ಅಂಬೇಡ್ಕರ್ ನಗರ ಸರ್ಕಾರಿ ಶಾಲೆಯಲ್ಲಿ ಧ್ವಜಾರೋಹಣ.
ಸ್ಥಳೀಯ ಸುದ್ದಿ


ಕೆ.ಆರ್.ಪುರ: ರಾಮಮೂರ್ತಿನಗರದ ಅಂಬೇಡ್ಕರ್ ನಗರ ಸರ್ಕಾರಿ ಫ್ರೌಡ ಶಾಲೆಯಲ್ಲಿ 77 ನೇ ಗಣರಾಜ್ಯೋತ್ಸವವನ್ನ ಅದ್ದೂರಿಯಾಗಿ ಆಚರಿಸಲಾಯಿತು.
ಡಿಎಂಸಿ ಮುಖ್ಯಸ್ಥ ಇಟಾಚಿ ಮಂಜುನಾಥ್ಧ್ವಜಾರೋಹಣ ಪಾಲ್ಗೊಂಡು ಮಾತನಾಡಿ, ದೇಶದ ಸ್ವಾತಂತ್ರ‍್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ ಅನೇಕ ಮಹನೀಯರನ್ನು ವಿದ್ಯಾರ್ಥಿಗಳು ಸೇರಿ ಪ್ರತಿಯೊಬ್ಬರು ಸ್ಮರಿಸುವುದರ ಜತೆಗೆ ರಾಷ್ಟಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾರತ ಸಂವಿಧಾನ ರಚಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ.ನಾವೆಲ್ಲರೂ ಜೀವನದಲ್ಲಿ ಸಂವಿಧಾನದ ಪೀಠಿಕೆಯ ಆಶಯ ಅರಿತು ಪಾಲನೆ ಮಾಡಬೇಕು ಎಂದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ರಾಷ್ಟ್ರದ ಏಕತೆಯನ್ನು ಕಾಪಾಡಲು ಸಂವಿಧಾನದ ಆಶಯಗಳನ್ನು ಪಾಲಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ ಎಂದರು.
ಕೆ.ಆರ್.ಪುರ ಕ್ಷೇತ್ರಲ್ಲೆ ಅಂಬೇಡ್ಕರ್ ನಗರ ಶಾಲೆ ದಿನೇ ದಿನೇ ಹೆಸರುವಾಸಿಯಾಗಿದೆ. ನಮ್ಮ ಶಾಲೆಯ ಮಕ್ಕಳು ದೆಹಲಿಯವರೆಗೆ ಹೋಗಿ ಕ್ರೀಡೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿರುವುದು ನಮ್ಮ ಕ್ಷೇತ್ರಕ್ಕೆ ಹಾಗೂ ನಮ್ಮ ಶಾಲೆಗೆ ಹೆಮ್ಮೆ ಎಂದರು.
ಈ ಶಾಲೆಗೆ ಅಭಿವೃದ್ಧಿ ಮಾಡಲು ನಮ್ಮ ಶಾಸಕರಾದ ಭೈರತಿ ಬಸವರಾಜ್ ಅವರು ಎರಡು ಕೋಟಿ ಅನುದಾನ ನೀಡಿ ಇಲ್ಲಿನ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ ಎಂದರು.
ಅಂಬೇಡ್ಕರ್ ನಗರ ಸರ್ಕಾರಿ ಶಾಲೆಯಲ್ಲಿನ ಮಕ್ಕಳು ಪ್ರತಿಭಾವಂತ ಮಕ್ಕಳು ಅವರಲ್ಲಿ ಅತ್ಯನ್ನತ ಪ್ರತಿಭೆಗಳು ಅಡಗಿದ್ದು ಅದಕ್ಕೆ ತಕ್ಕ ಪ್ರೋತ್ಸಾಹ ಅವಶ್ಯಕವಿದೆ ಎಂದು ಹೇಳಿದರು.
ಈಗಾಗಲೇ ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಹಲವು ಪ್ರಶಸ್ತಿಗಳನ್ನು ತರುವ ಮೂಲಕ ಸರ್ಕಾರಿ ಶಾಲೆ ಕೀರ್ತಿ ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.
ಸರ್ಕಾರಿ ಶಾಲೆ ಅಭಿವೃದ್ಧಿ ಗೆ ಎಲ್ಲಾ ರೀತಿಯ ಸಹಕಾರ ಅತ್ಯಗತ್ಯ. ಆದ್ದರಿಂದ ಇಲ್ಲಿ ಯಾವುದೇ ಒಂದು ಪಕ್ಷಕ್ಕೆ ಸೀಮಿತ ಮಾಡದೆ ಎಲ್ಲಾ ಪಕ್ಷದವರನ್ನು ಆಹ್ವಾನಿಸಿ ಸಂಘ ಸಂಸ್ಥೆಗಳ ಸಹಕಾರ ಕೋರಲಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ನಗರ ಸರ್ಕಾರಿ ಶಾಲೆ ಅಭಿವೃದ್ಧಿ ಗೆ ಶಾಸಕ ಬೈರತಿ ಬಸವರಾಜ ಅವರ ಕೊಡುಗೆ ಅಪಾರ. ಅವರ ಸಹಕಾರದಿಂದ ಹಳ್ಳದಲ್ಲಿದ್ದ ಶಾಲೆ ಈ ಮಟ್ಟಕ್ಕೆ ಬೆಳೆಯುವಂತಾಯಿತು ಎಂದು ಹೇಳಿದರು.
ಈಗ ನಮ್ಮ ಶಾಸಕರು ಸಮಸ್ಯೆಯಲ್ಲಿ ಸಿಲುಕಿದ್ದು ಅದರಿಂದ ಆದಷ್ಟು ಬೇಗ ಹೊರಬರುತ್ತಾರೆ ಹಾಗೂ ನಾವೆಲ್ಲರೂ ಅವರ ಹಿಂದೆ ಯಾವಾಗಲೂ ಇರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಲಣ್ಣ, ಸಾಕಮ್ಮ, ಪದ್ಮಾವತಿ ಶೇಖರ್, ಶ್ರೀರಡಮರೆಡ್ಡಿ, ಶಂಭುಲಿಂಗೇಗೌಡ, ಆಂಜಿನಪ್ಪ, ಬಂಗಾರಿ ಮೂರ್ತಿ, ಪ್ರಾಂಶುಪಾಲರಾದ ಪ್ರಸಾದ್, ಪ್ರೌಢ ಶಾಲಾ ಮುಖ್ಯಸ್ಥೆ ಬಿ.ವಿ.ಭಾರತಿ, ಪ್ರಾಥಮಿಕ ಶಾಲಾ ಮುಖ್ಯಸ್ಥೆ ವಿಜಯಲಕ್ಷ್ಮೀ ಗ್ರಾಮದ ಮುಖಂಡರು, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.