ರಾಷ್ಟ್ರೀಯ ಪಕ್ಷಗಳಿಂದ ಪಕ್ಷಾತೀತ ಬೆಂಬಲ ಸಿಕ್ಕಿದೆ, ಗೆಲುವು ಖಚಿತ: ಹುಸ್ಕೂರ್​ ಆನಂದ್​

ಸ್ಥಳೀಯ ಸುದ್ದಿ

Raghavendra H A

5/24/20251 min read

ಬಮೂಲ್ ಚುನಾವಣೆಗೆ ಸ್ಪರ್ಧಿಸುವಂತೆ ಮಾಜಿ ಪ್ರಧಾನಿ ದೇವೇಗೌಡರು, ಕೇಂದ್ರ ಸಚಿವ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಬಿ.ಮುನೇಗೌಡರು ಸೇರಿದಂತೆ ಮುಖಂಡರು, ಕಾರ್ಯಕರ್ತರ ಸೂಚನೆ ಮೇರೆಗೆ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್ ಬೆಂಬಲಿತ ಹಾಗೂ ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಟಿ.ಆನಂದ್ ಅವರು ಹೇಳಿದರು.

ನಾವು ಬಮೂಲ್ ಚುನಾವಣೆ ಗೆಲ್ಲುವುದು ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ನ ಉಳಿವು-ಅಳಿವು ಸಂಗತಿಯಾಗಿದೆ. ಆದ್ಧರಿಂದ ಜೆಡಿಎಸ್ ಪಕ್ಷದ ಎಲ್ಲಾ ಡೈರಿ ಅಧ್ಯಕ್ಷರುಗಳು ನನಗೆ ಮತ ಹಾಕುವುದರ‌ ಮೂಲಕ ಜೆಡಿಎಸ್ ನ್ನು ದೊಡ್ಡಬಳ್ಳಾಪುರದಲ್ಲಿ ಇನ್ನಷ್ಟು ಪ್ರಬಲವಾಗಿಸಬೇಕು ಎಂದು ಕೋರಿದರು.

ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಈ ಮೂರು ಪಕ್ಷದವರು ಸೇರಿ ಪಕ್ಷಾತೀತವಾಗಿ ನನಗೆ ಮತ ನೀಡಿ ಗೆಲ್ಲಿಸುತ್ತಾರೆ ಎಂಬ ಭರವಸೆ ನನಗಿದೆ. ಬಮೂಲ್ ರೈತ ಸಮುದಾಯದ ಸಂಸ್ಥೆ, ಇದಕ್ಕೆ ಪಕ್ಷ ಬರುವುದಿಲ್ಲ. ಬಮೂಲ್ ಚುನಾವಣೆ ರೈತರಿಗಾಗಿ ನಡೆಯುವ ಚುನಾವಣೆ ಆದ್ದರಿಂದ ಪಕ್ಷ ಭೇದ ಮರೆತು ರೈತರ ಬಗ್ಗೆ ಕಾಳಜಿ ವಹಿಸುವವರಿಗೆ ಮತ ನೀಡಿ ಎಂದು ಕೋರಿದರು.

ಜೆಡಿಎಸ್ ನ 88 ಮಂದಿ ಡೈರಿ ಅಧ್ಯಕ್ಷರಿದ್ದಾರೆ. ಕಾಂಗ್ರೆಸ್ ನ 55 ಮಂದಿ ಇದ್ದಾರೆ. ಬಿಜೆಪಿಯ 52 ಇದ್ದಾರೆ. ಇವರೆಲ್ಲಾರು ನನಗೆ ಮತ ನೀಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.

ಬಿಜೆಪಿಯ ಬಿ.ಸಿ ಆನಂದ್ ವಾಮಮಾರ್ಗದಿಂದ ಬಿಜೆಪಿ ಸೇರ್ಪಡೆಗೊಂಡಿರುವುದೇ ಹೊರೆತು ಬಿಜೆಪಿಯಿಂದ ಗೆದ್ದಿಲ್ಲ. ಹಿಂದೆ ಮೂರು ಪಕ್ಷದ ಸಹಕಾರದಿಂದ ಗೆದ್ದಿದ್ದರು. ಸಹಕಾರ ನೀಡಿ ಗೆಲ್ಲಿಸಿರುವವರಿಗೆ ಏನೇನು ಸಹಾಯ ಮಾಡಿದ್ದಾರೆ ಎಂಬುದಕ್ಕೆ ಅವರೇ ಉತ್ತರ ಕೊಡಬೇಕು. ಒಂದು ವೇಳೆ ನಾನು ಗೆದ್ದರೆ ನನ್ನ ಕೈಹಿಡಿದವರನ್ನ ಕೈ ಬಿಡುವುದಿಲ್ಲ. ರೈತರ‌ಪರ ಕೆಲಸ ಮಾಡುತ್ತೇನೆ ಎಂದರು.