ಗೀತಂ ವಿವಿ 13ನೇ ಪದವಿ ಪ್ರಧಾನ ಸಮಾರಂಭ, 1400 ವಿದ್ಯಾರ್ಥಿಗಳು ಪಾಸೌಟ್: ಪ್ರೋ-ವೈಸ್ ಚಾನ್ಸಲರ್ ಪ್ರೊ.ಕೆಎನ್ಎಸ್ ಆಚಾರ್ಯ
ಸ್ಥಳೀಯ ಸುದ್ದಿ


ಗೀತಂ ಬೆಂಗಳೂರು ಕ್ಯಾಂಪಸ್‌ನಲ್ಲಿ ಇಂದು 13ನೇ ಸಾಲಿನ ಗ್ರಾಜ್ಯುವೇಷನ್ ಡೇ ಆಚರಣೆ ಮಾಡಲಾಯಿತು. ಇಲ್ಲಿಂದ ಸುಮಾರು ಒಂದು ಸಾವಿರದ ನಾಲ್ಕು ನೂರು ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿ ಪಡೆದು ಹೊರಹೊಮ್ಮಿದ್ದಾರೆ ಎಂದು ಪ್ರೋ-ವೈಸ್ ಚಾನ್ಸಲರ್ ಪ್ರೊ.ಕೆಎನ್ಎಸ್ ಆಚಾರ್ಯ ಅವರು ತಿಳಿಸಿದರು.
ಪದವಿ ಸಮಾರಂಭದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬೋಯಿಂಗ್ ಸಂಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ ವಿಭಾಗದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಾ. ಸೀಮಾ ಚೋಪ್ರಾ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು. 1,239 ಮಂದಿ ಪದವಿ, 54 ಮಂದಿ ಸ್ನಾತಕೋತ್ತರ ಪದವಿ ಮತ್ತು 17 ಮಂದಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ತಮ್ಮ ಕೋರ್ಸ್ ಗಳಲ್ಲಿ ಅತ್ಯುನ್ನತ ಶ್ರೇಣಿಯನ್ನು ಗಳಿಸಿದ 18 ವಿದ್ಯಾರ್ಥಿಗಳಿಗೆ ಪ್ರೆಸಿಡೆಂಟ್ ಗೋಲ್ಡ್ ಮೆಡಲ್ ನೀಡಿ ಗೌರವಿಸಲಾಯಿತು ಎಂದರು.
ಕಳೆದ ಎರಡು ಮೂರು ವರ್ಷಗಳಲ್ಲಿ ನಮ್ಮ ಗೀತಂ ಬೆಂಗಳೂರು ಕ್ಯಾಂಪಸ್ ನಲ್ಲಿ ಸಂಶೋಧನೆಗೆ ಸಂಬಂಧಿಸಿ ಹೆಚ್ಚು ಮಹತ್ವ ನೀಡಲಾಗುತ್ತಿದ್ದು ನಮ್ಮ ಕ್ಯಾಂಪಸ್ ನಿಂದ ನೂರ ಹದಿನೈದು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೇಶ ವಿದೇಶಗಳಿಗೆ ತೆರಳಿದ್ದಾರೆ. ಶೇ.85ರಷ್ಟು ವಿದ್ಯಾರ್ಥಿಗಳನ್ನು ಹಲವು ಪ್ರತಿಷ್ಟಿತ ಕಂಪೆನಿಗಳು ಕ್ಯಾಂಪಸ್ ಸೆಲೆಕ್ಷನ್ ಮಾಡಿಕೊಂಡಿವೆ. ಸರಾಸರಿ 4.5 ಲಕ್ಷದಿಂದ 6 ಲಕ್ಷದಷ್ಟು ಸಂಬಳ ಪಡೆಯುತ್ತಿದ್ದಾರೆ ಎಂದರು.
ಈ ವೇಳೆ ಹೈದರಾಬಾದ್ ಗೀತಂ ಕ್ಯಾಂಪಸ್ ನ ವೈಸ್ ಚಾನ್ಸಲರ್ ಡಾ.ಎರಾಲ್ ಡಿ ಸೋಜಾ ಅವರು ಇದ್ದರು..
ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group: https://chat.whatsapp.com/Fj6L4Eak7N994zl2QHSpHK