ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ 64 ಲಕ್ಷ ಮೌಲ್ಯದ ಸಾಧನ ಸಲಕರಣೆ ವಿತರಣೆ:

ಸ್ಥಳೀಯ ಸುದ್ದಿಜಿಲ್ಲಾ ಸುದ್ದಿ

ಧರ್ಮ ಬಸವನಪುರ.

9/26/20251 min read

ಬೆಂ.ಗ್ರಾ.ಜಿಲ್ಲೆ: ಸಮಾಜದಲ್ಲಿ ವಿಶೇಷಚೇತನರನ್ನು ಮತ್ತು ಹಿರಿಯ ನಾಗರಿಕರನ್ನು ಗೌರವಿಸುವ ಪ್ರವೃತ್ತಿ ಹೆಚ್ಚಾಗಬೇಕು ಜೊತೆಗೆ ಅವರನ್ನು ಗೌರವಯುತವಾಗಿ ಬದುಕು ನಡೆಸಲು ನಾವೆಲ್ಲರು ಸಹಕಾರ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಹೇಳಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಅಲಿಂಕೋ ಸಂಸ್ಥೆ ಸಹಯೋಗ ಆಯೋಜಿಸಿದ್ದ ಹಾಗೂ ಸಿಎಸ್ಆರ್ ಅನುದಾನದಡಿ ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

ವಿಶೇಷಚೇತನರಲ್ಲಿ ತನ್ನದೇ ಅದ ವಿಶಿಷ್ಟ ಕಲೆ, ಶಕ್ತಿ ಇರುತ್ತದೆ ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಮಾನತೆ, ಗೌರವಯುತವಾಗಿ ನೋಡಬೇಕು. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಅವರಿಗೆ ಒದಗಿಸಬೇಕು. ಅಲಿಂಕೊ ಸಂಸ್ಥೆಯು ಉತ್ತಮ ಕೆಲಸ ಮಾಡಿದ್ದು ಅವರಿಗೆ ಧನ್ಯವಾದ.

149 ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಸಿಎಸ್ಆರ್ ಅನುದಾನದಲ್ಲಿ 44.71ಲಕ್ಷ ಮೌಲ್ಯದ ಸಾಧನ ಸಲಕರಣೆ ವಿತರಣೆ ಮತ್ತು 161 ವಿಕಲಚೇತನರಿಗೆ ಅಡಿಪ್ ಯೋಜನೆಯಡಿ 12.55 ಲಕ್ಷ ಮೌಲ್ಯದ ಸಾಧನ ಸಲಕರಣೆ ವಿತರಣೆ ಹಾಗೂ 83 ಹಿರಿಯ ನಾಗರಿಕರಿಗೆ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ 6.88 ಲಕ್ಷ ಮೌಲ್ಯದ ಸಾಧನ ಸಲಕರಣೆ ವಿತರಣೆ ಮಾಡಲಾಗಿದ್ದು ಒಟ್ಟಾರೆ 393 ವಿಶೇಷಚೇತನರು ಹಾಗೂ ಹಿರಿಯ ನಾಗರಿಕರಿಗೆ 64 ಲಕ್ಷ ಮೌಲ್ಯದ ವೀಲ್ಚೇರ್, ಯಂತ್ರಚಾಲಿತ ವೀಲ್ ಚೇರ್, ಕ್ರಚರ್ಸ್, ಕ್ಯಾಲಿಪರ್ಸ್ ವಾಕರ್, ಶ್ರವಣ ಸಾಧನ ಹಾಗೂ ಇತರೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ನೀಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಶಿವಕುಮಾರ್, ಯುಟಿಐ ಮತ್ತು ಐ.ಟಿ.ಎಸ್.ಎಲ್ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕರಾದ ಬಾಸ್ಟಿನ್ ಪಾಲ್ ಹಾಗೂ ಬೆಂಗಳೂರು ವಿಭಾಗದ ಮ್ಯಾನೇಜರ್ ಮಹೇಶ್ವರಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸತೀಶ್ ಪಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅನಿತಾ ಲಕ್ಷ್ಮೀ, ಅಲಿಂಕೋ ಸಂಸ್ಥೆಯ ಮ್ಯಾನೇಜರ್ ಎ.ಶಿವಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿಕಲಚೇತನರು ಮತ್ತು ಹಿರಿಯ ನಾಗರಿಕರು ಉಪಸ್ಥಿತರಿದ್ದರು.