ಹೊಸ ವರ್ಷಕ್ಕೆ ಅಬಕಾರಿ ಇಲಾಖೆಗೆ ಭರ್ಜರಿ ಕಲೆಕ್ಷನ್‌ ಎಷ್ಟು ಗೊತ್ತಾ..?

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

1/1/20261 min read

ಬೆಂಗಳೂರು: ರಾಜ್ಯಾದ್ಯಂತ ಹೊಸ ವರ್ಷಾಚರಣೆ ಸಂಭ್ರಮ ಜೋರಾಗಿದ್ದು, ಪಬ್‌, ಬಾರ್‌, ರೆಸ್ಟೋರೆಂಟ್‌ಗಳು ಝಗಮಗಿಸಿದ್ದವು. ಕುಡಿದು ಟೈಟ್‌ ಆದ ಯುವಕ-ಯುವತಿಯರು ಡಿಜೆ ಸಂಗೀತಕ್ಕೆ ಹುಚ್ಚೆದ್ದು ಕುಣಿದರೆ, ಮದ್ಯ ಮಾರಾಟದ ಅವಧಿ ವಿಸ್ತರಣೆಯಿಂದ ರಾಜ್ಯ ಸರ್ಕಾರಕ್ಕೆ ಭರ್ಜರಿ ಆದಾಯ ಲಭಿಸಿದೆ.

ಹೊಸ ವರ್ಷಾಚರಣೆ ಹಿನ್ನೆಲೆ ಮದ್ಯ ಮಾರಾಟಕ್ಕೆ ನಿಗದಿತ ಸಮಯವನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿತ್ತು. ಆ ಮೂಲಕ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿತ್ತು. ಸೂರ್ಯೋದಕ್ಕೂ ಮುನ್ನವೇ ಬಾರ್ಗಳು ಓಪನ್ ಆಗಿದ್ದವು. ಹಾಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಮದ್ಯ ಮಾರಾಟ ಆಗಿದೆ.

ಐಎಂಎಲ್, ಬಿಯರ್ ಮಾರಾಟದಿಂದ 587.51 ಕೋಟಿ ಆದಾಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 166.74 ಕೋಟಿ ರೂ ಈ ವರ್ಷ ಅಬಕಾರಿ ಇಲಾಖೆ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದುಬಂದಿದೆ.

2024ರ ಡಿ.29, 30, 31ರಂದು 8.25 ಲಕ್ಷ ಬಾಕ್ಸ್ IML ಮತ್ತು 5.03 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗುವ ಮೂಲಕ 2024ರಲ್ಲಿ 420.77 ಕೋಟಿ ರೂ ಆದಾಯ ಗಳಿಸಲಾಗಿತ್ತು.

2025ರ ಡಿ.29, 30, 31ರಂದು 9.84 ಲಕ್ಷ ಬಾಕ್ಸ್ IML, ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ 1.59 ಲಕ್ಷ ಬಾಕ್ಸ್ ಹೆಚ್ಚುವರಿ ಮಾರಾಟವಾಗಿದೆ. ಮತ್ತು ಇದೇ ದಿನದಂದು 6.64 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1.61 ಲಕ್ಷ ಬಾಕ್ಸ್ ಹೆಚ್ಚುವರಿ ಮಾರಾಟವಾಗಿದೆ. ಐಎಂಎಲ್, ಬಿಯರ್ ಮಾರಾಟದಿಂದ ಈ ವರ್ಷ ಅಬಕಾರಿ 587.51 ಕೋಟಿ ಆದಾಯವಾಗಿದೆ. ಇದನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 166.74 ಕೋಟಿ ರೂ ಆದಾಯ ಹರದುಬಂದಿದೆ.