ಫ್ರೀಯಾಗಿ ಎಣ್ಣೆ ಕೊಡೋ..- ಬಾರ್‌ನಲ್ಲಿ ನಾಡ ಬಂದೂಕು ಹಿಡಿದು ವ್ಯಕ್ತಿ ಹೈಡ್ರಾಮಾ!
ಸ್ಥಳೀಯ ಸುದ್ದಿ


ಹೊಸಕೋಟೆ: ಬಾರ್ ನಲ್ಲಿ ಫ್ರೀಯಾಗಿ ಮದ್ಯ ಕೊಡಲು ನಿರಾಕರಿಸಿದ ಸಿಬ್ಬಂದಿಗೆ ವ್ಯಕ್ತಿಯೊಬ್ಬ ಬಂದೂಕು ಹಿಡಿದು ಬೆದರಿಸಿರುವ ಶಾಕಿಂಗ್ ಘಟನೆ ನಗರದ ಹೊಸಕೋಟೆಯಲ್ಲಿರುವ ಬಾರ್ ಒಂದರಲ್ಲಿ ನಡೆದಿದೆ.
ಹೊಸಕೋಟೆ ತಾಲೂಕಿನ ಬಂಡಹಳ್ಳಿ ಗ್ರಾಮದ ಬಳಿಯ ಬಾರ್‌ನಲ್ಲಿ ಈ ಘಟನೆ ನಡೆದಿದೆ. ನೆನ್ನೆ ಸಂಜೆ ವಾಹಿದ್ ಖಾನ್ ಎಂಬಾತ ಎಸ್‌ಎಸ್ ಬಾರ್ ಬಳಿ ಬಂದು ಕ್ಯಾಷಿಯರ್ ಬಳಿ ಫ್ರೀಯಾಗಿ ಮದ್ಯ ನೀಡುವಂತೆ ಕೇಳಿದ್ದಾನೆ. ಆದರೆ ಸಿಬ್ಬಂದಿ ಕೊಡದೇ ಹೋಗಿದ್ದಕ್ಕೆ ನಾಡ ಬಂದೂಕು ತಂದು ಬಾರ್ ಬಳಿ ವ್ಯಕ್ತಿ ಹೈಡ್ರಾಮ ನಡೆಸಿದ್ದಾನೆ.
ನನಗೆ ಎಣ್ಣೆ ಕೊಡಲ್ವ ಎಂದು ವಾಹಿದ್ ಖಾನ್ ಬಂದೂಕು ಹಿಡಿದು ಹೈಡ್ರಾಮ ನಡೆಸಿದ್ದಾನೆ. ಕ್ಯಾಷಿಯರ್‌ನ ಶೂಟ್ ಮಾಡ್ತಿನಿ ಎಂದು ಕೆಲಕಾಲ ಹೈಡ್ರಾಮ ನಡೆಸಿದ್ದಾನೆ. ವ್ಯಕ್ತಿಯ ವರ್ತನೆ ಕಂಡು ಬಾರ್ ಸಿಬ್ಬಂದಿ ಹಾಗೂ ಕ್ಯಾಷಿಯರ್ ಬೆಚ್ಚಿ ಬಿದ್ದಿದ್ದಾರೆ.
ಆಗ ಅಲ್ಲೇ ಇದ್ದ ಕೆಲವರು ಬಂದೂಕು ಹಿಡಿದಿದ್ದ ವಾಹಿದ್ ಖಾನ್ ನನ್ನು ಸಮಾಧಾನ ಮಾಡಿ ವಾಪಸ್ ಕಳುಹಿಸಿದ್ದಾರೆ. ಈ ಎಲ್ಲದರೆ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಲ್ಲಿಯವರೆಗೆ ಪ್ರಕರಣ ನಡೆದಿದೆ.
ಬೈಕ್ನಲ್ಲಿ ಆರೋಪಿ ವಾಹಿದ್ ಜೊತೆ ಬಾರ್ಗೆ ಬಂದಿದ್ದ ಅತೀಕ್ ಖಾನ್ನ ಪೊಲೀಸರು ಬಂಧಿಸಿದ್ದು, ಆರೋಪಿಗಳು ಎರಡು ಪೈಪ್ಗಳನ್ನು ಬಳಸಿ ನಕಲಿ ಗನ್ ತಯಾರಿಸಿದ್ದರು. ಟಿಂಕರಿಂಗ್ ಹಾಗೂ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಅತಿಕ್ ಖಾನ್ 2 ಮೆಟಲ್ ಪೈಪ್, ಮರದ ಸ್ಟಾಕ್, ಕಪ್ಪು ಬೆಲ್ಟ್ ಬಳಸಿ ಡಮ್ಮಿ ಗನ್ ತಯಾರಿ ಮಾಡಿದ್ದ. ನೋಡೋಕೆ ಅದು ಡಬಲ್ ಬ್ಯಾರಲ್ ಗನ್ ರೀತಿ ಇತ್ತು ಎಂಬುದು ಗೊತ್ತಾಗಿದೆ. ಪ್ರಮುಖ ಆರೋಪಿ ರೌಡಿಶೀಟರ್ ವಾಹಿದ್ ಖಾನ್ಗಾಗಿ ಹುಡುಕಾಟ ಮುಂದುವರಿದಿದೆ