ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ.

ಸ್ಥಳೀಯ ಸುದ್ದಿ

RAGHAVENDRA H.A

4/14/20251 min read

ದೊಡ್ಡಬಳ್ಳಾಪುರ : ಪೋಷಕರು ಪ್ರತಿ ಮಕ್ಕಳನ್ನ ಪದವಿದರರನ್ನಾಗಿ ಮಾಡುವ ಮೂಲಕ ಡಾ.ಬಿ.ಆರ್ ಅಂಬೇಡ್ಕರ್ ಹಾದಿಯಲ್ಲಿ ನಡೆಯುವುದನ್ನ ಕಲಿಸಬೇಕಿದೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.

ನಗರದ ಹಳೇ ಸರ್ಕಾರಿ ಆಸ್ಪತ್ರೆ ವೃತ್ತದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ವಿವಿಧ ಧರ್ಮಗಳಲ್ಲಿ ನಾನಾ ರೀತಿಯ ಹಬ್ಬಗಳನ್ನ ಆಚರಿಸುವಂತೆ, ದೇಶದಾದ್ಯಂತ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಹಬ್ಬದಂತೆ ಆಚರಿಸಲಾಗುತ್ತಿದೆ. ಅಂಬೇಡ್ಕರ್ ಅವರ ಅಪಾರ ಓದು, ಪಡೆದ ಪದವಿಗಳಿಂದ ಪಡೆದ ಜ್ಞಾನದಿಂದ ನಮಗೆ ಸಂವಿಧಾನ ಬರೆದುಕೊಡುವ ಮೂಲಕ ದೇಶದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಮೂಲ ಪುರುಷರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿಭಾವಿದ್ಯಾ ರಾಠೋಡ್, ತಾ.ಪಂ ಇಓ ಮುನಿರಾಜು, ನಗರಸಭೆ ಅಧ್ಯಕ್ಷೆ ಸುಮಿತ್ರಾ, ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್, ಪೌರಾಯುಕ್ತ ಕಾರ್ತಿಕೇಶ್ವರ್, ನಗರಸಭಾ ಸದಸ್ಯರಾದ ಶಿವು, ವೆಂಕಟೇಶ್, ಪದ್ಮನಾಭ, ವತ್ಸಲಾ, ಕೋಳೂರು ನಾಗರಾಜು, ಮುಖಂಡರಾದ ಸಂಜೀವ್ ನಾಯ್ಕ್, ಗುರುರಾಜಪ್ಪ, ಮುನಿಕೃಷ್ಣಪ್ಪ, ಕಾಂತರಾಜು, ಓಬದೇನಹಳ್ಳಿ ಮುನಿಯಪ್ಪ, ಪುರುಷೋತ್ತಮ ಮುಂತಾದವರು ಉಪಸ್ಥಿತದ್ದರು.