ಅಂಬೇಡ್ಕರ್ ನಗರ ಸರ್ಕಾರಿ ಶಾಲೆಯಲ್ಲಿ ಅದ್ದೂರಿ 79ನೇ ಸ್ವಾತಂತ್ರ್ಯ ದಿನಾಚರಣೆ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

8/16/20251 min read

ಕೆ.ಆರ್ ಪುರ: ಮಹನೀಯರ, ಸೈನಿಕರ ಹೋರಾಟ ತ್ಯಾಗ ಬಲಿದಾನ ಪರಿಶ್ರಮದ ಫಲವಾಗಿ ಇಂದು ಸ್ವತಂತ್ರ್ಯ ಭಾರತವು ಅಡಿಪಾಯವನ್ನು ಹಾಕಿ ಪ್ರಗತಿಗೆ ಕಾರಣವಾಗಿದೆ. ಭಾರತ ದೇಶದ ಸ್ವಾತಂತ್ರ್ಯ ದಿನವನ್ನು ಮಹಾ ಉತ್ಸವದ ದಿನವೆಂದು ಕರೆಯಲಾಗಿದ್ದು ಪ್ರತಿಯೊಬ್ಬ ಭಾರತೀಯರಿಗೂ ಭಾರತೀಯರೆಂಬ ಹೆಗ್ಗುರುತನ್ನು ನೆನಪಿಸುತ್ತದೆ ಈ ದಿನವನ್ನು ದೇಶದ ಜನತೆಯ ಸ್ಮರಣೆಯಲ್ಲಿ ಆಳವಾಗಿ ಕೆತ್ತಲ್ಪಟ್ಟ ದಿನವಾಗಿದೆ ಎಂದು ಅಂಬೇಡ್ಕರ್ ನಗರ ಶಾಲೆಯ ಎಸ್ ಡಿ ಎಂಸಿ ಮುಖ್ಯಸ್ಥ ಮಂಜುನಾಥ್ ಅವರು ತಿಳಿಸಿದರು.

ರಾಮಮೂರ್ತಿ ನಗರ ಸಮೀಪದ ಅಂಬೇಡ್ಕರ್ ನಗರ ಸರ್ಕಾರಿ ಶಾಲೆ ಹಾಗೂ ಬಾಲಕಿಯರ ಕಾಲೇಜಿನಲ್ಲಿ ಹಮ್ಮಿಕೊಂಡಿದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗಣ್ಯರೊಡನೆ ಧ್ವಜಾರೋಹಣ ಮಾಡಿ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿರುವಂತದಲ್ಲ ಅನೇಕ ದೇಶಭಕ್ತರಾದ ಮಹನೀಯರು, ಹಿರಿಯರು, ಮಹಿಳೆಯರು, ಮಕ್ಕಳ ಪ್ರಾಣ ತ್ಯಾಗದ ನಂತರ ನಾವೆಲ್ಲರೂ ಸ್ವಾತಂತ್ರ್ಯ ಪಡೆದಿದ್ದು, ನಮ್ಮ ದೇಶದಲ್ಲಿ ಅನೇಕ ಭಾಷೆಗಳು, ಧರ್ಮಗಳು, ವಿಭಿನ್ನ ವಿಚಾರಗಳು, ಸಂಸ್ಕøತಿಗಳಿವೆ ಈ ಎಲ್ಲವುಗಳು ಒಂದುಗೂಡಿ ಬಲಿಷ್ಟವಾದ ಪ್ರಜಾಪ್ರಭುತ್ವ ರಾಷ್ಟ್ರವನ್ನು ಕಟ್ಟಿಕೊಂಡಿದ್ದೇವೆ. ಸ್ವಚ್ಛ, ಸ್ವಸ್ತ, ಸದೃಢ ಭಾರತ, ಉತ್ತಮ ಭವಿಷ್ಯಕ್ಕಾಗಿ ಭಾರತ, ಭಾರತಕ್ಕಾಗಿ ನಾವು ಎಂದು, ಮುಂಬರುವ ದಿನಗಳಲ್ಲಿ ಭಾರತವನ್ನು ವಿಶ್ವಗುರುವನ್ನಾಗಿ ಬೆಳಗಿಸುವಲ್ಲಿ ನಾವೆಲ್ಲರೂ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.

ಸ್ವಾತಂತ್ರ್ಯವನ್ನು ನಾವೆಲ್ಲರೂ ಅರ್ಥಪೂರ್ಣವಾಗಿ ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು. ಮಹನೀಯರು ಕೊಟ್ಟಂತಹ ಸ್ವಾತಂತ್ರ್ಯದ ಫಲವನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಎಲ್ಲಾ ಪ್ರದೇಶದ ಸಮುದಾಯಗಳಿಗೆ ಸಂವಿಧಾನದ ಮೂಲಕ ಸಮಾನವಾಗಿ ಹಂಚಿದವರು ಎಂದು ಅವರು ಹೇಳಿದರು.

ಸದ್ಯದ ದಿನಮಾನದಲ್ಲಿ ಭಾರತದ ಯುವಪೀಳಿಗೆ ಸಾಮಾಜಿಕ ಜಾಲತಾಣ ಎಂಬ ಪಿಡುಗಿನಲ್ಲಿ ಸಿಲುಕಿ ತಮ್ಮ ಅಮೂಲ್ಯವಾದ ಜ್ಞಾನ , ಪ್ರತಿಭೆಯನ್ನು ಮರೆದಿದ್ದಾರೆ . ಮೊಬೈಲ್ ಅಥವಾ ಇನ್ನಿತರ ಮಾಧ್ಯಮಗಳಲ್ಲಿ ಸಮಯವನ್ನು ಕಳೆಯದೆ ಕ್ರೀಡೆ ಮತ್ತು ಶಿಕ್ಷಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಉತ್ತಮ ಸ್ಥಾನಕ್ಕೆ ಏರಲು ಸಾಧ್ಯ ಎಂದು ಕಿವಿಮಾತು ಹೇಳಿದರು .

ಇನ್ನು ಇದೇ ವೇಳೆ ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ದೇಶಭಕ್ತಿ ಗೀತೆ, ನೃತ್ಯ ಸಂಗೀತ ಪ್ರಬಂಧ ಕಾರ್ಯಕ್ರಮಗಳನ್ನು ಮಾಡಲಾಗಿತ್ತು . ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವ ಮೂಲಕ ಪ್ರೋತ್ಸಾಹ ನೀಡಿದರು.

ಈ ಸಂದರ್ಭದಲ್ಲಿ ಫ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಭಾರತಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ವಿಜೆಯ ಲಕ್ಷ್ಮಿ ಮುಖಂಡರಾದ ಶಿವಣ್ಣ, ಮೈಸೂರು ನಾರಾಯಣಸ್ವಾಮಿ, ಬಂಗಾರು ಮೂರ್ತಿ, ಶಂಭಲಿಂಗೇಗೌಡ, ಆಂಜಿನಪ್ಪ, ಪದ್ಮ, ಸಾಮ್ರಟ್ ಶೇಖರ್ ಸೇರಿದಂತೆ ಶಾಲಾ ಸಹ ಶಿಕ್ಷಕರು, ಸ್ಥಳೀಯ ಮುಖಂಡರು ಹಾಜರಿದ್ದರು.