ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ತಾಯಿ ನಿಧನ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

8/11/20251 min read

ಬಾಗಲಕೋಟೆ: ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ತಾಯಿ ಭೀಮಾಬಾಯಿ (84) ಸೋಮವಾರ ನಿಧನರಾದರು. ಮೃತರು ಮಹದೇವಪುರ ಶಾಸಕಿ ಮಂಜುಳಾ ಅವರ ಅತ್ತೆ. ಮೃತರಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಐವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಅವರ ಅಂತ್ಯಕ್ರಿಯೆ ಇಂದು ಸಂಜೆ 7:30 ಗಂಟೆಗೆ ನೆರವೇರಿಸಲಾಯಿತು.

ಅವರ ಪ್ರೀತಿ, ಮಮತೆ ಮತ್ತು ಆಶೀರ್ವಾದ ನಮ್ಮ ಹೃದಯದಲ್ಲಿ ಸದಾ ಹಸಿರಾಗಿರುತ್ತದೆ. ಜೀವನದಲ್ಲಿ ಅವರು ಕಲಿಸಿದ ಸರಳತೆ ಮತ್ತು ನೀತಿ ಪಾಠಗಳು ನನಗೆ ಸನ್ಮಾರ್ಗದಲ್ಲಿ ನಡೆಯಲು ಸದಾ ಪ್ರೇರಣೆ ನೀಡುತ್ತಿರುತ್ತವೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಕೋರುತ್ತೇನೆ ಎಂದು ತಾಯಿಯ ಬಗ್ಗೆ ಫೇಸ್‌ಬುಕ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.