ವಾಲ್ಮೀಕಿ ಜನಾಂಗದ ಬಗ್ಗೆ ಮಾಜಿ ಸಂಸದ ರಮೇಶ್ ಕತ್ತಿ ನಿಂದನಾತ್ಮಕ ಹೇಳಿಕೆ:ಸಮುದಾಯದ ಮುಖಂಡರಿಂದ ಡಿವೈಎಸ್‌ಪಿ ಗೆ ದೂರು
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ : ವಾಲ್ಮೀಕಿ ಜನಾಂಗದ ಬಗ್ಗೆ ಮಾಜಿ ಸಂಸದ ರಮೇಶ್ ಕತ್ತಿ ಅವರು ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ ಅವರ ವಿರುದ್ಧ ಎಸ್.ಸಿ/ಎಸ್.ಟಿ ದೌರ್ಜನ್ಯ ಕಾಯ್ದೆಯಡಿ ಜಾತಿ ನಿಂದನೆ ಪ್ರಕರಣ ದಾಖಲು ಮಾಡುವಂತೆ ವಾಲ್ಮೀಕಿ ಸಮುದಾಯದ ಮುಖಂಡರು ಡಿವೈಎಸ್‌ಪಿ ರವಿ.ಪಿ ಅವರಿಗೆ ದೂರು ನೀಡಿದರು.
ಈ ವೇಳೆ ಮಾತನಾಡಿದ ವಾಲ್ಮೀಕಿ ಸಂಘದ ತಾಲ್ಲೂಕು ಅಧ್ಯಕ್ಷ ಮುನಿಕೃಷ್ಣ ಅವರು, ಬೆಲ್ಲದ ಬಾಗೇವಾಡಿಯ ಮಾಜಿ ಸಂಸದರಾದ ರಮೇಶ್ ಕತ್ತಿರವರು ವಾಲ್ಮೀಕಿ ಜನಾಂಗದವರ ಜಾತಿಯನ್ನು ಹಿಡಿದು "ಬೇಡರ ಸೂಳೆ ಮಕ್ಕಳೆಂದು" ಮುಂತಾದ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಜನಾಂಗದವರನ್ನು ಹೀನಾಯವಾಗಿ ನಿಂದನೆ ಮಾಡಿರುವುದು ಅಕ್ಷಮ್ಯ, ಸಾರ್ವಜನಿಕರ ಹಿತಾಸಕ್ತಿ ಕಾಪಾಡಬೇಕಾದ ಜವಾಬ್ದಾರಿಯುತ ವ್ಯಕ್ತಿಯಾಗಿದ್ದು, ಇಂತಹವರು ನಮ್ಮ ಜಾತಿ/ಜನಾಂಗದವರಿಗೆ ತುಂಬಾ ಹೀನಾಯವಾಗಿ ಅವಾಚ್ಯ ಶಬ್ದಗಳಿಂದ ಬೈದಿರುವುದು ಕಾನೂನು ವಿರುದ್ಧವಾಗಿದೆ.
ಆದ್ದರಿಂದ ಮಾಜಿ ಸಂಸದರಾದ ರಮೇಶ್ ಕತ್ತಿರವರ ಮೇಲೆ ಎಸ್.ಸಿ/ಎಸ್.ಟಿ ದೌರ್ಜನ್ಯ ಕಾಯ್ದೆಯಡಿ ಕಾನೂನು ರೀತಿ ಎಫ್.ಐ.ಆರ್ ದಾಖಲು ಮಾಡಿ ಇವರ ಮೇಲೆ ಸೂಕ್ತ ಕ್ರಮ ಜರುಗಿಸಿ ಬಂಧಿಸುವಂತೆ ದೊಡ್ಡಬಳ್ಳಾಪುರ ಉಪ ವಿಭಾಗದ ಡೆಪ್ಯುಟಿ ಸೂಪರ್‌ಡೆಂಟ್ ಆಫ್ ಪೊಲೀಸರಿಗೆ ದೂರು ನೀಡಿದ್ದೇವೆ. ನಮ್ಮ ಜಾತಿ/ಜನಾಂಗದವರಿಗೆ ಮಾಡಿರುವ ಅವಮಾನಕ್ಕೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಂಘದ ತಾಲ್ಲೂಕು ಗೌರವಾಧ್ಯಕ್ಷರಾದ ಪ್ರೇಮಕುಮಾರ್ ತಾಲ್ಲೂಕು ಗೌರವಾಧ್ಯಕ್ಷರು, ತಾಲ್ಲೂಕು ಉಪಾಧ್ಯಕ್ಷ ಸಿ ಕುಮಾರ್, ತಾಲ್ಲೂಕು ನಿರ್ಧೇಶಕರಾದ ರಾಮಚಂದ್ರಪ್ಪ, ವೆಂಕಟಾಚಲಯ್ಯ, ನಗರ ಅಧ್ಯಕ್ಷ ಕೇಶವಮೂರ್ತಿ (ಪ್ರಧಾನಿ), ನಗರ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ಮುಖಂಡರಾದ ರಾಜು, ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.