8 ಕೋಟಿ ಮೌಲ್ಯದ ಸರ್ಕಾರಿ ಗ್ರಾಮಠಾಣಾ ಆಸ್ತಿಯನ್ನು ಸಂರಕ್ಷಣೆ ಮಾಡಿದ ಗ್ರಾ.ಪಂ.ಮಾಜಿ ಅಧ್ಯಕ್ಷ ಮುನಿಯಪ್ಪ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ

6/15/20251 min read

ಮಹದೇವಪುರ (ಕಾಡ ಅಗ್ರಹಾರ): ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯಕಾರಿಣಿ ಸಮಿತಿ ನಿರ್ಣಯದ ಮೇರೆಗೆ ಕಾಡಾಗ್ರಹಾರ ಗ್ರಾಮದ ಸುಮಾರು 20 ಗುಂಟೆಯ 8 ಕೋಟಿ ಮೌಲ್ಯದ ಸರ್ಕಾರಿ ಗ್ರಾಮಠಾಣಾ ಆಸ್ತಿಯನ್ನು ಸಂರಕ್ಷಣೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಹಾಗೂ ನಿವಾಸಿ ಮುನಿಯಪ್ಪ ಅವರು ತಿಳಿಸಿದರು.

ಬಿದರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಡಾಗ್ರಹಾರ ಗ್ರಾಮದ ಸ್ವತ್ತಿನ ಸಂಖ್ಯೆ 51/1ರಲ್ಲಿ 125 ಉದ್ದ ಹಾಗೂ 170 ಅಗಲದ ಸುಮಾರು 21250 ಅಡಿಗಳ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದು,ಇದರ ವಿರುದ್ಧ ಪಂಚಾಯತಿಯಲ್ಲಿ ಬಿದರಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯಕಾರಿಣಿ ಸಮಿತಿ ನಿರ್ಣಯದ ಮೇರೆಗೆ ಕಾಡಾಗ್ರಹಾರ ಗ್ರಾಮದ ಸುಮಾರು ಎಂಟು ಕೋಟಿ ಮೌಲ್ಯದ ಸರ್ಕಾರಿ ಗ್ರಾಮಠಾಣಾ ಆಸ್ತಿಯನ್ನು ಸಂರಕ್ಷಣೆ ಮಾಡಲಾಗಿದೆ.

ಈ ಆಸ್ತಿಯ ಸಂಬಂಧಿಸಿದಂತೆ 2022 ರಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಅವರು ಭೂಕಬಳಿಕೆದಾರ ನಾರಾಯಣ ರೆಡ್ಡಿ ಅವರ ಜೊತೆ ಗೂಡಿ ನಾರಾಯಣರೆಡ್ಡಿ ಅವರ ಹೆಸರಿಗೆ ಖಾತೆ ಮಾಡಲು ಆದೇಶ ನೀಡಿದರು.

ಈ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಅವರ ಆದೇಶದ ವಿರುದ್ದ ಅಂದಿನ ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಯಪ್ಪ ಅವರು ಹೈಕೋರ್ಟ್ ನಲ್ಲಿ ದಾವೆ ಹೂಡಿದರು.

ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲೆಯಾಗಿದ್ದು,ಉಚ್ಚ ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥ ಪಡಿಸಿ ಗ್ರಾಮಪಂಚಾಯಿತಿಗೆ ನಿರ್ಣಯಿಸಲು wp3711/2025 ಆದೇಶ ಮಾಡಿತ್ತು.

ಈ ಆದೇಶದ ಅನ್ವಯ ದಿನಾಂಕ 2025ರ ಮೇ16 ರಂದು ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಆಸ್ತಿ ಯನ್ನು ವಶಕ್ಕೆ ಪಡೆಯಲಾಗಿದೆ.

ಅನಧಿಕೃತವಾಗಿ ದಾಖಲೆಹೊಂದಿದ್ದ ಖಾಸಗಿ ವ್ಯಕ್ತಿಗಳ ವಿರುದ್ಧ ಪಂಚಾಯತಿಯಲ್ಲಿ ಅನುಮೋದನೆಮಾಡಿ ಗ್ರಾಮ ಅಭಿವೃದ್ಧಿಗಾಗಿ ಈ ಸ್ಥಳವನ್ನು ಮೀಸಲಿರಸಲಾಗಿದೆ.

ಈಗಾಗಲೇ ಈ ಜಾಗದಲ್ಲಿ ಸರ್ಕಾರದ ವಿವಿಧ ಸೌಲಭ್ಯಗಳಾದ ಅಂಗನವಾಡಿ ಕೇಂದ್ರ, ಸಮುದಾಯ ಭವನ,ದೇವಾಲಯ, ಕುಡಿಯುವ ನೀರಿಗಾಗಿ ಮೂರು ಬೊರ್ ವೇಲ್ ಗಳು ಆ ಸ್ಥಳದಲ್ಲಇದ್ದು,ಯಥಾಸ್ಥಿತಿ ಮುಂದುವರೆದಿದ್ದು, ಸರ್ಕಾರದ ವಿವಿಧ ಸೌಲಭ್ಯಗಳಿಗೆ ಮೀಸಲಿಡಲಾಗಿದೆ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

ಗ್ರಾಮದ ಯುವಕರಿಗಾಗಿ ಈ ಸ್ಥಳದಲ್ಲಿ ವಾಲಿಬಾಲ್ ಕೋರ್ಟ್ ಹಾಗೂ ಕುಡಿಯುವ ನೀರಿನ ಒವರ್ ಟ್ಯಾಂಕ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ನಾರಾಯಣ ರೆಡ್ಡಿ ಮತ್ತು ಕಾರ್ಯ ನಿರ್ವಾಹಕ ಅಧಿಕಾರಿ ಮಂಜುನಾಥ್ ವಿರುದ್ದ ಆಕ್ರೋಶ.

ಬಂಡೆ ಬೊಮ್ಮಸಂದ್ರ ನಿವಾಸಿಯಾದ ಹಾಗೂ ಪಂಚಾಯತಿ ಸದಸ್ಯರಾಗಿರುವ ಅವರಿಗೆ ನಮ್ಮ ಊರಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಅವರ ಮೂಲ‌ ಸ್ಥಾನನೂ ಇದಲ್ಲ, ಅವರ ಪೂರ್ವಿಕರು ಯಾರು ನೆಲೆಸಿಲ್ಲ,ನಮ್ಮ ಗ್ರಾಮದಲ್ಲಿ ಅಧಿಕಾರನೂ ಮಾಡಿಲ್ಲ ಅವರು ಆದರೆ ನೂರಾರು ವರ್ಷಗಳಿಂದ ಗ್ರಾಮಕ್ಕೆ‌ ಸೇರಿರುವ ಈ ಸ್ಥಳ ನಾರಾಯಣ ರೆಡ್ಡಿಯವರಿಗೆ ಹೇಗೆ ಸ್ವತಃ ಆಗುತ್ತೆ ಎಂದು ಪ್ರಶ್ನೆ ಮಾಡಿದರು.ನನ್ನದು ನಮ್ದು ಎಂದು ಯಾವುದೇ ಪುರಾವೆ ಇಲ್ಲದೇ ಅಧಿಕಾರಿಗಳಿಗೆ, ನ್ಯಾಯಾಲಯಕ್ಕೆ ಸುಳ್ಳು ದಾಖಲೆಗಳನ್ನು ನೀಡುತ್ತಾ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾರ್ಯ ನಿರ್ವಾಹಕ ಅಧಿಕಾರಿ ಮಂಜುನಾಥ್ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ಇಂದು ಮುಂದು ನೋಡದೆ ಖಾತೆ ಮಾಡು ಅನುಮತಿ ನೀಡಿದ್ದಾರೆ.ಅಧಿಕಾರ ಇದೆ ಅಂತ ಅಧಿಕಾರಿಗಳು ಸತ್ಯ ಸತ್ಯತೆಗಳನ್ನ ತಿಳಿಯದೇ ಖಾಸಗಿ ವ್ಯಕ್ತಿಗಳ ಪರವಾಗಿ ಯಾವುದೇ ನಿರ್ಧಾರವನ್ನ ಮಾಡಬಾರದು ಎಂದು ತಿಳಿಸಿದರು.ಗ್ರಾಮಗಳಿಗೆ ಪಂಚಾಯಿತಿಗಳಿಗೆ ಪೂರಕವಾಗಿ ಕೆಲಸ ಮಾಡಬೇಕು ತಿಳಿಸಿದರು.