ಒಂದೆಡೆ ಪರಮೇಶ್ವರ್ ಸಿಎಂ ಆಗಲಿ ಎಂದು ಅರೆಬೆತ್ತಲೆ ಪ್ರತಿಭಟನೆ: ಮತ್ತೊಂದೆಡೆ ಡಿಕೆಶಿ ಸಿಎಂ ಆಗಲಿ ಎಂದು ಹೋಮ ಹವನ.

ರಾಜಕೀಯರಾಜ್ಯ

ಧರ್ಮ ಬಸವನಪುರ.

11/28/20251 min read

ತುಮಕೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಪ್ರತಿದಿನ ಗಂಟೆಗೊಮ್ಮೆ ಬೆಳವಣಿಗೆ ಆಗುತ್ತಿದೆ. ಅಲ್ಲದೇ, ಕೆಲ ದಿನಗಳಿಂದ ದಲಿತ ಮುಖ್ಯಮಂತ್ರಿ ಕೂಗು ಕೇಳಿ ಬಂದಿದೆ, ಇದೀಗ ತುಮಕೂರಿನಲ್ಲಿ ದಲಿತ ಮುಖ್ಯಮಂತ್ರಿ ಕೂಗು ಜಾಸ್ತಿ ಆಗಿದ್ದು, ಡಾ.ಜಿ.ಪರಮೇಶ್ವರ್ ಅವರಿಗೆ ಸಿಎಂ‌ ಸ್ಥಾನ ನೀಡುವಂತೆ ಪ್ರತಿಭಟನೆ ಮಾಡಲಾಗಿದೆ.

ದಲಿತಪರ ಸಂಘಟನೆಗಳಿಂದ ಅರೆಬೆತ್ತಲೆ ಪ್ರತಿಭಟನೆ ತುಮಕೂರಿನ ಟೌನ್‌ಹಾಲ್ ನಲ್ಲಿ ದಲಿತ ಮುಖಂಡರಿಂದ ಪ್ರತಿಭಟನೆ ನಡೆಯುತ್ತಿದ್ದು, ಅರೆಬೆತ್ತಲೆ ಮೆರವಣಿಗೆ ನಡೆಸಿ ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ಕೊಡುವಂತೆ ಆಗ್ರಹ ಮಾಡಿದ್ದಾರೆ. ಅಂಬೇಡ್ಕರ್ ಪುತ್ಥಳಿ ಬಳಿ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಸೇರಿ ಈ ಪ್ರತಿಭಟನೆ ಮಾಡಿದ್ದು, ಕೈಯಲ್ಲಿ ಪರಮೇಶ್ವರ್ ಪೋಟೋ‌ ಹಿಡಿದು ಘೋಷಣೆ ಕೂಗಿ ಆಗ್ರಹ ಮಾಡಿದ್ದಾರೆ.

ಮಾತ್ತೊಂದು ಕಡೆ ಕುಣಿಗಲ್ ಶಾಸಕ ಡಾ.ಎಚ್.ಡಿ ರಂಗನಾಥ್ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಸಿಎಂ ಆಗಬೇಕೆಂದು ಹೋಮ ಮಾಡಿಸಿದ್ದಾರೆ. ಕುಣಿಗಲ್ ತಾಲೂಕಿನ ಎಡೆಯೂರಿನಲ್ಲಿ 1001 ತೆಂಗಿನಕಾಯಿ ಹೊಡೆದು ಹರಕೆ ತೀರಿಸಿದ್ದಲ್ಲದೇ, ಎಡೆಯೂರಿನಲ್ಲಿ ಶ್ರೀ ಸಿದ್ದಲಿಂಗೇಶ್ವರ ದೇವಾಲಯದ ಬಳಿ ಮೃತ್ಯುಂಜಯ ಹೋಮ ಮತ್ತು ಸಿದ್ದಲಿಂಗೇಶ್ವನಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ.

ಯಾರು ಏನೇ ಪ್ರತಿಭಟನೆ ಮತ್ತು ದೇವರ ಮೊರೆ, ಹೋಮ ಹವನ ಮಾಡಿದರು ಸಿಎಂ‌ ಬದಲಾವಣೆ ಮಾಡುವ ವಿಚಾರ ಕಾಂಗ್ರೆಸ್ ಹೈಕಮಾಂಡ್ ನ ಅಂಗಳದಲ್ಲಿದೆ.ಸಿಎಂ ಕುರ್ಚಿ ವಿಷಯ ಬಿಟ್ಟು ನಾಡಿನ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿದರೆ ಜನರಿಗೆ ಒಳಿತು ಆಗಲಿದೆ.