ಕಂಟೋರಾ ವಿಷನ್ ಟೆಕ್ನಾಲಜಿಯನ್ನು ಪರಿಚಯಿಸಿದ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

8/22/20251 min read

ಮಹದೇವಪುರ: ಹೆಚ್ಚು ಸಮಯ ಸ್ಕ್ರಿನ್ ವೀಕ್ಷಣೆ ಮತ್ತು ಹೊರಾಂಗಣ ಚಟುವಟಿಕೆ ಕಡಿಮೆಯಾದ ಕಾರಣದಿಂದ ಬೆಂಗಳೂರಿನಲ್ಲಿ ಕಳೆದ ಒಂದು ದಶಕದಲ್ಲಿ ಮೈಯೋಪಿಯಾ ಮತ್ತು ಆಸ್ಟಿಗ್ಮಾಟಿಸಂ ಪ್ರಕರಣಗಳಲ್ಲಿ ಹೆಚ್ಚಳ ಸುಧಾರಿತ ಕಂಟೋರಾ ವಿಷನ್ ಟೆಕ್ನಾಲಜಿಯನ್ನು ಪರಿಚಯಿಸಿದ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್.

ಹೆಚ್ಚು ಸ್ಕ್ರೀನ್ ನೋಡುವ ಮಕ್ಕಳು, ಯುವಕರು ಮತ್ತು ಐಟಿ ವೃತ್ತಿಪರರಲ್ಲಿ ಮಯೋಪಿಯಾ ಮತ್ತು ಆಸ್ಟಿಗ್ಮಾಟಿಸಂ ನಂತಹ ರಿಫ್ರಾಕ್ಟಿವ್ ಪ್ರಕರಣಗಳ ಆತಂಕಕಾರಿ ಹೆಚ್ಚಳಕ್ಕೆ ಬೆಂಗಳೂರು ಸಾಕ್ಷಿಯಾಗಿದೆ ಎಂದು ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‌ನ ವೈದ್ಯರು ತಿಳಿಸಿದರು.

ಡಿಜಿಟಲ್ ಸ್ಕ್ರೀನ್ ನೋಡುವ ಸಮಯ ಹೆಚ್ಚುತ್ತಿರುವುದು ಮತ್ತು ಹೊರಾಂಗಣ ಚಟುವಟಿಕೆ ಕಡಿಮೆ ಆಗುತ್ತಿರುವುದರ ಜೊತೆಗೆ ಹೆಚ್ಚು ಬೇಡಿಕೆ ಇರುವ ಶೈಕ್ಷಣಿಕ ಮತ್ತು ಕಾರ್ಯದ ಒತ್ತಡದಿಂದಾಗಿ ಈ ಪ್ರಕರಣಗಳಲ್ಲಿ ಹೆಚ್ಚಳ ಕಾಣುತ್ತಿದೆ. ಕರ್ನಾಟಕದಲ್ಲಿ ಈ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ, ಬೆಂಗಳೂರಿನಲ್ಲಿ ವೇವ್‌ಲೈಟ್ ಇಘಿ೫೦೦ ಕಂಟೋರಾ ಎಕ್ಸಿಮರ್ ಲೇಸರ್ ಎಂಬ ಹೊಸ ಮಶಿನ್ ಅನ್ನು ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಬಿಡುಗಡೆ ಮಾಡಿದ್ದು, ಇದು ಸುಧಾರಿತ ಟೋಪೋಗ್ರಫಿ ಮಾರ್ಗದರ್ಶಿತ ಲಸಿಕ್ ಸಿಸ್ಟಮ್ ಆಗಿದೆ. ಇದು ಅಧಿಕ ನಿಖರ ಮತ್ತು ಕಸ್ಟಮೈಸ್ ಮಾಡಿದ ಚಿಕಿತ್ಸೆಗಳನ್ನು ನೀಡುವ ಮೂಲಕ ಸ್ಪಷ್ಟ ದೃಷ್ಟಿಯನ್ನು ಪಡೆಯಲು ರೋಗಿಗಳಿಗೆ ಸಹಾಯ ಮಾಡುತ್ತದೆ.

ಈ ಸಂದರ್ಭದಲ್ಲಿ ಧೀರಜ್, ಉಪಾಧ್ಯಕ್ಷರು ,ಡಾ. ಅಮೋದ್ ನಾಯಕ್, ಕ್ಲಿನಿಕಲ್ ಸೇವೆಗಳ ಮುಖ್ಯಸ್ಥರು,ಡಾ. ಸಂಜನಾ ವತ್ಸ, ಕಾರ್ನಿಯಾ ಮತ್ತು ವಕ್ರೀಭವನ ಕಣ್ಣಿನ ಶಸ್ತ್ರಚಿಕಿತ್ಸಕಿ ಮತ್ತು ಡಾ. ನಿಹಾರಿಕಾ - ವಕ್ರೀಭವನ ಶಸ್ತ್ರಚಿಕಿತ್ಸಕಿ ಮತ್ತಿತರರು ಇದ್ದರು