ಕೆ.ಆರ್.ಪುರ: ಶ್ರೀ ಲಕ್ಷ್ಮೀ ಗ್ರೂಪ್ ಆಫ್ ಹಾಸ್ಪಿಟಲ್‌ ವತಿಯಿಂದ ಬೃಹತ್ ಆರೋಗ್ಯ ತಪಾಸಣೆ ಶಿಬಿರ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

9/22/20251 min read

ಕೆ.ಆರ್ ಪುರ: ಬಡ ಜನರ ಆರೋಗ್ಯದ ದೃಷ್ಟಿಯಿಂದ ಶ್ರೀ ಲಕ್ಷ್ಮೀ ಆಸ್ಪತ್ರೆ ವತಿಯಿಂದ ಪ್ರತಿವರ್ಷ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿರುವುದಾಗಿ ಆಸ್ಪತ್ರೆಯ ಸಿಇಒ ರಾಘವೇಂದ್ರ ಸುಂಟ್ರಳ್ಳಿ ತಿಳಿಸಿದರು.

ಕೆಆರ್ ಪುರದ ಶ್ರೀ ಲಕ್ಷ್ಮೀ ಗ್ರೂಪ್ ಆಫ್ ಹಾಸ್ಪಿಟಲ್‌ ‌ವತಿಯಿಂದ ಬೃಹತ್ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಆರ್ ಪುರ, ದೇವಸಂದ್ರ, ಭಟ್ಟರಹಳ್ಳಿ,ಆನಂದಪುರ,ರಾಮಮೂರ್ತಿನಗರ ಟಿ.ಸಿ.ಪಾಳ್ಯ ಭಾಗದಲ್ಲಿ ಹೆಚ್ಚಿನ ಬಡ ಜನತೆಯಿದ್ದು ಇವರ ಆರೋಗ್ಯದ ದೃಷ್ಟಿಯಿಂದ ಕಳೆದ ಹತ್ತಾರು ವರ್ಷಗಳಿಂದ ಪ್ರತಿವರ್ಷ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು ನೂರಾರು ಜನ ಇದರ ಸದುಪಯೋಗ ಪಡಿಸಿಕೊಂಡಿರುವುದು ‌ಸಂತೋಷ ಆಗಿದೆ ಎಂದರು. ಆಸ್ಪತ್ರೆಯಲ್ಲಿ ನುರಿತ ತಜ್ಞರು ಇದ್ದು, ಕಡಿಮೆ ವೆಚ್ಚದಲ್ಲಿ ಸೇವಾ ಮನೋಭಾವನೆಯೊಂದಿಗೆ ರೋಗಿಗಳಿಗೆ ಆರೈಕೆ ನೀಡುತ್ತಿರುವುದಾಗಿ ತಿಳಿಸಿದರು.

ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಸಂಬಾಶಿವ ಮಾತನಾಡಿ, ಇಂದಿನಿಂದ ಮೂರು ತಿಂಗಳ ಕಾಲ ಇಸಿಜಿ, ಎಕ್ಸ್ ರೇ ಗಳಿಗೆ ಅರ್ಧದಷ್ಟು ರಿಯಾಯಿತಿ ನೀಡಲಾಗಿದೆ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಅನೂಕೂಲವಾಗಲಿದೆ ಎಂದರು. ಜನಸಮಾನ್ಯ ಆರೋಗ್ಯ ಕಾಪಾಡುವುದು ಆಸ್ಪತ್ರೆಯ ಮುಖ್ಯ ಉದ್ದೇಶವೆಂದು ತಿಳಿಸಿದರು.

ನರರೋಗ, ಹೃದಯ ರೋಗ, ಕಿಡ್ನಿ ಸಮಸ್ಯೆ , ಕ್ಯಾನ್ಸರ್ ರೋಗ, ಮೂಳೆ ಕಾಯಿಲೆ, ತಾಯಿ ಮತ್ತು ಮಕ್ಕಳ ಚಿಕಿತ್ಸೆ ಮಧುಮೇಹ, ಬಿಪಿ ಮತ್ತು ಇಸಿಜಿ, ಹಿಮೋಗ್ಲೋಬಿನ್ ಪರೀಕ್ಷೆಯನ್ನು ನೂರಾರು ಜನರಿಗೆ ಎಲ್ಲ ರೀತಿಯ ಕಾಯಿಲೆಗಳ ತಜ್ಞ ವೈದ್ಯರು ಪರೀಕ್ಷಿಸಿದರು ಎಂದು ತಿಳಿಸಿದರು.

ಆಸ್ಪತ್ರೆಯ ಮುಖ್ಯಸ್ಥರಾದ ಜಯಮಾಲಾ ಸೇರಿದಂತೆ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಇದ್ದರು.