ದೊಡ್ಡಬಳ್ಳಾಪುರ: ಎಚ್.ಎಸ್. ದಾಕ್ಷಾಯಿಣಿ ಅವರಿಗೆ CMR ವಿಶ್ವವಿದ್ಯಾಲಯದಿಂದ PhD ಪದವಿ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾದ ಎಚ್.ಎಸ್. ದಾಕ್ಷಾಯಿಣಿ ಅವರು ಸಿ.ಎಂ.ಆರ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ. ಶ್ರೀಮತಿ ಎಚ್.ಎಸ್.ದಾಕ್ಷಾಯಿಣಿ ಅವರು ಸಿ.ಎಂ.ಆರ್ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಪ್ರಾಧ್ಯಾಪಕರಾದ ಡಾ.ಬಾಲಾಜಿ ಅವರ ಮಾರ್ಗದರ್ಶನದಲ್ಲಿ ''ಪ್ರೌಢಶಿಕ್ಷಣದ ಶೈಕ್ಷಣಿಕ ಮತ್ತು ಆಡಳಿತ್ಮಾಕ ಸಾಧನೆಯಲ್ಲಿ ಮುಖ್ಯಶಿಕ್ಷಕ ನಾಯಕತ್ವ ಒಂದು ಅಧ್ಯಯನ'' ಎಂಬ ಕುರಿತು ವಿಷಯ ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ.
ಮುಖ್ಯಶಿಕ್ಷಕಿಯಾಗಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿ, ಉಪಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿರುವ ಡಾ.ಎಚ್.ಎಸ್.ದಾಕ್ಷಾಯಿಣಿ ಅವರು ಪಿಎಚ್.ಡಿ ಪದವಿ ಪಡೆದಿರುವುದಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರ ಸಂಘ, ಮುಖ್ಯಶಿಕ್ಷಕರ ಸಂಘ, ದೈಹಿಕ ಶಿಕ್ಷಕರ ಸಂಘ, ಪದವಿಪೂರ್ವ ಉಪನ್ಯಾಸಕ ಸಂಘಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.