ಶಿರಹಟ್ಟಿಯಲ್ಲಿ ಆಧಾರ್ ಕಾರ್ಡ್ ಮಾಡಿಕೊಡಲು ಗ್ರಾಹಕರಿಂದ ಅಧಿಕ ಹಣ ಸುಲಿಗೆ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

1/23/20261 min read

ಗದಗ: ಮಕ್ಕಳ ಹೊಸ ಆಧಾರ್ ಕಾರ್ಡ್ ಮಾಡಲು ಹಾಗೂ ತಿದ್ದುಪಡಿಗೆ ಸರಕಾರದ ನಿಯಮದಂತೆ ರೂ.50 ರಿಂದ 100 ರೂ.ವರಗೆ ಇದೆ. ಆದರೆ ಶಿರಹಟ್ಟಿ ಪಟ್ಟಣದಲ್ಲಿ ಇರುವ ಸಿಎಸ್‌ಸಿ ಕೇಂದ್ರದಲ್ಲಿ ಆಧಾರ್ ಕಾರ್ಡ್ ಮಾಡಿಸಲು ಹಾಗೂ ತಿದ್ದುಪಡಿಗೆ ಬರುವ ಗ್ರಾಹಕರಿಂದ 500 ರೂ.ಹಣ ತೆಗೆದುಕೊಂಡು ಹಗಲು ದರೊಡೆ ಮಾಡುವ ಮೂಲಕ ಬಡ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಬಿಎಸ್ಎನ್ಎಲ್ ಕಛೇರಿಯಲ್ಲಿ ಇರುವ ಸಿ.ಎಸ್.ಸಿ ಕೇಂದ್ರದ ಸಿಬ್ಬಂದಿಗಳು ಗ್ರಾಹಕರಿಂದ ಅಧಿಕ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಗ್ರಾಹಕರಿಂದ ಆರೋಪ ಕೇಳಿ ಬಂದಿದೆ.

ಕಳೆದ ಬುಧವಾರ ಈ ಸಿ.ಎಸ್.ಸಿ ಕೇಂದ್ರದಲ್ಲಿ ಕೆಲಸ ಮಾಡುವ ಶ್ರೀಕಾಂತ ಎನ್ನುವ ವ್ಯಕ್ತಿಯು ಹಂಗನಕಟ್ಟಿ ಗ್ರಾಮದ ಹನುಮಂತ ಎಂಬ ಗ್ರಾಹಕನಿಂದ ಮಗುವಿನ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು 500 ರೂ.ಹಣ ತೆಗೆದುಕೊಂಡಿದ್ದಾರೆ ಎಂದು ಮಾಧ್ಯಮದ ಮೂಲಕ ಗ್ರಾಹಕನು ಹೇಳಿಕೆ ನೀಡಿದ್ದಾರೆ.

ಸಿ.ಎಸ್.ಸಿ ಕೇಂದ್ರದ ಸಿಬ್ಬಂದಿ ಶ್ರೀಕಾಂತ್ ಎಂಬಾತನು ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಮನಸ್ಸಿಗೆ ತೊಚಿದಂತೆ ಗ್ರಾಹಕರಿಂದ ನಿತ್ಯವೂ ಅಧಿಕ ಹಣ ವಸೂಲಿ ಮಾಡುವ ಮೂಲಕ ಹಗಲು ದರೊಡೆ ಮಾಡುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸುತ್ತಿದ್ದಾರೆ.

ಕಣ್ಮುಚ್ಚಿ ಕುಳಿತಿರುವ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈಗಲಾದರೂ ಸಹ ಎಚ್ಚೆತ್ತುಕೊಳ್ಳುವ ಮೂಲಕ ಸಾರ್ವಜನಿಕರಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿರುವ ಈ ಸಿ.ಎಸ್.ಸಿ ಕೇಂದ್ರವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ.ಈ ಬಗ್ಗೆ ಸಂಬಂಧಿಸಿದ ಇಲಾಖೆಯವರೊಂದಿಗೆ ಮಾತನಾಡುವ ಮೂಲಕ ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲು ನಾನು ಸೂಚಿಸುತ್ತೇನೆ ಎಂದು ಶಿರಹಟ್ಟಿ ತಾಲೂಕು ಕಾರ್ಯ ನಿರ್ವಾಹಕ ದಂಡಾಧಿಕಾರಿಗಳು ಕೆ.ರಾಘವೇಂದ್ರ ರಾವ್ ಹೇಳಿದ್ದಾರೆ.