ಸಮೀಕ್ಷೆ ವೇಳೆ ಜಾತಿ ಕಲಂನಲ್ಲಿ ರೆಡ್ಡಿ ಎಂದೇ ನಮೂದಿಸಿ: ಜಗದೀಶ್ ರೆಡ್ಡಿ

ಸ್ಥಳೀಯ ಸುದ್ದಿಜಿಲ್ಲಾ ಸುದ್ದಿ

ರಾಘವೇಂದ್ರ ಹೆಚ್.ಎ

9/19/20251 min read

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ 7 ಸಾವಿರಕ್ಕಿಂತಲೂ ಅಧಿಕ ರೆಡ್ಡಿ ಜನಾಂಗದ ಜನಸಂಖ್ಯೆ ಇದ್ದರೂ ಸಹ ಬೆಂ.ಗ್ರಾಮಾಂತರ ಜಿಲ್ಲೆಯಾದ್ಯಂತ ಸೇರಿ ಕೇವಲ ಸುಮಾರು 7 ಸಾವಿರ ಜನಸಂಖ್ಯೆ ಮಾತ್ರ ಇದ್ದಾರೆಂದು ಕೆಲವರು ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಇದು ಸರಿಯಲ್ಲ ಇದನ್ನು ನಾವು ವಿರೋಧಿಸುತ್ತೇವೆ ಎಂದು ವೇಮನ ರೆಡ್ಡಿ ಸಂಘದ ಅಧ್ಯಕ್ಷರಾದ ಜಗದೀಶ್​ ರೆಡ್ಡಿಯವರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವತಿಯಿಂದ ಹಿಂದುಳಿದ ವರ್ಗಗಳ ಆಯೋಗವು ಇದೀಗ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಸಮೀಕ್ಷೆ ವೇಳೆ ಸಮೀಕ್ಷೆಗೆ ಬರುವವರ ಬಳಿ ಜಾತಿ ಕಾಲಂ ನಲ್ಲಿ ರೆಡ್ಡಿ ಮತ್ತು ಉಪಜಾತಿ ಕಲಂನಲ್ಲಿ ಒಕ್ಕಲಿಗ ಎಂದು ನಮೂದಿಸಬೇಕು , ಸಮೀಕ್ಷೆ ವೇಳೆ ಸರಿಯಾದ ಮಾಹಿತಿ ನೀಡದೇ ಇದ್ದಲ್ಲಿ ನಮ್ಮ ಸಮುದಾಯಕ್ಕೆ ಸರ್ಕಾರದ ವತಿಯಿಂದ ಸಿಗಬೇಕಾದ ಆರ್ಥಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಇತರೇ ವಿಭಾಗಗಳಲ್ಲಿ ನಮಗೆ ಸಾಮಾಜಿಕ ನ್ಯಾಯ ಸಿಗುವುದಿಲ್ಲ ಎಂದರು.

ಈ ವೇಳೆ, ವೆಮನ ರೆಡ್ಡಿ ಸಂಘದ ಜನರಲ್ ಸೆಕ್ರೇಟರಿ ಹನುಮಂತರೆಡ್ಡಿ ಸೇರಿದಂತೆ ಉಪಾಧ್ಯಕ್ಷ ಶಿವಾರೆಡ್ಡಿ, ಪ್ರಧಾನ ರೆಡ್ಡಿ ಹನಮಂತ ರೆಡ್ಡಿ, ಶ್ರೀನಿವಾಸ್​ ರೆಡ್ಡಿ, ಚಂಗಪ್ಪ ರೆಡ್ಡಿ.

ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group : https://chat.whatsapp.com/Fj6L4Eak7N994zl2QHSpHK