ಹೊರಮಾವು:ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ ಮಂಡಲ ಪೂಜೆ
ಸ್ಥಳೀಯ ಸುದ್ದಿ


ಕೆ.ಆರ್.ಪುರ ಕ್ಷೇತ್ರದ ಹೊರಮಾವು ಗ್ರಮದಲ್ಲಿ ಎರಡು ದಿನಗಳಿಂದ ಅಯಪ್ಪ ಸ್ವಾಮಿ ಭಕ್ತ ಮಂಡಳಿ ವತಿಯಿಂದ ಘನಹೋಮ ಸಂಜೆ ಪಲ್ಲಕ್ಕಿ ಮೆರವಣಿಗೆ ಹಾಗೂ ದೀಪಾಲಾಂಕರ ವಿಜೃಂಭಣೆಯಿಂದ ನೆರವೇರಿತು. ಶನಿವಾರ ಬೆಳಗ್ಗೆಯಿಂದ ಭಜನೆ ಮತ್ತು ಪಡಿ ಪೂಜೆ ನಡೆಯಿತು.
ಗ್ರಾಮದ ರಾಮಚಂದ್ರ ಅವರ ಸಮಕ್ಷಮದಲ್ಲಿ ಘನ ಹೋಮ ದೀಪಾಲಾಂಕಾರ ಮೆರವಣಿಗೆ ,ಪಲ್ಲಕ್ಕಿ ಮೆರವಣಿಗೆ 34 ನೇ ವರ್ಷದ ಮಹಾ ಮಂಡಲ ಪೂಜೆ ವಿಜೃಂಭಣೆಯಿಂದ ನಡೆಯಿತು. ಪಡಿ ಪೂಜೆಗೆ ಸಹರಿಸಿದ ಹಾಗೂ ದಾನಿಗಳಿಗೆ ಸನ್ಮಾನ ಮಾಡಲಾಯಿತು ಗೌರವಿಸಲಾಯಿತು.
ಹೊರಮಾವು ರಾಮಚಂದ್ರ ಅವರ ತಂಡದಲ್ಲಿ ಸೂಮಾರು 35 ಮಾಲಾದಾರಿಗಳ ಸಮ್ಮುಖದಲ್ಲಿ ಪಡಿಪೂಜೆ ನಡೆಯಿತು. ಮಂಡಲ ಪೂಜೆಯಲ್ಲಿ ಹೊರಮಾವು,ಅಗ್ರ,ರಾಮಮೂರ್ತಿನಗರ, ಬಾಣಸವಾಡಿ,ಜಯಂತಿ ನಗರ,ಕಲ್ಕೆರೆ ಎನ್ ಆರ್ ಐ ಬಡವಾಣೆಯ ನೂರಾರು ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಭಾಗವಹಿಸಿದರು.
ಮಂಡಲ ಪೂಜೆಯಲ್ಲಿ ಭಾಗವಹಿಸಿದ ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಶನಿವಾರ ರಾತ್ರಿ ಇರುಮುಡಿ ಇದ್ದುಇರುಮುಡಿ ಕಾರ್ಯಕ್ರಮ ನಿಮಿತ್ತ ದೇವಸ್ಥಾನವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದಲ್ಲಿನ ಅಯ್ಯಪ್ಪಸ್ವಾಮಿ, ಗಣೇಶ, ಸುಬ್ರಹ್ಮಣ್ಯ ಸ್ವಾಮಿ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಹೂಗಳಿಂದ ಅಲಂಕರಿಸಲಾಗಿತ್ತು.