SC/ST ವಾರ್ಡ್ನ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಹಾರ ಸಚಿವ ಮುನಿಯಪ್ಪ ವಿರೋಧ, ಸ್ಥಳೀಯರು ಆಕ್ರೋಶ
ಸ್ಥಳೀಯ ಸುದ್ದಿರಾಜ್ಯ


ಬೆಂ.ಗ್ರಾಮಾಂತರ: ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ ಸಮಾರಂಭದಲ್ಲಿ ದೊಡ್ಡಬಳ್ಳಾಪುರ ಚುನಾಯಿತ ವಾರ್ಡ್ ಸದಸ್ಯರು ಸೇರಿದಂತೆ ನಗರದ ಯಾವೊಬ್ಬ ಕಾಂಗ್ರೆಸ್ ಸದಸ್ಯರು. ಕಾರ್ಯಕರ್ತರಿಗಾಗಲಿ ಆಹ್ವಾನ ನೀಡದೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ಸಚಿವರಾದ ಕೆ.ಹೆಚ್ ಮುನಿಯಪ್ಪನವರು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸದಸ್ಯರನ್ನು ಜೊತೆಯಲ್ಲಿರಿಸಿಕೊಂಡು ಸ್ಥಳಿಯ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತರನ್ನ ಕಡೆಗಣಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
2025-26ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಸೆ.8ರಂದು ಸೋಮವಾರ ದೊಡ್ಡಬಳ್ಳಾಪುರ ನಗರದ ಕಚೇರಿಪಾಳ್ಯ ವಾರ್ಡ್ ವ್ಯಾಪ್ತಿಗೆ ಬರುವ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕ್ರೀಡಾಕೂಟಕ್ಕೆ ಆಹಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ನವರು ಆಗಮಿಸಿ ಉದ್ಘಾಟಿಸಿದರು. ಈ ಕಾರ್ಯಕ್ರದಲ್ಲಿ ಕಚೇರಿಪಾಳ್ಯ ವಾರ್ಡ್ನ ಸದಸ್ಯರಾದ ರೂಪಿಣಿ ಮಂಜುನಾಥ್ ರಿಗೂ ಆಹ್ವಾನ ನೀಡಿಲ್ಲ, ಸ್ಥಳೀಯ ಕಾಂಗ್ರೆಸ್ ಮುಖಂಡರಿಗೂ ಆಹ್ವಾನ ನೀಡಿಲ್ಲ. ಹಾಗಾದರೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಚುನಾಯಿತ ಜನಪ್ರತಿನಿದಿನಗಳು ನಗರಸಭೆ ಸದಸ್ಯರು ಯಾರು ಇಲ್ಲವೇ? ಹಾಗಾದರೆ ನಮ್ಮ ದೊಡ್ಡಬಳ್ಳಾಪುರ ತಾಲೂಕು ಕಾಂಗ್ರೆಸ್ ಪಕ್ಷದಲ್ಲಿ ಯಾರು ಹೇಳುವವರು ಕೇಳುವವರು ಇಲ್ಲದಂತಾಗಿದೆಯೇ ಎಂದು ಸ್ಥಳೀಯ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಸಚಿವರ ನಿರಾಕರಣೆ:
ದೊಡ್ಡಬಳ್ಳಾಪುರ ನಗರದ 28ನೇ ವಾರ್ಡ್ ಕಚೇರಿಪಾಳ್ಯದಲ್ಲಿ ಸೆ.8ರಂದು ಸೋಮವಾರ ವಾರ್ಡ್ ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ಚಂರಡಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಗುದ್ದಲಿಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುವಂತೆ ಶಾಸಲ ಧೀರಜ್ ಮುನಿರಾಜು ಸೇರಿದಂತೆ ವಾರ್ಡ್ ಸದಸ್ಯರಾದ ರೂಪಿಣಿ ಮಂಜುನಾಥ್ ಮತ್ತು ನಗರಸಭಾ ಸದಸ್ಯರು ಮತ್ತು ಹಲವು ಕಾರ್ಯಕರ್ತರು ಮನವಿ ಮಾಡಿಕೊಂಡರು. ಆದರೇ, ಸಚಿವರು ಕಾಮಗಾರಿಗೆ ಚಾಲನೆ ನೀಡಲು ನಿರಾಕರಿಸಿದ್ದಾರೆ ಎಂದು ಮುಖಂಡರಾದ ಮಂಜುನಾಥ್ ಅವರು ಆರೋಪಿಸಿದ್ದಾರೆ.
ಇನ್ನು, ಈ ಕುರಿತು ಪ್ರಜಾಭಾರತ್ ವೆಬ್ ಪೋರ್ಟಲ್ನೊಂದಿಗೆ ಮಾತನಾಡಿದ ಮಂಜುನಾಥ್ ರವರು, ಪರಿಶಿಷ್ಟ ಜಾತಿ ಸಮುದಾಯದ ಹೆಣ್ಣುಮಗಳು ಜನಪ್ರತಿನಿಧಿಯಾಗಿರುವ ನಮ್ಮ ವಾರ್ಡ್ನಲ್ಲಿ ಇರುವವರೆಲ್ಲೂ ನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ದಲಿತ, ಹಿಂದುಳಿದ ಜನಾಂಗದವರು. ಈ ವಾರ್ಡ್ ಹಲವು ವರ್ಷಗಳಿಂದ ಸರಿಯಾದ ರಸ್ತೆ, ಚರಂಡಿ ವ್ಯವಸ್ಥೆಗಳಿಲ್ಲದೇ ಅಭಿವೃದ್ದಿ ಕುಂಟಿತವಾಗಿತ್ತು ಕಳೆದ ಮೂರ್ನಾಲ್ಕು ವರ್ಷಗಳಿಂದ ವಾರ್ಡ್ನ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದೇವೆ. ದಲಿತ ಸಮುದಾಯವದರೇ ಹೆಚ್ಚಾಗಿ ವಾಸಿಸುತ್ತಿರುವ ನಮ್ಮ ವಾರ್ಡ್ನ ಕಾರ್ಯಕ್ರಮಕ್ಕೆ ಒಬ್ಬ ದಲಿತ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪನವರು ಬಾರದೇ ಒಬ್ಬ ದಲಿತ ಹೆಣ್ಣುಮಗಳ ಆತ್ಮಗೌರವಕ್ಕೆ ಆಗೌರವ ತೋರಿದ್ದಾರೆ. ಸಚಿವರ ಆಗಮನಕ್ಕಾಗಿ ಮುಂಜಾನೆಯಿಂದಲೇ ಕಾದು ಕುಳಿತಿದ್ದ ವಾರ್ಡ್ನ ನಿಷ್ಟಾವಂತ ಕಾರ್ಯಕರ್ತರನ್ನು ನಿರಾಸೆಗೊಳಿಸಿದ್ದಾರೆ. ಅಲ್ಲದೇ ಪರಿಶಿಷ್ಟ ಜನಾಂಗದ ನಾಯಕರಾಗಿದ್ದು ಜನರಿಗೆ ಏನು ಸಂದೇಶ ನೀಡಲು ಹೊರಟಿದ್ದಾರೆ. ಇದನ್ನು ಜನರಿಗೆ ತಿಳಿಸಬೇಕು ಎಂದು ಪ್ರಶ್ನೆ ಮಾಡಿದರು.
ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group : https://chat.whatsapp.com/Fj6L4Eak7N994zl2QHSpHK