ಆರೂವರೆ ದಶಕ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ತಾರೆ.ಬಿ.ಸರೋಜಾದೇವಿ ನಟಿಸಿದ ಚಲನಚಿತ್ರ ಮತ್ತು ಪ್ರಶಸ್ತಿಗಳು ಯಾವುದು ಗೊತ್ತಾ..!

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

7/14/20251 min read

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಇಂದು ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ಸಮಯದಿಂದ ಸರೋಜಾ ದೇವಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.ಇಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ತಮ್ಮ ನಿವಾಸದಲ್ಲಿ ಸಾವನಪ್ಪಿದ್ದಾರೆ

1938 ಜನವರಿ 7 ರಂದು ಬೆಂಗಳೂರಿನಲ್ಲಿ ಜನಿಸಿದ ಬಿ ಸರೋಜಾದೇವಿ. ಅವರು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ನಟಿಸಿದ್ದರು. ಡಾಕ್ಟರ್ ರಾಜಕುಮಾರ್ ಕಲ್ಯಾಣಕುಮಾರ್ ಸೇರಿದಂತೆ ಹಲವಾರು ಮೇರು ನಟನೊಂದಿಗೆ ಚಿತ್ರರಂಗದಲ್ಲಿ ಸರೋಜಾದೇವಿ ಅದ್ಭುತವಾಗಿ ನಟಿಸಿದ್ದರು.

1955ರಲ್ಲಿ ಬಂದ 'ಮಹಾಕವಿ ಕಾಳಿದಾಸ' ಚಿತ್ರದ ಮೂಲಕ ಸರೋಜಾ ದೇವಿ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದರು. ನಂತರ ಇವರ ನಟನೆಯನ್ನು ನೋಡಿ ಅನೇಕ ಅವಕಾಶಗಳು ದೊರೆತವು. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಅವರ ವೃತ್ತಿ ಬದುಕಿನಲ್ಲಿ ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು 2019ರಲ್ಲಿ ರಿಲೀಸ್ ಆದ ಪುನೀತ್ ರಾಜ್ಕುಮಾರ್ ನಟನೆಯ 'ನಟಸಾರ್ವಭೌಮ' ಅವರು ನಟಿಸಿದ ಕೊನೆಯ ಚಿತ್ರವಾಗಿತ್ತು.

ಸರೋಜಾದೇವಿ ಅವರು 1969ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 1992ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನಿಂದ ಕಲೈಮಾಮಣಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಅಭಿನಯಿಸಿದ ಚಿತ್ರಗಳು

* ಕಿತ್ತೂರುರಾಣಿ ಚೆನ್ನಮ್ಮ,

* ಅಮರಶಿಲ್ಪಿ ಜಕಣಾಚಾರಿ,

* ಕಥಾಸಾಗರ,

* ಬಬ್ರುವಾಹನ,

* ಭಾಗ್ಯವಂತರು,

* ಆಷಾಡಭೂತಿ,

* ಶ್ರೀರಾಮಪೂಜಾ,

* ಕಚ ದೇವಯಾನಿ,

* ರತ್ನಗಿರಿ ರಹಸ್ಯ,

* ಕೋಕಿಲವಾಣಿ,

* ಸ್ಕೂಲ್ಮಾಸ್ಟರ್,

* ಪಂಚರತ್ನ,

* ಲಕ್ಷ್ಮೀಸರಸ್ವತಿ,

* ಚಿಂತಾಮಣಿ,

* ಭೂಕೈಲಾಸ,

* ಅಣ್ಣತಂಗಿ,

* ಜಗಜ್ಯೋತಿ ಬಸವೇಶ್ವರ,

* ಕಿತ್ತೂರುಚೆನ್ನಮ್ಮ,

* ದೇವಸುಂದರಿ,

* ವಿಜಯನಗರದ ವೀರಪುತ್ರ,

* ಮಲ್ಲಮ್ಮನ ಪವಾಡ,

* ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ,

* ಪೂರ್ಣಿಮಾ,

* ಗೃಹಿಣಿ,

* ಪಾಪಪುಣ್ಯ,

* ಸಹಧರ್ಮಿಣಿ,

* ಶ್ರೀನಿವಾಸಕಲ್ಯಾಣ,

* ಚಾಮುಂಡೇಶ್ವರಿ ಮಹಿಮೆ,

* ಚಿರಂಜೀವಿ,

* ಶನಿಪ್ರಭಾವ ಮೊದಲಾದ ಚಿತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು.

ರಾಜ್ಯ ಪ್ರಶಸ್ತಿಗಳು

* ೨೦೦೯ – ತಮಿಳುನಾಡು ಸರ್ಪ್ರಶಸ್ತಿಕಲೈಮಾಮಣಿ ಚಿತ್ರಕ್ಕೆ ಜೀವಮಾನ ಸಾಧನೆ ಪ್ರಶಸ್ತಿ.

* ೨೦೦೯ – ಕರ್ನಾಟಕ ಸರ್ಕಾರದಿಂದ ಡಾ.ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ

* ೨೦೦೯ – ಎರಡನೇ ಬಾರಿಗೆ ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ

* ೨೦೦೧ – ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ

* ೧೯೯೩ – ತಮಿಳುನಾಡು ಸರ್ಕಾರದ ಎಂಜಿಆರ್ ಪ್ರಶಸ್ತಿ

* ೧೯೮೮ – ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ

* ೧೯೮೦ – ಕರ್ನಾಟಕ ರಾಜ್ಯದಿಂದ ಅಭಿನಂದನ-ಕಾಂಚನ ಮಾಲಾ ಪ್ರಶಸ್ತಿ.

* ೧೯೬೯ – ಕುಲ ವಿಳಕ್ಕು ಚಿತ್ರಕ್ಕೆ ಅತ್ಯುತ್ತಮ ನಟಿಯಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ

* ೧೯೬೫ – ಕರ್ನಾಟಕದಿಂದ ಅಭಿನಯ ಸರಸ್ವತಿ ಗೌರವ ಪಡೆದುಕೊಂಡಿದ್ದಾರೆ.