HD Kumaraswamy: ಜೋಕರ್'ಗಳಿಗೆಲ್ಲ ಉತ್ತರ ಕೊಡಲ್ಲ; ಕೃಷಿ ಸಚಿವರಿಗೆ ಟಾಂಗ್ ಕೊಟ್ಟ ಕೇಂದ್ರ ಸಚಿವರು

ರಾಜ್ಯ

ರಾಘವೇಂದ್ರ ಹೆಚ್​.ಎ

4/7/20251 min read

ಮಂಡ್ಯ: ನಾನು ಜೋಕರ್ ಗಳಿಗೆಲ್ಲಾ ಉತ್ತರ ಕೊಡಲ್ಲ. ವಿಷಯವೇ ಗೊತ್ತಿಲ್ಲದವರ ಬಗ್ಗೆ ಮಾತನಾಡಿ ಅರ್ಥವಿಲ್ಲ ಎಂದು ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕೃಷಿ ಸಚಿವ ಚೆಲುವರಾಯ ಸ್ವಾಮಿಗೆ ತಿರುಗೇಟು ಕೊಟ್ಟರು.

ಮಂಡ್ಯದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ಆ ವ್ಯಕ್ತಿ ಒಬ್ಬ ಜೋಕರ್. IIT ಅಂದರೆ ಏನು ಎಂದು ಅವರಿಗೆ ಗೊತ್ತಾ? ಇಂತಹ ಜೋಕರ್ ಗಳಿಗೆ ನಾನು ಉತ್ತರ ಕೊಡಲ್ಲ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.

IIT ತಪ್ಪಿದ್ದು ದೇವೇಗೌಡರಿಂದ ಎಂದು ಅವರು ನೀಡಿರುವ ಹೇಳಿಕೆಯ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಕೆಂಡಾಮಂಡಲರಾದ ಸಚಿವರು, ಅವರಿಗೆ ಮೊದಲು ವಿಷಯ ತಿಳಿದುಕೊಂಡು ಮಾತನಾಡಲು ಹೇಳಿ. ರಾಜ್ಯದಲ್ಲಿ ಈಗ IIT ಎಲ್ಲಿದೆ, ಯಾವ ಊರಿನಲ್ಲಿದೆ ಎಂದು ತಿಳಿದುಕೊಂಡು ಮಾತನಾಡಲು ಹೇಳಿ ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.

ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಬಗ್ಗೆ ಆಕ್ಷೇಪ ಯಾಕೆ? ನಾನು ಈ ಕ್ಷೇತ್ರದ ಸಂಸದ. ನನ್ನದೂ ಸ್ವಾಗತವಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ರಾಜಕೀಯ ಜಾಡ್ಯಕ್ಕೆ ನಾನೇನು ಮಾಡಲಿ. ಕೃಷಿ ವಿವಿ ಇರಲಿ, ಮೊದಲು ವಿಸಿ ಫಾರಂ ಏನಾಗಿದೆ ಅಂತ ನೋಡಲಿ. ಕೃಷಿ ಸಚಿವರು ಅಲ್ಲವೇ? ಕೃಷಿ ಫಾರಂ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ? ಅಲ್ಲಿ ಏನೇನು ಆಗುತ್ತಿದೆ? ಸಿಬ್ಬಂದಿ ಕಥೆ ಏನು? ಇದೆಲ್ಲಾ ಗೊತ್ತಿಲ್ಲವೇ ಎಂದು ಟೀಕಾ ಪ್ರಹಾರ ನಡೆಸಿದರು.

ಇಂತವರ ಸಹವಾಸದಿಂದ ನನ್ನ ಅರೋಗ್ಯ ಹಾಳಾಯಿತು:

ಮಂಡ್ಯಕ್ಕೆ ಮೆಡಿಕಲ್ ಕಾಲೇಜ್, ಕೆಎಸ್‌ಆರ್‌ಟಿ‌ಸಿ ವಿಭಾಗ ತಂದೆ ಎಂಬ ಕೃಷಿ ಸಚಿವರು ಹೇಳಿದ್ದಾರೆ. 2004ರಲ್ಲಿ ಚಲುವರಾಯಸ್ವಾಮಿ ಆರು ತಿಂಗಳು ಮಂತ್ರಿ ಆಗಿರಲಿಲ್ಲ. ಆಗ ರಾತ್ರಿ ಮೂರು ಗಂಟೆಯಾದರೂ ನನ್ನನ್ನು ಮನೆಗೆ ಹೋಗಲು ಬಿಡುತ್ತಿರಲಿಲ್ಲ. ಬಳಿಕ ಮಂತ್ರಿಯಾದರಲ್ಲ, ಯಾರಿಂದ ಮಂತ್ರಿಯಾದರು ಎಂದು ನೆನಪು ಮಾಡಿಕೊಳ್ಳಲಿ ಎಂದು ಅವರು ಹೇಳಿದರು.

ಪಾಪ ನನ್ನ ಮುಖ್ಯಮಂತ್ರಿ ಮಾಡಿದವರು ಅವರಲ್ಲವೇ!? ಮಂತ್ರಿ ಆಗುವಾಗ ಏನೇನೂ ಆಯಿತು ನೆನಸ್ಕೊಳ್ಳಪ್ಪ. ನಾನು ಇಂತಹ ಆರೋಗ್ಯ ನಿಮ್ಮ ರೀತಿಯ ಜನರ ಸಹವಾಸ ಮಾಡಿ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ