ಆಹಾರ ಪದ್ಧತಿಯಿಂದ ಆರೋಗ್ಯ ವರ್ಧನೆ: ಡಾ.ಎಚ್.ಎಸ್.ನಟರಾಜ್ ಶೆಟ್ಟಿ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

12/22/20251 min read

ಕೆ.ಆರ್.ಪುರ: ಬದಲಾದ ಜೀವನ ಶೈಲಿಯಿಂದಾಗಿ ರೋಗಗಳು ಹೆಚ್ಚುತ್ತಿವೆ. ಹೃದಯಾಘಾತ, ಜೀರ್ಣಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳಿಗೂ ಶಿಸ್ತು ಇಲ್ಲದ ಜೀವನ ಶೈಲಿಯೇ ಕಾರಣ. ಆಹಾರ, ನಿದ್ರೆ, ವ್ಯಾಯಾಮ, ಉತ್ತಮ ಅಭ್ಯಾಸಗಳು ಮನುಷ್ಯನನ್ನು ರೋಗಗಳಿಂದ ದೂರು ಇಡುತ್ತವೆ ಎಂದು ಜಯದೇವ ಆಸ್ಪತ್ರೆ ಹೃದ್ರೋಗ ತಜ್ಞ ಡಾ.ಎಚ್.ಎಸ್.ನಟರಾಜ್ ಶೆಟ್ಟಿ ಹೇಳಿದರು.

ಕೆ.ಆರ್.ಪುರ ಸಮೀಪದ ಕೆಟಿವಿ ಬಡಾವಣೆಯಲ್ಲಿ ಕೆ.ಆರ್.ಪುರ ಬಲಿಜ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.

ಮಧುಮೇಹ ಮತ್ತು ರಕ್ತದೊತ್ತಡವನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ, ಅವು ವಿವಿಧ ರೋಗಗಳಿಗೆ ಕಾರಣವಾಗುತ್ತವೆ. ಈ ಬಗ್ಗೆ ಜನ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.

ಆಹಾರ ಸೇವನೆ ಕ್ರಮವಹಿಸದೆ ಅತಿಯಾದ ಎಣ್ಣೆ ಪದಾರ್ಥ ಹೊಂದಿರುವ ಜಂಕ್ ಫುಡ್ ಸೇವನೆ ಯಿಂದ ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ. ಉತ್ತಮ ಆಹಾರ ಪದ್ಧತಿ ರೂಪಿಸಿಕೊ ಳ್ಳುವ ಮೂಲಕ ಆರೋಗ್ಯ ಕಾಪಾಡಿ ಕೊಳ್ಳಬೇಕೆಂದು ಸಲಹೆ ನೀಡಿದರು.

ಶಿಬಿರದ ಆಯೋಜಕ, ಸಮಾಜ ಸೇವಕ ಕೆ.ಹೇಮಂತ್ ಚಿನ್ನಿ ಮಾತನಾಡಿ, ಕೆ.ಆರ್.ಪುರ ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ವಾಸಿಸುವ ಬಡವರಿಗೂ ಆರೋಗ್ಯ ಸೇವೆ ಸಿಗಬೇಕೆಂಬ ಸದು ದ್ದೇಶದಿಂದ ಕಳೆದ ಐದು ವರ್ಷಗಳಿಂದ ಸತತವಾಗಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.ಇದನ್ನ ಒಂದು ಸಾವಿರಕ್ಕೂ ಹೆಚ್ಚು ಜನ ಸದುಪಯೋಗ ಪಡಿಸಿಕೊಂಡಿದ್ದಾರೆ‌ ಎಂದು ತಿಳಿಸಿದರು.

ಈ ಶಿಬಿರದಲ್ಲಿ ಚಿಕ್ಕಮಕ್ಕಳಿಗೆ ಪಲ್ಸ್ ಪೋಲಿಯೊ,ಹೃದ್ರೋಗ, ಸಾಮಾನ್ಯ ಆರೋಗ್ಯ ತಪಾಸಣೆ, ಮೂಳೆ ತಪಾಸಣೆ, ಎಕೊ,ಇಸಿಜಿ ಪರೀಕ್ಷೆ,ದಂತ, ನೇತ್ರ, ಎಲುಬು ಮತ್ತು ಕೀಲು, ಚರ್ಮ ರೋಗ, ಕಿವಿ ಮೂಗು ಹಾಗೂ ಗಂಟಲು ಚಿಕಿತ್ಸೆ ವಿಭಾಗಗಳ ನುರಿತ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು.ಅಲ್ಲದೇ, ಇವರಿಗೆ ಉಚಿತವಾಗಿ ಔಷಧಿ ವಿತರಿಸಲಾಯಿತು.

ಈ ವೇಳೆ ಟ್ರಸ್ಟ್ ಸಂಸ್ಥಾಪಕ ಕೆ.ಎನ್. ಮೋಹನ್, ಎನ್. ಧನಂಜಯ, ಅಧ್ಯಕ್ಷ ಶ್ರೀರಾಮ್, ಉಪಾಧ್ಯಕ್ಷ ಗಿರೀಶ್ ಬಾಬು, ಖಜಾಂಚಿ ಮಹೇಶ್ ಬಾಬು, ಡಾ.ರಮೇಶ್, ಆಂಜನೇಯಲು, ಕೆ.ಗಣೇಶ್, ಗೋಪಿನಾಥ್, ವಿ.ಶ್ರೀನಿವಾಸ್, ಶ್ರೀಧರ್, ದೀಪಾ, ಶಿವಪ್ಪ ಒಳಗೊಂಡಿದ್ದರು.