ಸರ್ವಜನಿಕರ ಆರೋಗ್ಯ ದೃಷ್ಟಿಯಿಂದ ಆಂಬುಲೆನ್ಸ್ ಗಳನ್ನ ಲೋಕಾರ್ಪಣೆ ಮಾಡಿದ ಮಾಜಿ ಸಚಿವ ಲಿಂಬಾವಳಿ
ಸ್ಥಳೀಯ ಸುದ್ದಿ


ಮಹದೇವಪುರ: ಕ್ಷೇತ್ರದ ಬೆಳ್ಳಂದೂರು ವಾರ್ಡಿನ ಕಸವನಹಳ್ಳಿಯ ಓನರ್ಸ್ ಕೋರ್ಟ್ ಬಡಾವಣೆಯಲ್ಲಿ ಮತ್ತು ಆರ್ ಬಿ ಡಿ ಸ್ಟಿಲ್ ವಾಟರ್ ಬಡಾವಣೆ ಹತ್ತಿರ ಆಂಬುಲೆನ್ಸ್ ಅನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿಯವರು ಲೋಕಾರ್ಪಣೆ ಮಾಡಿದರು.
ಲೋಕಾರ್ಪಣೆ ಮಾತನಾಡಿದ ನಂತರ ಮಾತನಾಡಿದ ಅವರು, ಮಹದೇವಪುರ ಟಾಸ್ಕ್ ಫೋರ್ಸ್ ಹಾಗೂ ಭಾರತೀಯ ಜನತಾ ಪಾರ್ಟಿ ಆರ್ ಡಬ್ಲ್ಯೂಎ ಮಹದೇವಪುರ ಮತ್ತು ಮಣಿಪಾಲ ಆಸ್ಪತ್ರೆ ಸಹಭಾಗಿತ್ವದಲ್ಲಿ ಸಾರ್ವಜನಿಕರ ಹಿತದೃಷ್ಟಿಗಾಗಿ ಈ ಆಂಬುಲೆನ್ಸ್ ಗಳ ಲೋಕಾರ್ಪಣೆ ಮಾಡಲಾಗಿದ್ದು, ಆರೋಗ್ಯದ ಅನುಕೂಲಕ್ಕಾಗಿ ಬೆಳ್ಳಂದೂರು ಹಾಗೂ ಸುತ್ತಮುತ್ತಲಿನ ಜನರು ತುರ್ತುಚಿಕಿತ್ಸೆಗಾಗಿ ಆಂಬುಲೆನ್ಸ್'ಗಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ತುರ್ತುಸ್ಥಿತಿ ರೋಗಿಗಳಿಗೆ ಬೇಗ ಆಂಬುಲೆನ್ಸ್' ಸಿಗದೇ ಎಷ್ಟೋ ಜೀವಗಳು ಪ್ರಾಣ ಕಳೆದುಕೊಂಡಿದ್ದು ನೋಡಿದ್ದೇವೆ, ಇಂತಹ ಘಟನೆಗಳು ಮತ್ತೋಮ್ಮೆ ಮರುಕಳಿಸಬಾರದು ಎಂದು ಮಣಿಪಾಲ್ ಆಸ್ಪತ್ರೆ ಮತ್ತು ನಮ್ಮ ಟಾಸ್ಕ್ ಫೋರ್ಸ್ ಸಹಯೋಗದಲ್ಲಿ ಆಸ್ಪತ್ರೆಗೆ ಸಂಚರಿಸುವ ಸಮಯವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಹಾಗೂ ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ನಗರ ಮಂಡಲ ಅಧ್ಯಕ್ಷರಾದ ಶ್ರೀಧರ್ ರೆಡ್ಡಿ, ನಿಕಟಪೂರ್ವ ನಗರಮಂಡಲ ಅಧ್ಯಕ್ಷರಾದ ಮನೋಹರ್ ರೆಡ್ಡಿ ಹಾಗೂ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.