ಅ.2 ರಿಂದ ಹಳ್ಳಿಕಾರ್ ರಾಸುಗಳ ಫ್ಯಾಷನ್ ಶೋ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

9/25/20251 min read

ಹಳ್ಳಿಕಾರ್ ತಳಿಯನ್ನು ಉಳಿಸುವ ನಿಟ್ಟಿನಲ್ಲಿ ಅಕ್ಟೋಬರ್ 2 ರಂದು ತಾಲ್ಲೂಕಿನ ತೂಬಗೆರೆ ಹೋಬಳಿಯ ದೊಡ್ಡತಿಮ್ಮನಹಳ್ಳಿ ಗ್ರಾಮದ ಶ್ರೀ ಸಪ್ಪಲಮ್ಮ ದೇವಿ ದೇವಾಲಯದ ಬಳಿ ಹಳ್ಳಿಕಾರ್ ಫ್ಯಾಷನ್ ಶೋ ಆಯೋಜನೆ ಮಾಡಲಾಗಿದೆ ಎಂದು ನವಕರ್ನಾಟಕ ಯುವ ಶಕ್ತಿ ವೇದಿಕೆ ಮುಖಂಡರಾದ ಅಂಬರೀಶ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಅವರು ಮಾತನಾಡಿ, ಹಳ್ಳಿಕಾರ್ ಫ್ಯಾಷನ್ ಶೋ ಕುರಿತು ಮಾಹಿತಿ ನೀಡಿದರು. ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಒಟ್ಟಾರೆ ಒಂದು ಹಳ್ಳಿಕಾರ್ ತಳಿಯ ಜೋಡಿಯನ್ನು “ಚಾಂಪಿಯನ್’ ಎಂದು ಆಯ್ಕೆ ಮಾಡಿ ಆ ರಾಸುಗಳ ಮಾಲೀಕರಿಗೆ ಹೀರೋ ಕಂಪೆನಿಯ ದ್ವಿಚಕ್ರ ವಾಹನವನ್ನು ಬಹುಮಾನವಾಗಿ ಕೊಡಲಾಗುವುದು ಎಂದು  ತಿಳಿಸಿದರು.

ಒಟ್ಟು 5 ವಿಭಾಗಗಳಲ್ಲಿ ಈ ಹಳ್ಳಿಕಾರ್ ಫ್ಯಾಷನ್ ಶೋ ನಡೆಯಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಹಳ್ಳಿಕಾರ್ ತಳಿಯ ರಾಸುಗಳಿಗೆ ಸಮಾಧಾನಕರ ಬಹುಮಾನ ನೀಡಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ರಾಸುಗಳನ್ನು ನೋಂದಣಿ ಮಾಡಿಸುವಂತೆ ಮನವಿ ಮಾಡಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಕೋರಿದೆ : +917259429132. 

ಈ ವೇಳೆ ರೈತ ಮುಖಂಡರು ಇದ್ದರು. 

ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group https://chat.whatsapp.com/Fj6L4Eak7N994zl2QHSpHK