ಟಿಸಿ ಪಾಳ್ಯ ಬಜಾಜ್ ಶೋರೂಮ್ ನಲ್ಲಿ ಅಗ್ನಿ ಅವಘಡ ,4 ಕೋಟಿಗೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

1/22/20261 min read

ಕೆ.ಆರ್.ಪುರ :ಬಜಾಜ್ ಶೋರೂಮ್ ನಲ್ಲಿ ಅಗ್ನಿ ಅವಘಡ ಉಂಟಾಗಿ 4 ಕೋಟಿಗೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿ ಆಗಿರುವ ಘಟನೆ ಟಿಸಿ ಪಾಳ್ಯ ಸಿಗ್ನಲ್ ಬಳಿಯ ಪ್ರವೀಣ್ ಮೋಟಾರ್ಸ್ ನಲ್ಲಿ ಬುಧವಾರ ರಾತ್ರಿ ನಡೆದಿದೆ.

ಬುಧವಾರ ರಾತ್ರಿ ಶೋರೋಮ್ ಬಾಗಿಲು ಹಾಕಿ ಮನೆಗೆ ತೆರಳಿದ ವೇಳೆ ಶೋರೋಮ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು,

ನೂರಕ್ಕೂ ಹೆಚ್ಚು ಹೊಸ ಬೈಕ್ ಗಳು ಹಾಗೂ 150 ರಿಂದ 200 ಸರ್ವಿಸ್ ಗೆ ಬಂದಿದಾ ಬೈಕ್ ಗಳು ಭಸ್ಮವಾಗಿದೆ. ಈ ಶೋರೂಮ್ ಕೆ.ಆರ್.ಪುರ ಕ್ಷೇತ್ರದ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಗೆ ಸೇರಿದ ಮಳಿಗೆ ಯಾಗಿದ್ದು ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾತ್ರಿ 9:30 ಸುಮಾರಿಗೆ ಆವರಿಸಿರುವ ಬೆಂಕಿ ಇಡೀ ಶೋರೂಮ್ ಸುಟ್ಟು ಕರಕಲಾಗಿದೆ,ಯಾವ ಕಾರಣಕ್ಕೆ ಬೆಂಕಿ ಆವರಿಸಿದೆ ಎಂದು ಇನ್ನು ತಿಳಿದು ಬಂದಿಲ್ಲ.

ಬೆಂಕಿ ಅವಘಡದಿಂದ ಸುಮಾರು 4 ಕೋಟಿ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದ್ದು,ಬೆಂಕಿ ಅವಘಡದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ‌,ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಬೆಂಕಿ ನಂದಿಸಲು ಸತತ ಪ್ರಯತ್ನ ದಿಂದ ಬೆಂಕಿ ನಂದಿಸಲಾಗಿದೆ.

ಒಟ್ಟಾರೆ ಸಿಸಿಟಿವಿ ಸೇರಿದಂತೆ ಏಲ್ಲ ವಸ್ತುಗಳು ಬೆಂಕಿ ಆಹುತಿಯಾಗಿದ್ದು, ಕೆಆರ್ ಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ತನಿಖೆ ನಂತರ ವಷ್ಟೇ ಬೆಂಕಿ ಅವಘಡಕ್ಕೆ ಕಾರಣ ಬೆಳಕಿಗೆ ಬರಲಿದೆ.