Electric Bike: ನಡುರಸ್ತೆಯಲ್ಲಿ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್
ಕ್ರೈಮ್ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ : ಅಂಗಡಿ ಮುಂಭಾಗ ನಿಲ್ಲಿಸಿದ್ದ ಎಲೆಕ್ಟ್ರಿಕ್ ಬೈಕ್ ಏಕಾಏಕಿ ಹೊತ್ತಿ ಉರಿದಿರುವ ಘಟನೆ ನಗರದ ಕೊಂಗಾಡಿಯಪ್ಪ ರಸ್ತೆ ವಾಸವಿ ಕಲ್ಯಾಣ ಮಂಟಪದ ಮುಂಭಾಗ ನಡೆದಿದೆ.
ಜಪಾನ್ ಮೂಲದ ಒಕಿನೋವ ಕಂಪೆನಿಯ ಎಲೆಕ್ಟ್ರಿಕ್ ಬೈಕ್ ಇದಾಗಿದೆ. ನಗರದ ವಿಜಯಾ ರೇಡಿಯೋಸ್ ಅಂಗಡಿ ಮುಂದೆ ನಿಲ್ಲಿಸಿದ್ದಾಗ ಈ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಲಾಗೆಯಿಂದ ದಟ್ಟ ಹೊಗೆ ಆವರಿಸಿಕೊಂಡಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.
ನಗರದ ಚಂದ್ರಶೇಖರ್ ಎಂಬುವವರಿಗೆ ಸೇರಿದ ಎಲೆಕ್ಟ್ರಿಕ್ ಬೈಕ್ ಇದಾಗಿದ್ದು ಕಳೆದ ನಾಲ್ಕು ವರ್ಷಗಳ ಹಿಂದೆ ಒಕಿನೋವಾ ಕಂಪೆನಿಯ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದೆ ಇದುವರೆಗೂ ಯಾವುದೇ ಸಮಸ್ಯೆ ಬಂದಿರಲಿಲ್ಲ ಆದರೇ ಇತ್ತೀಚೆಗೆ ಬೈಕ್ ಗೆ ನೂತನ ಬ್ಯಾಟರಿ ಬದಲಾಯಿಸಿದ್ದೆ, ಇದೀಗ ಏಕಾಏಕಿ ಹೊತ್ತಿ ಉರಿದಿದೆ ಎಂದು ತಮ್ಮ ಅಳಲನ್ನು ಮಾಧ್ಯಮಗಳ ಮುಂದೆ ತೋಡಿಕೊಂಡರು.
ಸದ್ಯ ಈ ಘಟನೆಯೂ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.