ಮಾಜಿ ರೌಡಿ ಶೀಟರ್ ಬುಲೆಟ್ ರಘು ಕೊಲೆ
ಸ್ಥಳೀಯ ಸುದ್ದಿಕ್ರೈಮ್


ದೊಡ್ಡಬಳ್ಳಾಪುರ : ಹೊರವಲಯದ ಬಾಶೆಟ್ಟಿಹಳ್ಳಿ ಬಳಿ ಮಾಜಿ ರೌಡಿಶೀಟರ್ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಲಾಗಿದೆ.
ಮೃತ ವ್ಯಕ್ತಿಯನ್ನು ಬುಲೆಟ್ ರಘು (38) ಎಂದು ಗುರುತಿಸಲಾಗಿದೆ. ಘಟನೆಗೆ ಅಸಲಿ ಕಾರಣ ತಿಳಿದು ಬಂದಿಲ್ಲ. ಕುಡಿದ ಮತ್ತಿನಲ್ಲಿ ಯುವಕರ ಗುಂಪೊಂದು ವ್ಯಕ್ತಿ ಮೇಲೆ ಅಟ್ಯಾಕ್ ಮಾಡಿದೆ. ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ರಘುನನ್ನು ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ಮಾಡಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಹಳೆ ರೌಡಿಶೀಟರ್ ಆಗಿದ್ದ ಬುಲೆಟ್ ರಘು ಕಳೆದ 2023ರಲ್ಲಿ ರೌಡಿ ಶೀಟರ್ ಪಟ್ಟದಿಂದ ದೊಡ್ಡಬಳ್ಳಾಪುರದಲ್ಲಿ ಮುಕ್ತಗೊಳಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಎಎಸ್ಪಿ ನಾಗರಾಜ್ ಡಿವೈಎಸ್ಪಿ ರವಿ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ತ್ಯಾಗರಾಜನಗರದ ಬುಲೆಟ್ ರಘು ಕೊಲೆಯಾದ ವ್ಯಕ್ತಿ. ಈತ ಕಳೆದ ಆರೇಳು ವರ್ಷಗಳಿಂದ ಬೆಳಗಾವಿಯಲ್ಲಿ ಖಾನಾವಳಿ ಇಟ್ಟುಕೊಂಡು, ಲವ್ ಮಾಡಿ ಮದುವೆ ಮಾಡಿಕೊಂಡು ಬೆಳಗಾವಿಯಲ್ಲೇ ವಾಸವಿದ್ದ. ಬೆಳಗಾವಿಯಿಂದ ಒಂದು ವಾರದ ಹಿಂದಷ್ಟೇ ದೊಡ್ಡಬಳ್ಳಾಪುರಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ. ಈ ಹಿಂದೆ ಇಬ್ಬರ ಜೊತೆ ಗಲಾಟೆ ಮಾಡಿಕೊಂಡಿದ್ದನು. ಆ ಗಲಾಟೆ ವಿಷಯ ರಾಜಿ ಸಂಧಾನವಾಗಿತ್ತು. ನಿನ್ನೆ ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ನಾನು ಸ್ನೇಹಿತರ ಜೊತೆ ಹೊರಹೋಗುತ್ತೇನೆಂದು ತನ್ನ ತಾಯಿಗೆ ಹೇಳಿ ಹೋಗುತ್ತಾನೆ. ಮನೆಯಿಂದ ಹೊರ ಹೋದವನು ಕೊಲೆಯಾಗಿದ್ದಾನೆ. ಸದ್ಯ ಈತನ ಫ್ರೆಂಡ್ಸ್ ಯಾರು ಎಂಬುದು ತಿಳಿದುಬಂದಿಲ್ಲ. ಕೊಲೆಗೆ ಸಂಬಂಧಿಸಿದಂತೆ ತನಿಖೆ ಮಾಡಲಾಗುತ್ತಿದೆ ಎಂದು ಎಎಸ್ಪಿ ನಾಗರಾಜು ತಿಳಿಸಿದ್ದಾರೆ.
ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group : https://chat.whatsapp.com/Fj6L4Eak7N994zl2QHSpHK