ದೊಡ್ಡಬಳ್ಳಾಪುರ: ಜಾತ್ರೆ ನೋಡಲು ಬಂದ ವೃದ್ದೆ ಮಾಂಗಲ್ಯ ಸರ ಕಳವು, ವೃದ್ದೆ ಕಣ್ಣೀರು, ವೀಡಿಯೋ ನೋಡಿ

ಕ್ರೈಮ್

ರಾಘವೇಂದ್ರ ಹೆಚ್.ಎ

4/16/20251 min read

ದೊಡ್ಡಬಳ್ಳಾಪುರ: ಜಾತ್ರೆ ನೋಡಲು ಬಂದಿದ್ದ ವೃದ್ದೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಖದೀಮರು ಕದ್ದೊಯ್ದಿರುವ ಘಟನೆ ತಾಲ್ಲೂಕಿನ ಮಲ್ಲೋಹಳ್ಳಿಯಲ್ಲಿ ನಡೆದಿದೆ.

ರಂಗಮ್ಮ (71) ವರ್ಷ, ಮಾಂಗಲ್ಯ ಸರ ಕಳೆದುಕೊಂಡ ವೃದ್ದೆ. ನೆಲಮಂಗಲ ಮೂಲದ ರಂಗಮ್ಮ ತಾಲ್ಲೂಕಿನ ಮೆಲ್ಲೋಹಳ್ಳಿಯಲ್ಲಿ ನಡೆಯುವ ಶ್ರೀ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ನೋಡಲು ಕುಟುಂಬದೊಂದಿಗೆ ಬಂದಿದ್ದರು ಈ ವೇಳೇ ದುರ್ಘಟೆನೆ ಸಂಭವಿಸಿದೆ.

ಏ.13 ರಂದು ತಾಲ್ಲೂಕಿನ ಮಲ್ಲೋಹಳ್ಳಿಯಲ್ಲಿ ಬ್ರಹ್ಮೋತ್ಸವ ನೋಡಲು ತಾಲ್ಲೂಕಿನ ಹಲವೆಡೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ವೇಳೆ ರಂಗಮ್ಮನೂ ಕುಟುಂಬ ಸಮೇತರಾಗಿ ರಥೋತ್ಸವ ನೋಡಲು ಜನಜಂಗುಳಿಯಲ್ಲಿದ್ದರು ಈ ವೇಳೆ ಖದೀಮರು ವೃದ್ದೆ ರಂಗಮ್ಮನ ಕೊರಳಲ್ಲಿದ್ದ 50 ಗ್ರಾಂ ತೂಕದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ. ಜಾತ್ರೆಯಲ್ಲಿ ಮಜ್ಜಿಗೆ ಕುಡಿಯುವ ವೇಳೆ ಕತ್ತಿನಲ್ಲಿದ್ದ ಚಿನ್ನದ ಸರ ಮಾಯವಾಗಿರುವುದು ಕಂಡು ಬಂದಿದಿದೆ.

ಕೂಲಿ ಮಾಡಿ ಕೂಡಿಟ್ಟ ಹಣದಲ್ಲಿ ಖರೀದಿಸಿದ್ದ ಮಾಂಗಲ್ಯ ಸರವನ್ನು ಕಳೆದುಕೊಂಡ ರಂಗಮ್ಮ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟರು. ಈ ಘಟನೆಯೂ ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.