ಸ್ವತಂತ್ರ್ಯ ದಿನಾಚರಣೆ ಅಂಗವಾಗಿ ಆಲ್ಟೋರ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸ್ಥಳೀಯ ಸುದ್ದಿ


ಕೆ.ಆರ್.ಪುರ : ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ಆಲ್ಟೋರ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು ನೂರಾರು ಬಡ ಜನರು ಇದರ ಅನುಕೂಲವನ್ನ ಪಡೆದುಕೊಂಡರು ಎಂದು ಆಸ್ಪತ್ರೆಯ ವೈದ್ಯರಾದ ಡಾ.ಲವೀನ್ ಗೌಡ ತಿಳಿಸಿದರು.
ಕ್ಷೇತ್ರದ ಬಸವನಪುರ ವಾರ್ಡ್ ನ ಗೋಕುಲ ಬಡಾವಣೆಯಲ್ಲಿ ಸ್ವಾತಂತ್ರ್ಯದ ದಿನದ ಅಂಗವಾಗಿ ಆಲ್ಟೋರ್ ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಅರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ
ಅವರು ಬಡವರ ಹಿತದೃಷ್ಟಿಯಿಂದ ಕಳೆದ ಹದಿನೈದು ದಿನಗಳಲ್ಲಿ ಎರಡನೇ ಆರೋಗ್ಯ ಶಿಬಿರವನ್ನ ಆಯೋಜನೆ ಮಾಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ, ಶುಗರ್, ಬಿಪಿ ಮತ್ತು ಕೊಲೆಸ್ಟ್ರಾಲ್ ತಪಾಸಣೆಯನ್ನು ಆಗಾಗ್ಗೆ ತಪ್ಪದೇ ಮಾಡಿಕೊಳ್ಳಬೇಕಿದೆ ಯಾವುದೇ ಆರೋಗ್ಯ ಶಿರಗಳನ್ನ ಮಾಡುವಾಗ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಆರೋಗ್ಯ ಶಿಬಿರದಲ್ಲಿ ಸಾಮಾನ್ಯ ರೋಗಗಳ ತಪಾಸಣೆ, ಹೃದಯ ರೋಗ, ಕಿಡ್ನಿ ಸಮಸ್ಯೆ, ಕಣ್ಣು, ಸ್ತ್ರೀ ರೋಗ ಸೇರಿದಂತೆ ಎಲ್ಲ ರೀತಿಯ ಕಾಯಿಲೆಗಳನ್ನು ತಜ್ಞ ವೈದ್ಯರು ತಂಡ ಭಾಗವಹಿಸಿದರು.ಅಗತ್ಯವಿರುವವರಿಗೆ ಔಷಧಿ ವಿತರಿಸಲಾಯಿತು ಎಂದು ತಿಳಿಸಿದರು.
ಬಿಜೆಪಿ ಮುಖಂಡ ಶ್ರೀರಾಮುಲು ಮಾತನಾಡಿ ಜನರಿಗೆ ಆರೋಗ್ಯದ ಮಹತ್ವ ತಿಳಿಸಲು ಇಂತಹ ಶಿಬಿರಗಳ ಅವಶ್ಯವಿದೆ. ದೇಹ ಸ್ವಾಸ್ಥ್ಯವಾಗಿ ಇದ್ದರೆ ಜೀವನ ಮಾಡಲು ಸಾಧ್ಯವಾಗುತ್ತದೆ. ದೇಹದ ಆರೋಗ್ಯ ಕೆಟ್ಟರೆ ಮನೆಯ ಪರಿಸ್ಥಿತಿಯೂ ಬಿಗಡಾಯಿಸುತ್ತದೆ. ನಮ್ಮ ದೇಹದ ಅಂಗಾಂಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಲವು ಬಡ ಜನರು ವರ್ಷಗಳಿಂದ ರೋಗ ಬಂದಿದ್ದರೂ ಅದನ್ನು ಲೆಕ್ಕಿಸದೆ ಕೆಲಸ ಮಾಡಿ ಜೀವನ ನಡೆಸುತ್ತಾರೆ. ಎಲ್ಲರಿಗೂ ಆರೋಗ್ಯ ಸೇವೆ ಸಿಗುವಂತಾಗಲಿ ಎಂದು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುತ್ತಿದೆ ಇದನ್ನ ಬಳಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಡಾ.ವಿನಾಯಕ, ಡಾ.ಹರಿಣಿ, ಡಾ.ಲವೀನ್ ಗೌಡ, ಡಾ.ಮೆಲ್ವಿನ್, ಡಾ.ಆಕಾಶ್, ಡಾ.ಅಪೂರ್ವ ಇದ್ದರು.