಟುಕೊಂಡು ನಂತರ ಬುಧವಾರ ಭಾರತಕ್ಕೆ ವಾಪಸ್ ಕಳುಹಿಸಿದೆ. ಯೋಧನನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದರು, ಜತೆಗೆ ನಿದ್ರೆ ಮಾಡಲು ಬಿಡುತ್ತಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಂಡಿಯಾ ಟುಡೇ ನೀಡಿರುವ ಮಾಹಿತಿ ಪ್ರಕಾರ, ಏಪ್ರಿಲ್ 23 ರಿಂದ 21 ದಿನಗಳ ಕಾಲ ಪಾಕಿಸ್ತಾನದಲ್ಲಿ ಕಳೆದ ಪೂರ್ಣಂ ಕುಮಾರ್ ಅವರಿಗೆ ಪಾಕಿಸ್ತಾನಿ ಅಧಿಕಾರಿಗಳು ಕಣ್ಣುಗಳಿಗೆ ಬಟ್ಟೆ ಕಟ್ಟಿ ನಿದ್ರೆಗೆಡಿಸಿದರು ಮತ್ತು ಮೌಖಿಕವಾಗಿ ನಿಂದಿಸಿದರು. ಅವರಿಗೆ ಹಲ್ಲುಜ್ಜಲು ಸಹ ಅವಕಾಶ ನೀಡಿರಲಿಲ್ಲ. ಪಾಕಿಸ್ತಾನದ ಸೆರೆಯಲ್ಲಿದ್ದ ಸಂದರ್ಭ ಮೂರು ಅಜ್ಞಾತ ಸ್ಥಳಗಳಿಗೆ ಕರೆದೊಯ್ಯಲಾಗಿತ್ತು. ಅದರಲ್ಲಿ ಒಂದು ಸ್ಥಳ ವಾಯುನೆಲೆಯ ಬಳಿಯಿತ್ತು. ಅಲ್ಲಿ ವಿಮಾನಗಳ ಶಬ್ದ ಕೇಳಿಸುತ್ತಿತ್ತು ಎಂದು ತಿಳಿಸಿದ್ದಾರೆ.
ಶಾ ಅವರಿಗೆ ದೈಹಿಕವಾಗಿ ಚಿತ್ರೆಹಿಂಸೆ ನೀಡದಿದ್ದರೂ ಕೂಡ ಗಡಿಯಲ್ಲಿ ಬಿಎಸ್‌ಎಫ್ ನಿಯೋಜನೆಗಳ ಬಗ್ಗೆಯೂ ಅವರನ್ನು ಪ್ರಶ್ನಿಸಲಾಯಿತು. ಹಲ್ಲುಗಳನ್ನು ಉಜ್ಜಲು ಕೂಡ ಅವಕಾಶ ಕೊಟ್ಟಿರಲಿಲ್ಲ ಎಂದು ವರದಿಯಾಗಿದೆ.
ಏಪ್ರಿಲ್ 23ರಂದು ಫಿರೋಜ್ಪುರ ವಲಯದಲ್ಲಿ ಕರ್ತವ್ಯದಲ್ಲಿದ್ದ ಪೂರ್ಣಂ ತಪ್ಪಾಗಿ ಪಾಕಿಸ್ತಾನ ಪ್ರದೇಶಕ್ಕೆ ದಾಟಿದ್ದರು, ಪಾಕಿಸ್ತಾನದ ರೇಂಜರ್ಸ್ ಅವರನ್ನು ಬಂಧಿಸಿದ್ದರು. 24ನೇ ಬಿಎಸ್‌ಎಫ್ ಬೆಟಾಲಿಯನ್ಗೆ ಸೇರಿದ ಶಾರನ್ನು 21 ದಿನಗಳಲ್ಲಿ ಮೂರು ಅಜ್ಞಾತ ಸ್ಥಳಗಳಿಗೆ ಕರೆದೊಯ್ಯಲಾಗಿತ್ತು. ಒಂದು ಸ್ಥಳವು ವಾಯು ನೆಲೆ ಬಳಿ ಇದ್ದು, ಅಲ್ಲಿ ವಿಮಾನ ಶಬ್ದಗಳು ಕೇಳಿಸುತ್ತಿದ್ದವು ಎಂದು ಅವರು ಹೇಳಿಕೊಂಡಿದ್ದಾರೆ.
ಈ ಚಲನೆಗಳ ಸಮಯದಲ್ಲಿ ಪೂರ್ಣಂ ಕುಮಾರ್‌ಗೆ ಹೆಚ್ಚಾಗಿ ಕಣ್ಣುಮುಚ್ಚಿಯೇ ಇರಿಸಲಾಗಿತ್ತು. ಒಂದು ಸ್ಥಳದಲ್ಲಿ ಅವರನ್ನು ಜೈಲು ಕೋಣೆಯಲ್ಲಿ ಇರಿಸಲಾಗಿತ್ತು. ನಾಗರಿಕ ಉಡುಪು ಧರಿಸಿದ್ದ ಪಾಕಿಸ್ತಾನಿ ಅಧಿಕಾರಿಗಳು, ಗಡಿಯಲ್ಲಿ ಬಿಎಸ್‌ಎಫ್ ನಿಯೋಜನೆಗಳ ಕುರಿತು ಶಾ ಅವರನ್ನು ಪ್ರಶ್ನಿಸಿದ್ದರು ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ನಿಯೋಜಿಸಲಾದ ಹಿರಿಯ ಅಧಿಕಾರಿಗಳ ಬಗ್ಗೆ ವಿವರಗಳನ್ನು ಕೇಳಿದ್ದರು ಎಂದು ಮೂಲಗಳು ತಿಳಿಸಿವೆ.
ಮೊಬೈಲ್ ನಂಬರ್ಗಳನ್ನು ನೀಡುವಂತೆಯೂ ಒತ್ತಾಯಿಸಲಾಗಿತ್ತು. ಆದರೆ ಶಾ ಅವರನ್ನು ಬಂಧಿಸಿದಾಗ ಅವರ ಬಳಿ ಮೊಬೈಲ್ ಇರಲಿಲ್ಲ. ಅಟ್ಟಾರಿ-ವಾಘಾ ಗಡಿಯಲ್ಲಿ ಬಿಎಸ್‌ಎಫ್ ಜವಾನನನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದ ನಂತರ, ಶಾ ಅವರಿಗೆ ಅವರ ಕುಟುಂಬದೊಂದಿಗೆ ಮಾತನಾಡಲು ಅವಕಾಶ ನೀಡಲಾಯಿತು.
ಅವರನ್ನು ಔಪಚಾರಿಕ ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.