Doddaballapura: ಅದ್ದೂರಿಯಾಗಿ ನೆರವೇರಿದ ಸ್ವಯಂಭುವೇಶ್ವರ ಸ್ವಾಮಿ ಬ್ರಹ್ಮರಥೋತ್ಸವ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ: ನಗರದ ಸೊಮೇಶ್ವರ ದೇವಾಲಯದಲ್ಲಿ ಇಂದು ಸ್ವಯಂಭೂವೇಶ್ವರ ಸ್ವಾಮಿಯವರ ಬ್ರಹ್ಮರಥೋತ್ಸವವು ಅದ್ದೂರಿಯಾಗಿ ನೆರವೇರಿತು.
ಮಧ್ಯಾಹ್ನ 12 ರಿಂದ 1ರೊಳಗೆ ಸಲ್ಲುವ ಶುಭ ಅಭಿಜನ್ ಮುಹೂರ್ಥದಲ್ಲಿ ಗಿರಿಜಾ ಸಮೇತ ಸ್ವಯಂಭುವೇಶ್ವರ ಸ್ವಾಮಿ ಬ್ರಹ್ಮರಥೋತ್ಸವವು ನೆರವೇರಿತು. ನಗರದ ಸೋಮೇಶ್ವರ ದೇವಾಲಯ ಬೀದಿಯಲ್ಲಿ ರಥವು ಸಾಗಿತ್ತು. ಈ ಉತ್ಸವದಲ್ಲಿ ನಗರದ ದೇಶದ ಪೇಟೆ ವೀರ ಶೈವ ಸಂಘದ ಸದಸ್ಯರು ಸೇರಿದಂತೆ ತಾಲ್ಲೂಕಿನ ಭಕ್ತರು ಉತ್ಸಾಹದಿಂದ ಭಾಗವಹಿಸಿದ್ದರು.
ಇಂದು ಸಂಜೆ ಕಲಶಾರಾಧನೆ, ನಿತ್ಯಹೋಮ, ಬಲಿಪ್ರಧಾನ, ಧೂಳೋತ್ಸವ, ಅಷ್ಟವಧಾನ ಸೇವೆ, ಮಹಾಮಂಗಳಾರತಿ, ತಿರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಏಪ್ರಿಲ್ 10 ರಿಂದ ಆರಂಭವಾದ ಉತ್ಸವಗಳು ಏಪ್ರಿಲ್ 19ರ ಸಂಜೆ ನಡೆಯಲಿರುವ ಪ್ರಕಾರೋತ್ಸವದೊಂದಿಗೆ ಮುಕ್ತಾಯವಾಗಲಿದೆ.