DK Shivakumar: ಘಾಟಿ ಸುಬ್ರಹ್ಮಣ್ಯಕ್ಕೆ ಡಿಕೆಶಿ ದಂಪತಿ ಭೇಟಿ, ವಿಶೇಷ ಪೂಜೆ

ರಾಜ್ಯ

RAGHAVENDRA H.A

4/13/20251 min read

ದೊಡ್ಡಬಳ್ಳಾಪುರ:ಕೆಪಿಸಿಸಿ ಅಧ್ಯಕ್ಷ, ಉಪ‌ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಇಂದು ಕುಟುಂಬ ಸಮೇತರಾಗಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪೂರ್ವ ನಿಗಧಿಯಂತೆ ಬೆಳಗ್ಗೆ ಸುಮಾರು 7:15ಕ್ಕೆ ದೇವಾಲಯಕ್ಕೆ ಭೇಟಿ ನೀಡಿದ ಉಮಮುಖ್ಯಮಂತ್ರಿಗಳು

ಗರ್ಭಗುಡಿಯ ಬಳಿ ಕುಳಿತು ಅರ್ಚನೆ, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಜೊತೆಗಿದ್ದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ವಂಕಟರಾಮಯ್ಯ, ಘಾಟಿ ಪ್ರಾಧಿಕಾರದ ಅಧ್ಯಕ್ಷರಾದ ರಂಗಪ್ಪ, ಸದಸ್ಯರಾದ ಮಹೇಶ್, ಮುಖಂಡರಾದ ಗವಿಸಿದ್ದಪ್ಪ, ಉಪಸ್ಥಿತರಿದ್ದರು.

ಭಕ್ತರಿಗೆ ದಿಗ್ಬಂಧನ;

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸುಮಾರು ಒಂದು ಗಂಟೆಗೂ ಅಧಿಕ ಕಾಲ ದೇವಾಲಯದ ಗರ್ಭಗುಡಿಯ ಬಳಿ ಕುಳಿತು ಪೂಜೆಯಲ್ಲಿ ಭಾಗವಹಿಸಿದ್ದರು. ಇದರಿಂದ ಮುಂಜಾನೆಯಿಂದಲೇ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆಯಲು ಮುಂದಾಗಿದ್ದ ಭಕ್ತರಿಗೆ ನಿಂತಲ್ಲೆ ನಿಂತು ಸುಸ್ತಾದರು.

ಭಕ್ತಾಧಿಗಳು, ಮಕ್ಕಳು, ವೃದ್ಧರು, ಮಹಿಳೆಯರು ದೇವರ ದರ್ಶನ ಪಡೆಯಲು ಕಾದುಕುಳಿತುದಿಗ್ಬಂದನ ಏರಿದಂತೆ ದೃಶ್ಯ ಕಂಡುಬಂತು.