ಪೌರಕಾರ್ಮಿಕರ ಕುಂದು ಕೊರತೆಗಳನ್ನ ಆಲಿಸಿದ ಜಿಬಿಎ ಜಂಟಿ ಆಯುಕ್ತೆ ಡಾ.ಸುಧಾ ಪಾಯಸ್.
ಸ್ಥಳೀಯ ಸುದ್ದಿ


ಕೆ.ಆರ್.ಪುರ:ಬೆಂಗಳೂರು ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರ ಕುಂದು ಕೊರತೆಗಳ ಕುರಿತು ಬೆಳಿಗ್ಗೆ ಕೆ.ಆರ್.ಪುರದ ವಿವಿಧೆಡೆ ಕೆ.ಆರ್.ಪುರದ ಜಿಬಿಎ ಜಂಟಿ ಆಯುಕ್ತೆ ಡಾ.ಸುಧಾ ಪಾಯಸ್ ಅವರು ಪರಿಶೀಲನೆ ನಡೆಸಿದರು.
ಇತ್ತೀಚಿಗಷ್ಟೇ ಬೆಂಗಳೂರು ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರ ಕುಂದು ಕೊರತೆಗಳ ಸಭೆಯನ್ನು ಆಯೋಜನೆ ಮಾಡಲಾಗಿತ್ತು ಅದರಲ್ಲಿ ಅನೇಕ ಸಮಸ್ಯೆಗಳನ್ನು ಹೇಳಿಕೊಂಡಿದ್ದ ಪೌರಕಾರ್ಮಿಕರು , ಇಂದು ಅವರ ಸಮಸ್ಯೆಗಳನ್ನು ಆಲಿಸಲು ಸ್ವತಹ ಕೆ.ಆರ್.ಪುರ ವಲಯ ಜಂಟಿ ಆಯುಕ್ತರಾದ ಡಾ.ಸುಧಾ ಪಾಯಸ್ ಅವರು ಮುಂಜಾನೆ ಫೀಲ್ಡ್ ಗಿಳಿದು ಪರಿಶೀಲನೆಯನ್ನು ನಡೆಸಿದರು.
ಕೆ ಆರ್ ಪುರದ ಪದವಿ ಪೂರ್ವ ಕಾಲೇಜು ರಸ್ತೆಯಲ್ಲಿ ಪರಿಶೀಲನೆ ನಡೆಸುವ ವೇಳೆ ಕಾಲೇಜ್ ಮುಂಭಾಗದಲ್ಲೇ ಕಸ ಹಾಕಿದ್ದು ಕಂಡುಬಂದಿದ್ದು ಸ್ಥಳೀಯ ಸಿಸಿ ಕ್ಯಾಮರಾ ಸಹಕಾರದಲ್ಲಿ ಕಸ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಲು ಮಾರ್ಷಲ್ ಗಳಿಗೆ ಸೂಚಿಸಿದರು.
ಇದಲ್ಲದೆ ಪೌರ ಕಾರ್ಮಿಕರಿಗೆ ಮಾಸ್ಕ್, ಗ್ಲೌಜ್, ಸೇರಿ ಹಲವು ಸೇಫ್ಟಿ ಸಲಕರಣೆಗಳ ಕೊರತೆ ಇದ್ದು ,ಕಸ ವಿಲೇವಾರಿ ವಾಹನಗಳ ದಾಖಲೆಗಳ ಕೊರತೆ, ಸ್ಥಳದಲ್ಲಿ ದುರ್ನಾತ, ಸೇರಿ ಸಮಸ್ಯೆಗಳ ನಿವಾರಣೆಗೆ ಸಲಹೆ ನೀಡಿ ಪೌರಕಾರ್ಮಿಕರ ಆರೋಗ್ಯ ರಕ್ಷಣೆ ಬಗ್ಗೆ ಗಮನ ಹರಿಸಲು ತಿಳಿಸಿದ್ದಾರೆ , ಜೊತೆಗೆ ಪ್ರತಿ ದಿನ ಪೌರಕಾರ್ಮಿಕರ ಕಾರ್ಯವೈಕರಿ ಬಗ್ಗೆ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿ ನಿರ್ಲಕ್ಷ್ಯ ವಹಿಸಿದರೆ ಗುತ್ತಿಗೆ ದಾರರ ವಿರುದ್ದ ಕ್ರಮದ ಕೈಗೊಳ್ಳಲಾಗುವುದು ಎಂದು ಹೇಳಿದರು.